ಅಡಿಲೇಡ್‌ನ‌ಲ್ಲೂ ಅಡಿಗೆ ಬಿದ್ದ ಪಾಕ್‌ಆಸ್ಟ್ರೇಲಿಯಕ್ಕೆ 4-1 ಸರಣಿ

Team Udayavani, Jan 27, 2017, 3:45 AM IST

26-NT-4.jpg

ಅಡಿಲೇಡ್‌: ಆರಂಭಿಕರಾದ ಡೇವಿಡ್‌ ವಾರ್ನರ್‌ ಮತ್ತು ಟ್ರ್ಯಾವಿಸ್‌ ಹೆಡ್‌ ಅವರ ಅಮೋಘ ಬ್ಯಾಟಿಂಗ್‌ ಸಾಹಸದಿಂದ ಪಾಕಿಸ್ಥಾನ ವಿರುದ್ಧದ ಅಂತಿಮ ಏಕದಿನ ಪಂದ್ಯವನ್ನು 57 ರನ್‌ ಅಂತರದಿಂದ ಗೆದ್ದ ವಿಶ್ವ ಚಾಂಪಿಯನ್‌ ಆಸ್ಟ್ರೇಲಿಯ ಸರಣಿಯನ್ನು 4-1ರಿಂದ ವಶಪಡಿಸಿಕೊಂಡಿದೆ.

ಗುರುವಾರ “ಅಡಿಲೇಡ್‌ ಓವಲ್‌’ನಲ್ಲಿ ಅಹರ್ನಿಶಿಯಾಗಿ ನಡೆದ ಮುಖಾಮುಖೀಯಲ್ಲಿ ಟಾಸ್‌ ಗೆದ್ದು ಬ್ಯಾಟಿಂಗಿಗೆ ಇಳಿದ ಸ್ಮಿತ್‌ ಬಳಗ 7 ವಿಕೆಟಿಗೆ 369 ರನ್‌ ರಾಶಿ ಹಾಕಿದರೆ, ಪಾಕಿಸ್ಥಾನ 49.1 ಓವರ್‌ಗಳಲ್ಲಿ 9 ವಿಕೆಟಿಗೆ 312 ರನ್‌ ಗಳಿಸಿತು. 10 ರನ್‌ ಮಾಡಿದ ವೇಳೆ ಗಾಯಾಳಾಗಿ ಕ್ರೀಸ್‌ ತೊರೆದ ಶೋಯಿಬ್‌ ಮಲಿಕ್‌ ಮತ್ತೆ ಆಡಲಿಳಿಯಲಿಲ್ಲ.

ವಾರ್ನರ್‌-ಹೆಡ್‌ 284 ರನ್‌ ದಾಖಲೆ
ಆಸೀಸ್‌ ಸರದಿಯ ವೈಶಿಷ್ಟವೆಂದರೆ ಎಡಗೈ ಆರಂಭಿಕರಾದ ಡೇವಿಡ್‌ ವಾರ್ನರ್‌-ಟ್ರ್ಯಾವಿಸ್‌ ಹೆಡ್‌ ಜೋಡಿಯ ಅಮೋಘ ಆಟ. ಇವರು 42ನೇ ಓವರ್‌ ತನಕ ಕ್ರೀಸಿಗೆ ಫೆವಿಕಾಲ್‌ ಹಾಕಿಕೊಂಡು ನಿಂತುಬಿಟ್ಟರು. ಇಬ್ಬರೂ ಶತಕ ಸಂಭ್ರಮ ಆಚರಿಸುವ ಜತೆಗೆ ಮೊದಲ ವಿಕೆಟಿಗೆ 284 ರನ್‌ ಸೂರೆಗೈದು ಆಸೀಸ್‌ ದಾಖಲೆಯನ್ನೂ ಸ್ಥಾಪಿಸಿದರು.

ವಾರ್ನರ್‌ ಗಳಿಕೆ 128 ಎಸೆತಗಳಿಂದ 179 ರನ್‌. ಅವರ ಈ ಜೀವನಶ್ರೇಷ್ಠ ಬ್ಯಾಟಿಂಗ್‌ ವೇಳೆ 19 ಬೌಂಡರಿ, 5 ಸಿಕ್ಸರ್‌ ಸಿಡಿಯಿತು. ಇದು ಈ ಸರಣಿಯಲ್ಲಿ ವಾರ್ನರ್‌ ಬಾರಿಸಿದ ಸತತ 2ನೇ ಶತಕ. ಜ. 22ರ ಸಿಡ್ನಿ ಪಂದ್ಯದಲ್ಲಿ 130 ರನ್‌ ಮಾಡಿದ್ದರು. ಇದರೊಂದಿಗೆ ಪ್ರಸಕ್ತ ಸರಣಿಯಲ್ಲಿ ವಾರ್ನರ್‌ 367 ರನ್‌ ಪೇರಿಸಿದಂತಾಯಿತು.

ಇದು ಸ್ಫೋಟಕ ಆರಂಭಿಕನ 13ನೇ ಶತಕ. ಕಳೆದ 11 ಇನ್ನಿಂಗ್ಸ್‌ಗಳಲ್ಲಿ ಬಾರಿಸಿದ 6ನೇ ಶತಕವೂ ಹೌದು. 2016ರ ಅ. 12ರಂದು ದಕ್ಷಿಣ ಆಫ್ರಿಕಾ ವಿರುದ್ಧದ ಕೇಪ್‌ಟೌನ್‌ ಪಂದ್ಯದಲ್ಲಿ 117 ರನ್‌ ಬಾರಿಸುವ ಮೂಲಕ ವಾರ್ನರ್‌ ಶತಕದ ಮೇಲೆ ಶತಕ ಪೇರಿಸುತ್ತ ಸಾಗಿದ್ದಾರೆ. 2016ರ ಜ. 23ರಿಂದೀಚೆ ವಾರ್ನರ್‌ ಹೊಡೆದ ಶತಕಗಳ ಸಂಖ್ಯೆ 9ಕ್ಕೆ ಏರಿದೆ. 

ಇನ್ನೊಂದೆಡೆ ಹೆಡ್‌ 20ನೇ ಪಂದ್ಯದಲ್ಲಿ ಮೊದಲ ಸೆಂಚುರಿ ಸಂಭ್ರಮವನ್ನಾ ಚರಿಸಿದರು. ಶತಕಕ್ಕೆ 121 ಎಸೆತ ಎದುರಿಸಿದ ಹೆಡ್‌, 137 ಎಸೆತಗಳಿಂದ 128 ರನ್‌ ಹೊಡೆದರು. ಬೀಸಿದ್ದು 9 ಬೌಂಡರಿ ಹಾಗೂ 3 ಸಿಕ್ಸರ್‌. ತಂಡದ ಒಟ್ಟು ಮೊತ್ತದಲ್ಲಿ 307 ರನ್‌ ಇವರಿಬ್ಬರ ಬ್ಯಾಟಿನಿಂದಲೇ ಹರಿದು ಬಂದಿತ್ತು! ಉಳಿದ 7 ಮಂದಿ ಸೇರಿ ಗಳಿಸಿದ್ದು ಕೇವಲ 51 ರನ್‌ ಮಾತ್ರ. ಇವರಲ್ಲಿ ಔಟಾಗದೆ 18 ರನ್‌ ಮಾಡಿದ ಫಾಕ್ನರ್‌ ಅವರದೇ ಹೆಚ್ಚಿನ ಗಳಿಕೆ. .

ಬಾಬರ್‌ ಆಜಂ ನೂರರಾಟ
ಪಾಕಿಸ್ಥಾನ ಪರಾಭವಗೊಂಡರೂ ಬಾಬರ್‌ ಆಜಂ ಅವರ ಶತಕದಾಟ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು. ಆಜಂ 109 ಎಸೆತಗಳಿಂದ ಸರಿಯಾಗಿ 100 ರನ್‌ ಮಾಡಿ ಔಟಾದರು (7 ಬೌಂಡರಿ. 1 ಸಿಕ್ಸರ್‌). ಇದು ಆಸ್ಟ್ರೇಲಿಯ ವಿರುದ್ಧ ಅವರದೇ ನೆಲದಲ್ಲಿ ಪಾಕ್‌ ಆಟಗಾರನೊಬ್ಬ 1981ರ ಬಳಿಕ ಬಾರಿಸಿದ ಮೊದಲ ಶತಕ. 36 ವರ್ಷಗಳ ಹಿಂದಿನ ಸಿಡ್ನಿ ಪಂದ್ಯದಲ್ಲಿ ಜಹೀರ್‌ ಅಬ್ಟಾಸ್‌ 108 ರನ್‌ ಹೊಡೆದಿದ್ದರು.

ಟಾಪ್ ನ್ಯೂಸ್

Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ

Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ

ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್‌: ವಿ.ನಾರಾಯಣನ್‌

ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್‌: ವಿ.ನಾರಾಯಣನ್‌

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

naxal-file

Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್‌ ನಿಶ್ಶಬ್ದ

purushotham-bilimale

Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!

Naxals-CM-Office

Naxals Surrender: ಶರಣಾದ ನಕ್ಸಲರ ಪ್ರಕರಣಗಳಿಗೆ ತ್ವರಿತ ನ್ಯಾಯಾಲಯ: ಸಿಎಂ ಸಿದ್ದರಾಮಯ್ಯ

Sathish-jarakhoili

Dinner Politics: ಊಟ, ಅಜೆಂಡಾ ನಮ್ಮದು, ಬೇರೆಯವರಿಗೆ ಆತಂಕ ಏಕೆ?: ಸತೀಶ್‌ ಜಾರಕಿಹೊಳಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vijay Hazare Trophy: ಏಕದಿನ ಪ್ರಸಿದ್ಧ್ ಕೃಷ್ಣ ,ಪಡಿಕ್ಕಲ್‌ ಆಟ

Vijay Hazare Trophy: ಏಕದಿನ ಪ್ರಸಿದ್ಧ್ ಕೃಷ್ಣ ,ಪಡಿಕ್ಕಲ್‌ ಆಟ

Sam Konstas: ಇದೇ ಪರಿಸ್ಥಿತಿ ಮರುಕಳಿಸಿದರೆ ಸುಮ್ಮನಿರುವೆ

Sam Konstas: ಇದೇ ಪರಿಸ್ಥಿತಿ ಮರುಕಳಿಸಿದರೆ ಸುಮ್ಮನಿರುವೆ

ICC ಚಾಂಪಿಯನ್ಸ್‌ ಟ್ರೋಫಿ ಪಾಕ್‌ ಕ್ರೀಡಾಂಗಣಗಳೇ ಸಜ್ಜಾಗಿಲ್ಲ !

ICC ಚಾಂಪಿಯನ್ಸ್‌ ಟ್ರೋಫಿ ಪಾಕ್‌ ಕ್ರೀಡಾಂಗಣಗಳೇ ಸಜ್ಜಾಗಿಲ್ಲ !

ICC ಪಿಚ್‌ ರೇಟಿಂಗ್‌: ಸಿಡ್ನಿ ತೃಪ್ತಿಕರ, ಉಳಿದವು ಅತ್ಯುತ್ತಮ

ICC ಪಿಚ್‌ ರೇಟಿಂಗ್‌: ಸಿಡ್ನಿ ತೃಪ್ತಿಕರ, ಉಳಿದವು ಅತ್ಯುತ್ತಮ

ICC Bowling Ranking: ಐಸಿಸಿ ಬೌಲಿಂಗ್‌ ರ್‍ಯಾಂಕಿಂಗ್‌… ಬುಮ್ರಾ ಅಗ್ರಸ್ಥಾನ ಗಟ್ಟಿ

ICC Bowling Ranking: ಐಸಿಸಿ ಬೌಲಿಂಗ್‌ ರ್‍ಯಾಂಕಿಂಗ್‌… ಬುಮ್ರಾ ಅಗ್ರಸ್ಥಾನ ಗಟ್ಟಿ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ

Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ

ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್‌: ವಿ.ನಾರಾಯಣನ್‌

ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್‌: ವಿ.ನಾರಾಯಣನ್‌

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

naxal-file

Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್‌ ನಿಶ್ಶಬ್ದ

purushotham-bilimale

Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.