Pakistan; 153 ಮಿಲಿಯನ್ ಹಣ, ಚಿನ್ನದ ಕಿರೀಟ…: ಚಿನ್ನ ಗೆದ್ದ ನದೀಂಗೆ ಏನೆಲ್ಲಾ ಸಿಕ್ತು?
Team Udayavani, Aug 10, 2024, 11:32 AM IST
ಇಸ್ಲಮಾಬಾದ್: ಪ್ಯಾರಿಸ್ ಒಲಿಂಪಿಕ್ಸ್ 2024ರ (Paris Olympics 2024) ಜಾವೆಲಿನ್ ಥ್ರೋ (Javelin Throw) ವಿಭಾಗದಲ್ಲಿ ಒಲಿಂಪಿಕ್ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದ ಪಾಕಿಸ್ತಾನದ ಅರ್ಶದ್ ನದೀಂ (Arshad Nadeem) ಇದೀಗ ಪಾಕ್ ನಲ್ಲಿ ಮನೆಮಾತಾಗಿದ್ದಾರೆ.
ನದೀಂ ಎಸೆದ 92.97 ಮೀ ಜಾವೆಲಿನ್ ಪಾಕಿಸ್ತಾನಕ್ಕೆ 32 ವರ್ಷಗಳ ನಂತರ ಮೊದಲ ಒಲಿಂಪಿಕ್ ಪದಕವನ್ನು ಗೆದ್ದುಕೊಟ್ಟಿತು. ಐತಿಹಾಸಿಕ ಗೆಲುವಿನ ನಂತರ, ನದೀಂಗೆ ಪ್ರಶಸ್ತಿ ಸಮ್ಮಾನಗಳು ಹರಿದು ಬರುತ್ತಿದೆ. ಪಾಕಿಸ್ತಾನದ ಮಂತ್ರಿಗಳು ಮತ್ತು ಗಣ್ಯರು ಈಗಾಗಲೇ ಹಲವಾರು ನಗದು ಬಹುಮಾನಗಳನ್ನು ಘೋಷಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.
ನದೀಂ ಅವರು ಈಗ PKR 150 ಮಿಲಿಯನ್ ಗಿಂತಲೂ ಹೆಚ್ಚು (INR 4.5 ಕೋಟಿ ಮತ್ತು USD 538,000) ಹೆಚ್ಚಿನ ಮೊತ್ತವನ್ನು ಸ್ವೀಕರಿಸಲು ಸಿದ್ಧರಾಗಿದ್ದಾರೆ.
ಈ ಮೊತ್ತದಲ್ಲಿ, ಪಾಕಿಸ್ತಾನದ ಪಂಜಾಬ್ ರಾಜ್ಯದ ಮುಖ್ಯಮಂತ್ರಿ ಮರ್ಯಮ್ ನವಾಜ್ ಅವರು PKR 100 ಮಿಲಿಯನ್ ಬಹುಮಾನವನ್ನು ಘೋಷಿಸಿದ್ದಾರೆ ಎಂದು ಪಾಕಿಸ್ತಾನ ಮೂಲದ ಸುದ್ದಿ ಸಂಸ್ಥೆ ಡಾನ್ ವರದಿ ಮಾಡಿದೆ. ಪಂಜಾಬ್ ಗವರ್ನರ್ ಸರ್ದಾರ್ ಸಲೀಮ್ ಹೈದರ್ ಖಾನ್ PKR 2 ಮಿಲಿಯನ್ ಬಹುಮಾನವನ್ನು ಘೋಷಿಸಿದ್ದಾರೆ.
ಸಿಂಧ್ ನ ಮುಖ್ಯಮಂತ್ರಿಯಿಂದ PKR 50 ಮಿಲಿಯನ್ ಮೊತ್ತ ನದೀಂಗೆ ನೀಡಲಾಗುತ್ತದೆ. ಸಿಂಧ್ ಗವರ್ನರ್ ಕಮ್ರಾನ್ ಟೆಸ್ಸೋರಿ ಅವರು 1 ಮಿಲಿಯನ್ ಪಿಕೆಆರ್ ಘೋಷಿಸಿದ್ದಾರೆ.
ಇದಲ್ಲದೆ ಪಾಕಿಸ್ತಾನದ ಖ್ಯಾತ ಗಾಯಕ ಅಲಿ ಜಫರ್ ಅವರು ಅರ್ಶದ್ ನದೀಂ ಅವರಿಗೆ 1 ಮಿಲಿಯನ್ ಪಿಕೆಆರ್ ನೀಡುವುದಾಗಿ ಘೋಷಿಸಿದ್ದಾರೆ. ಇದೇ ವೇಳೆ ಕ್ರಿಕೆಟರ್ ಅಹಮದ್ ಶೆಹಜಾದ್ ಅವರು ಇಷ್ಟೇ ಮೊತ್ತವನ್ನು ನೀಡುವುದಾಗಿ ಹೇಳಿದ್ದಾರೆ.
ಇದೇ ವೇಳೆ ಅರ್ಶದ್ ನದೀಂ ಅವರಿಗೆ ಪಾಕಿಸ್ತಾನ ಅತ್ಯುನ್ನತ ನಾಗರಿಕ ಪುರಸ್ಕಾರ ನೀಡಲು ಸಂಸತ್ ನಿರ್ಣಯ ಮಾಡಿದೆ ಎಂದು ರೇಡಿಯೊ ಪಾಕಿಸ್ತಾನ ವರದಿ ಮಾಡಿದೆ. ಸೆನೆಟ್‌ನ ಉಪಾಧ್ಯಕ್ಷ ಸೈದಲ್ ಖಾನ್ ನಾಸರ್ ಅವರು ಅರ್ಷದ್ ಪಾಕಿಸ್ತಾನಕ್ಕೆ ಮರಳಿದ ನಂತರ ಗೌರವ ಭೋಜನವನ್ನು ಏರ್ಪಡಿಸುತ್ತಾರೆ ಎಂದು ಹೇಳಿದ್ದಾರೆ.
ಸಿಂಧ್ ಸರ್ಕಾರದ ವಕ್ತಾರ ಮತ್ತು ಸುಕ್ಕೂರ್ ಮೇಯರ್ ಬ್ಯಾರಿಸ್ಟರ್ ಇಸ್ಲಾಂ ಶೇಖ್ ಅವರು ಪಾಕಿಸ್ತಾನಕ್ಕೆ ಆಗಮಿಸಿದ ನಂತರ ನದೀಂ ಅವರಿಗೆ ಚಿನ್ನದ ಕಿರೀಟವನ್ನು ನೀಡಿ ಗೌರವಿಸಲಾಗುವುದು ಎಂದು ಜಿಯೋ ನ್ಯೂಸ್ ವರದಿ ಮಾಡಿದೆ. ಸುಕ್ಕೂರಿನಲ್ಲಿ ಹೊಸ ಕ್ರೀಡಾಂಗಣಕ್ಕೆ ನದೀಂ ಹೆಸರಿಡಲಾಗುವುದು ಎಂದು ಅವರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
IND-W vs WI: ವನಿತೆಯರ ಏಕದಿನ ಮುಖಾಮುಖಿ
Ahmed Shehzad: ಭಾರತ-ಪಾಕ್ ಗಡಿಯಲ್ಲಿ ಕ್ರಿಕೆಟ್ ಸ್ಟೇಡಿಯಂಗೆ ಸಲಹೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.