ಲಾಹೋರ್‌ನಲ್ಲೂ ಪಾಕ್ ಪರಾಕ್ರಮ
Team Udayavani, Oct 31, 2017, 6:25 AM IST
ಲಾಹೋರ್: ಎಂಟು ವರ್ಷಗಳ ಹಿಂದೆ ಕ್ರಿಕೆಟ್ ದುರಂತವೊಂದಕ್ಕೆ ಸಾಕ್ಷಿಯಾದ ಲಾಹೋರ್‌ನಲ್ಲಿ ನಿರ್ವಿಘ್ನವಾಗಿ ಟಿ20 ಪಂದ್ಯವೊಂದು ನಡೆದಿದೆ. ಆದರೆ ಅಂದು ಭಯೋತ್ಪಾದಕ ದಾಳಿಗೊಳಗಾದ ಶ್ರೀಲಂಕಾ ತಂಡ ಮಾತ್ರ ಈ ಪಂದ್ಯವನ್ನೂ ಕಳೆದುಕೊಂಡು 3-0 ಕ್ಲೀನ್ ಸ್ವೀಪ್ ದುರಂತಕ್ಕೆ ಸಿಲುಕಿದೆ.
ಇಲ್ಲಿನ “ಗದ್ದಾಫಿ ಸ್ಟೇಡಿಯಂ’ನಲ್ಲಿ ರವಿವಾರ ರಾತ್ರಿ ನಡೆದ ಪಂದ್ಯದಲ್ಲಿ ಪಾಕಿಸ್ಥಾನ 36 ರನ್ನುಗಳ ಜಯ ಸಾಧಿಸಿತು. ತವರಿನ ಅಪರೂಪದ ಅಂತಾರಾಷ್ಟ್ರೀಯ ಪಂದ್ಯವನ್ನು ಕಾಣಲು ಕಿಕ್ಕಿರಿದು ನೆರೆದಿದ್ದ ವೀಕ್ಷಕರ ಸಮ್ಮುಖದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ಥಾನ 3 ವಿಕೆಟಿಗೆ 180 ರನ್ ಪೇರಿಸಿ ಸವಾಲೊಡ್ಡಿದರೆ, ಶ್ರೀಲಂಕಾ 9ಕ್ಕೆ 144 ರನ್ ಗಳಿಸಿ ಶರಣಾಯಿತು. ಸರಣಿಯ ಮೊದಲೆರಡು ಪಂದ್ಯ ಅಬುದಾಭಿಯಲ್ಲಿ ನಡೆದಿತ್ತು. 2 ಪಂದ್ಯಗಳ ಟೆಸ್ಟ್ ಸರಣಿಯನ್ನು 2-0 ಅಂತರದಿಂದ ವಶಪಡಿಸಿಕೊಂಡ ಶ್ರೀಲಂಕಾ ಅನಂತರ ಸತತವಾಗಿ ಸೋಲನ್ನೇ ಕಾಣುತ್ತ ಬಂದಿತ್ತು. ಇದಕ್ಕೂ ಹಿಂದಿನ ಏಕದಿನ ಸರಣಿಯನ್ನೂ ಪಾಕ್ 5-0 ಅಂತರದಿಂದ ಗೆದ್ದಿತ್ತು.
ಮಲಿಕ್ ಮಿಂಚಿನ ಆಟ
ಪಾಕಿಸ್ಥಾನದ ದೊಡ್ಡ ಮೊತ್ತಕ್ಕೆ ಕಾರಣವಾದದ್ದು ಶೋಯಿಬ್ ಮಲಿಕ್ ಅವರ ಬಿರುಸಿನ ಬ್ಯಾಟಿಂಗ್. 4ನೇ ಕ್ರಮಾಂಕದಲ್ಲಿ ಆಡಲಿಳಿದ ಮಲಿಕ್ ಕೇವಲ 24 ಎಸೆತಗಳಿಂದ 51 ರನ್ ಸಿಡಿಸಿದರು (5 ಬೌಂಡರಿ, 2 ಸಿಕ್ಸರ್). ಫಕರ್ ಜಮಾನ್ (31) ಮತ್ತು ಉಮರ್ ಅಮಿನ್ (45) ಮೊದಲ ವಿಕೆಟಿಗೆ 8 ಓವರ್‌ಗಳಿಂದ 57 ರನ್ ಪೇರಿಸಿದರು. ಬಾಬರ್ ಆಜಂ ಗಳಿಕೆ ಅಜೇಯ 34 ರನ್. ಪಾಕ್ ಬ್ಯಾಟಿಂಗಿಗೆ ಕಡಿವಾಣ ಹಾಕಲು ಲಂಕಾ 8 ಮಂದಿಯನ್ನು ದಾಳಿಗಿಳಿಸಿತಾದರೂ ಯಶಸ್ಸು ಕಾಣಲಿಲ್ಲ.
4 ಓವರ್ ಆಗುವಷ್ಟರಲ್ಲಿ 21 ರನ್ನಿಗೆ 3 ವಿಕೆಟ್ ಉದುರಿಸಿಕೊಂಡ ಶ್ರೀಲಂಕಾವನ್ನು ದಸುನ್ ಶಣಕ (51) ಮೇಲೆತ್ತುವ ಪ್ರಯತ್ನ ಮಾಡಿದರೂ ಇವರದು ಏಕಾಂಗಿ ಹೋರಾಟವೆನಿಸಿತು. ಚತುರಂಗ ಡಿ ಸಿಲ್ವ 21 ರನ್ ಮಾಡಿದರು. ವೇಗಿ ಮೊಹಮ್ಮದ್ ಆಮಿರ್ 13 ರನ್ನಿಗೆ 4 ವಿಕೆಟ್ ಹಾರಿಸಿ ಘಾತಕವಾಗಿ ಪರಿಣಮಿಸಿದರು.
ಪಂದ್ಯಶ್ರೇಷ್ಠ, ಸರಣಿಶ್ರೇಷ್ಠ ಪ್ರಶಸ್ತಿಗಳೆರಡು ಶೋಯಿಬ್ ಮಲಿಕ್ ಪಾಲಾದವು.
ಸಂಕ್ಷಿಪ್ತ ಸ್ಕೋರ್: ಪಾಕಿಸ್ಥಾನ-3 ವಿಕೆಟಿಗೆ 180 (ಮಲಿಕ್ 51, ಅಮಿನ್ 45, ಬಾಬರ್ 34, ಮುನವೀರ 26ಕ್ಕೆ 1). ಶ್ರೀಲಂಕಾ-9 ವಿಕೆಟಿಗೆ 144 (ಶಣಕ 54, ಚತುರಂಗ 21, ಆಮಿರ್ 13ಕ್ಕೆ 4, ಅಶ್ರಫ್ 19ಕ್ಕೆ 2).
ಪಂದ್ಯಶ್ರೇಷ್ಠ, ಸರಣಿಶ್ರೇಷ್ಠ: ಶೋಯಿಬ್ ಮಲಿಕ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chess player; ಕುಟುಂಬ ಸಮೇತ ಮೋದಿ ಭೇಟಿಯಾದ ಕೊನೆರು ಹಂಪಿ
Vijay Hazare; ವಾಸುಕಿ,ಗೋಪಾಲ್ ಬೊಂಬಾಟ್ ಬೌಲಿಂಗ್; ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್ ಪರದಾಟ
Test; ಸಿಡ್ನಿ ಸಂಘರ್ಷಕ್ಕೆ ಭಾರತ ಸಿದ್ಧ :ರೋಹಿತ್-ಗಂಭೀರ್ ಮನಸ್ತಾಪ ತೀವ್ರ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.