Pakistan Cricket: ಒಂದೇ ಸರಣಿಯ ಬಳಿಕ ನಾಯಕತ್ವ ಕಳೆದಕೊಂಡ ಶಾಹೀನ್ ಅಫ್ರಿದಿ ಹೇಳಿದ್ದೇನು?
Team Udayavani, Apr 1, 2024, 11:11 AM IST
ಇಸ್ಲಮಾಬಾದ್: ಪಾಕಿಸ್ತಾನ ಪುರುಷರ ಕ್ರಿಕೆಟ್ ತಂಡದಲ್ಲಿ ಮಹತ್ತರ ಬದಲಾವಣೆಯಾಗಿದೆ. ಟಿ20 ತಂಡದ ನಾಯಕನಾಗಿದ್ದ ಶಾಹೀನ್ ಅಫ್ರಿದಿ ಅವರನ್ನು ಕೆಳಗಿಳಿಸಿ ಬಾಬರ್ ಅಜಂ ಅವರನ್ನು ನಾಯಕನ ಸ್ಥಾನಕ್ಕೆ ಮತ್ತೆ ತರಲಾಗಿದೆ. ಪಾಕಿಸ್ತಾನ ಮಂಡಳಿಯ ಬದಲಾವಣೆಯ ಬಳಿಕ ಇದೀಗ ನಾಯಕತ್ವ ಬದಲಾವಣೆಯಾಗಿದೆ.
ಟಿ20 ವಿಶ್ವಕಪ್ ಗೆ ಕೆಲವೇ ತಿಂಗಳು ಬಾಕಿ ಇರುವಂತೆ ಈ ಬದಲಾವಣೆ ಮಾಡಲಾಗಿದೆ. ನ್ಯೂಜಿಲೆಂಡ್ ವಿರುದ್ಧ ಕೇವಲ ಒಂದು ಟಿ20 ಸರಣಿಯಲ್ಲಿ ಶಾಹೀನ್ ಪಾಕಿಸ್ತಾನದ ನಾಯಕತ್ವ ವಹಿಸಿದ್ದರು. ಅಲ್ಲಿ ತಂಡವು 4-1 ಅಂತರದಿಂದ ಸೋತಿತ್ತು. ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಪತ್ರಿಕಾ ಪ್ರಕಟಣೆಯ ಮೂಲಕ ಶಾಹೀನ್ ತನ್ನ ಮೌನವನ್ನು ಮುರಿದು ಭಾನುವಾರ ಪಾಕಿಸ್ತಾನದ ನಾಯಕನಾಗಿ ಮರು ಆಯ್ಕೆಯಾದ ಬಾಬರ್ ಅಜಂ ಅವರನ್ನು ಬೆಂಬಲಿಸುವುದು ತನ್ನ ಕರ್ತವ್ಯ ಎಂದು ಹೇಳಿದರು.
ತಾನು ಮತ್ತು ಬಾಬರ್ ಪಾಕಿಸ್ತಾನವನ್ನು ವಿಶ್ವದ ಅತ್ಯುತ್ತಮ ತಂಡವನ್ನಾಗಿ ಮಾಡುವ ಒಂದೇ ಗುರಿಯತ್ತ ಕೆಲಸ ಮಾಡುತ್ತಿದ್ದೇವೆ ಎಂದು ಶಾಹೀನ್ ಹೇಳಿದ್ದಾರೆ. ಅಲ್ಪಾವಧಿಯಲ್ಲಿ ಪಾಕಿಸ್ತಾನದ ನಾಯಕನಾಗಿರುವುದು ನನಗೆ ಗೌರವವಾಗಿದೆ. ಮತ್ತೊಮ್ಮೆ ಅವರ ನಾಯಕತ್ವದಲ್ಲಿ ಆಡಲು ಎದುರು ನೋಡುತ್ತಿದ್ದೇನೆ ಎಂದು ಶಾಹೀನ್ ಹೇಳಿದರು.
ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್ 2023 ರಲ್ಲಿ ರಾಷ್ಟ್ರೀಯ ತಂಡದ ಕಳಪೆ ಪ್ರದರ್ಶನದ ನಂತರ ಪಿಸಿಬಿ ಎಲ್ಲಾ ಸ್ವರೂಪಗಳಲ್ಲಿ ಬಾಬರ್ ಅವರನ್ನು ವಜಾಗೊಳಿಸಿದ ನಂತರ ಶಾಹೀನ್ ಅವರನ್ನು ಪಾಕಿಸ್ತಾನದ ನಾಯಕರನ್ನಾಗಿ ಮಾಡಲಾಗಿತ್ತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.