World Cup ; ಹೈದರಾಬಾದ್ ನಲ್ಲಿ ‘ಅನಿರೀಕ್ಷಿತ’ ಸ್ವಾಗತ ಕಂಡು ಪಾಕ್ ತಂಡ ಫುಲ್ ಖುಷ್
ಏಳು ವರ್ಷಗಳ ನಂತರ ಭಾರತಕ್ಕೆ ಬಂದ ಪಾಕಿಸ್ಥಾನ ತಂಡ...
Team Udayavani, Sep 28, 2023, 5:01 PM IST
ಹೈದರಾಬಾದ್ : ಏಕದಿನ ವಿಶ್ವಕಪ್ ಆಡಲು ಭಾರತಕ್ಕೆ ಬಂದ ಪಾಕಿಸ್ಥಾನ ತಂಡಕ್ಕೆ ಪ್ರೀತಿ ಪೂರ್ವಕ ಭವ್ಯ ಸ್ವಾಗತ ನೀಡಲಾಯಿತು. ಈ ವಿಚಾರ ಸಾಮಾಜಿಕ ತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ವೀಸಾಗೆ ಸಂಬಂಧಿಸಿ ಸ್ವಲ್ಪ ಬಿಕ್ಕಟ್ಟಿನ ನಂತರ ಪಾಕಿಸ್ಥಾನ ಕ್ರಿಕೆಟ್ ತಂಡ ಹೈದರಾಬಾದ್‌ಗೆ ಬಂದು ತಲುಪಿದೆ.
ನ್ಯೂಜಿಲ್ಯಾಂಡ್ ವಿರುದ್ಧದ ಅಭ್ಯಾಸ ಪಂದ್ಯಕ್ಕೆ ಮುಂಚಿತವಾಗಿ ಹೈದರಾಬಾದ್ ಗೆ ಬಾಬರ್ ಅಜಮ್ ಅವರ ತಂಡ ಆಗಮಿಸಿದಾಗ ಭವ್ಯವಾದ ಸ್ವಾಗತವನ್ನು ಪಡೆದರು. ವಿಶ್ವಕಪ್ ಪದ್ಯಾವಳಿ ಆರಂಭಕ್ಕೂ ಮುನ್ನ ಪಾಕಿಸ್ಥಾನ ತನ್ನ ಅಭ್ಯಾಸ ಪಂದ್ಯವನ್ನು ನ್ಯೂಜಿಲ್ಯಾಂಡ್ ವಿರುದ್ಧ ಸೆ 29 ರಂದು ಹೈದರಾಬಾದ್‌ನಲ್ಲಿ ಮುಚ್ಚಿದ ಬಾಗಿಲುಗಳ ನಡುವೆ ಆಡಲಿದೆ. ಕೆಲ ಕಾರಣಗಳಿಂದ ಭದ್ರತೆ ನೀಡಲು ಪೊಲೀಸರಿಗೆ ಸಾಧ್ಯವಾಗದ ಕಾರಣ ಪಂದ್ಯಕ್ಕೆ ಪ್ರೇಕ್ಷಕರಿಗ್ಯಾರಿಗೂ ಅವಕಾಶ ನೀಡಲಾಗುತ್ತಿಲ್ಲ.
Babar Azam gets a warm welcome in Hyderabad. pic.twitter.com/AZBCLPToH8
— Mufaddal Vohra (@mufaddal_vohra) September 27, 2023
ಅಕ್ಟೋಬರ್ 6 ರಂದು ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ ವಿಶ್ವಕಪ್ ಅಭಿಯಾನವನ್ನು ಪಾಕಿಸ್ಥಾನ ಆರಂಭಿಸಲಿದೆ.
“ಜನರು ಮೈದಾನಕ್ಕೆ ಬರುತ್ತಾರೆ ಎಂದು ನಾವು ನಿರೀಕ್ಷಿಸಿದ್ದೆವು, ಆದರೆ ಅಭಿಮಾನಿಗಳಿಂದ ವಿಮಾನ ನಿಲ್ದಾಣದಲ್ಲಿ ಅದ್ದೂರಿ ಸ್ವಾಗತ ನಿರೀಕ್ಷಿಸಲಿರಲಿಲ್ಲ. ಅವರು ತಂಡದ ಸ್ವಾಗತಕ್ಕಾಗಿ ಅಣಿಯಾಗಿದ್ದರು. ಅದನ್ನು ನೋಡುವುದೇ ಅದ್ಭುತವಾಗಿತ್ತು.ಆಟಗಾರರು ಸಹ ಅದನ್ನು ಕಂಡು ಭಾವುಕರಾದರು ”ಎಂದು ಪಾಕ್ ತಂಡದ ಮೂಲವು ಪಿಟಿಐಗೆ ತಿಳಿಸಿದೆ.
“ಜಬರ್ದಸ್ತ್. ಮಜಾ ಆ ಗಯಾ,” ಎಂದು ಪಾಕ್ ಪ್ರಧಾನ ವೇಗಿ ಹ್ಯಾರಿಸ್ ರೌಫ್ ಅವರು ಹೈದರಾಬಾದ್ ಕ್ರಿಕೆಟ್ ಅಸೋಸಿಯೇಶನ್ ಮೈದಾನಕ್ಕೆ ಕಾಲಿಟ್ಟಾಗ ಪ್ರತಿಕ್ರಿಯಿಸಿದರು.
ಬಾಬರ್ ಮತ್ತು ಶಾಹೀನ್ ಅಫ್ರಿದಿ ಅವರು ಬಂಜಾರಾ ಹಿಲ್ಸ್‌ನಲ್ಲಿರುವ ಹೆಚ್ಚು ಕಾವಲು ಹೊಂದಿರುವ ತಂಡದ ಹೋಟೆಲ್‌ಗೆ ಆಗಮಿಸಿದ್ದು, ಅವರ ಇನ್‌ಸ್ಟಾ ಸ್ಟೋರಿಯಲ್ಲಿ, “ಹೈದರಾಬಾದ್‌ನಲ್ಲಿರುವ ಪ್ರೀತಿ ಮತ್ತು ಬೆಂಬಲದಲ್ಲಿ ಮುಳುಗಿದ್ದೇವೆ” ಎಂದು ಬಾಬರ್ ಬರೆದಿದ್ದಾರೆ. ಶಾಹೀನ್ “ಇಲ್ಲಿಯವರೆಗೆ ಕಂಡ ಉತ್ತಮ ಸ್ವಾಗತ” ಎಂದು ಬರೆದಿದ್ದಾರೆ.
“ದುರದೃಷ್ಟವಶಾತ್, ನಾವು ನಮ್ಮ ದೇಶದ ಅಭಿಮಾನಿಗಳನ್ನು ಕಳೆದುಕೊಳ್ಳುತ್ತೇವೆ. ಆದರೆ, ನನಗೆ ತಿಳಿದಿರುವಂತೆ, ಟಿಕೆಟ್ ಗಳೆಲ್ಲವೂ ಮಾರಾಟವಾಗಿವೆ, ಆದ್ದರಿಂದ ನಾವು ಕಿಕ್ಕಿರಿದ ಕ್ರೀಡಾಂಗಣಗಳಲ್ಲಿ ಆಡುತ್ತೇವೆ. ನಮ್ಮ ಅಭಿಮಾನಿಗಳು ಅಲ್ಲಿಲ್ಲದಿದ್ದರೂ, ಅವರು ಆಟವನ್ನು ಆನಂದ ಪಡುತ್ತಾರೆ ಎಂದು ನನಗೆ ತಿಳಿದಿದೆ. ಸೋಷಿಯಲ್ ಮೀಡಿಯಾದಲ್ಲಿ ಪ್ರೀತಿ ಕಂಡುಬರುತ್ತಿದೆ, ಭಾರತದಲ್ಲಿನ ಅಭಿಮಾನಿಗಳು ತಮ್ಮ ಪ್ರೀತಿಯನ್ನು ತೋರಿಸುತ್ತಾರೆ ಎಂದು ನಾನು ಕೇಳಿದ್ದೇನೆ, ಆದರೂ ನಾನು ಅದನ್ನು ಅನುಭವಿಸಿಲ್ಲ ಆದರೆ ನಾನು ಭಾರತದಲ್ಲಿಯೂ ಆಡಲು ಉತ್ಸುಕನಾಗಿದ್ದೇನೆ” ಎಂದು ಬಾಬರ್ ಪ್ರತಿಕ್ರಿಯೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
IND-W vs WI: ವನಿತೆಯರ ಏಕದಿನ ಮುಖಾಮುಖಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.