ಪಾಕ್ ಹಾಕಿ ಆಟಗಾರ ಮನ್ಸೂರ್ ಅಹ್ಮದ್ ನಿಧನ
Team Udayavani, May 13, 2018, 6:35 AM IST
ಕರಾಚಿ: ಪಾಕಿಸ್ಥಾನದ ಖ್ಯಾತ ಹಾಕಿ ಆಟಗಾರ ಮನ್ಸೂರ್ ಅಹ್ಮದ್ ನಿಧನರಾಗಿದ್ದಾರೆ. ಅವರಿಗೆ 49 ವರ್ಷವಾಗಿತ್ತು. ಅವರು ದೀರ್ಘಕಾಲಿಕ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು.
ಕೆಲವು ದಿನಗಳ ಹಿಂದೆ “ತಾನು ಭಾರತಕ್ಕೆ ಆಗಮಿಸಿ ಹೃದಯ ಕಸಿ ಮಾಡಿಕೊಳ್ಳುತ್ತೇನೆ. ನನಗೆ ಸಹಾಯ ಮಾಡಿ’ ಎಂದು ಮನ್ಸೂರ್ ಅಹ್ಮದ್ ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿದ್ದರು. ಭಾರತಕ್ಕೆ ಆಗಮಿಸಲು ಮನ್ಸೂರ್‌ಗೆ ಕೇಂದ್ರ ಸರಕಾರ ಒಪ್ಪಿಗೆ ನೀಡಿದರೆ ಉಚಿತವಾಗಿ ಹೃದಯ ಕಸಿ ಮಾಡಿಕೊಡುವುದಾಗಿ ಫೋರ್ಟಿಸ್ ಆಸ್ಪತ್ರೆ ಹೇಳಿತ್ತು. ಆದರೆ ಮನ್ಸೂರ್ ಅಹ್ಮದ್ ಅವರ ಈ ಕನಸು ಕೂಡ ಈಡೇರಲಿಲ್ಲ. ಚಿಕಿತ್ಸೆ ಪಡೆದುಕೊಳ್ಳುವ ಪ್ರಯತ್ನದಲ್ಲಿದ್ದ ವೇಳೆಯೇ ಅವರು ಇಹಲೋಕ ತ್ಯಜಿಸಿದ್ದಾರೆ.
ಮನ್ಸೂರ್ ಅಹ್ಮದ್ 1994 ವಿಶ್ವಕಪ್ ಹಾಕಿ ಕೂಟದಲ್ಲಿ ಪಾಕಿಸ್ಥಾನ ತಂಡದ ಗೋಲ್‌ಕೀಪರ್ ಆಗಿದ್ದರು. ಪಾಕ್ ಪರ 1986-2000 ಅವಧಿಯಲ್ಲಿ ಒಟ್ಟು 338 ಪಂದ್ಯವನ್ನು ಆಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Discipline: ಬದುಕಿನಲ್ಲಿ ಶಿಸ್ತಿರಲಿ
Chikkamagaluru: ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಭಸ್ಮವಾದ ಗುಡಿಸಲು
Eye Surgeries: ವೈದ್ಯಕೀಯ ಪದವಿ ಪೂರ್ಣಗೊಳಿಸದೇ 44 ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ
Perth test: ಜೈಸ್ವಾಲ್-ರಾಹುಲ್ ಅಜೇಯ ಆಟ; ಪರ್ತ್ ನಲ್ಲಿ ಭಾರತದ ಮೇಲಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.