ಪಾಕಿಸ್ಥಾನಕ್ಕೆ 2-1 ಏಕದಿನ ಸರಣಿ
Team Udayavani, Apr 13, 2017, 11:09 AM IST
ಗಯಾನ: ಶೋಯಿಬ್ ಮಲಿಕ್ ಅವರ ಆಕರ್ಷಕ ಶತಕ ಮತ್ತು ಅವರು ಮೊಹಮ್ಮದ್ ಹಫೀಜ್ ಜತೆ ಮೂರನೇ ವಿಕೆಟಿಗೆ ಪೇರಿಸಿದ ಶತಕದ ಜತೆಯಾಟದಿಂದಾಗಿ ಪಾಕಿಸ್ಥಾನ ತಂಡವು ನಿರ್ಣಾಯಕ ಮೂರನೇ ಪಂದ್ಯದಲ್ಲಿ ವೆಸ್ಟ್‌ಇಂಡೀಸ್ ತಂಡವನ್ನು ಆರು ವಿಕೆಟ್‌ಗಳಿಂದ ಸೋಲಿಸಿ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿದೆ.
ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ವೆಸ್ಟ್‌ಇಂಡೀಸ್ ತಂಡವು ಶಾಯಿ ಹೋಪ್ ಮತ್ತು ಜಾಸನ್ ಮೊಹಮ್ಮದ್ ಅವರ ಅರ್ಧಶತಕದಿಂದಾಗಿ 9 ವಿಕೆಟಿಗೆ 233 ರನ್ನುಗಳ ಸಾಧಾರಣ ಮೊತ್ತ ಗಳಿಸಿತು. ಇದಕ್ಕುತ್ತರವಾಗಿ ಪಾಕಿಸ್ಥಾನ 36 ರನ್ನಿಗೆ ಮೂರು ವಿಕೆಟ್ ಕಳೆದುಕೊಂಡು ನಾಟಕೀಯ ಕುಸಿತ ಕಂಡರೂ ಮೊಹಮ್ಮದ್ ಹಫೀಜ್ ಮತ್ತು ಶೋಯಿಬ್ ಮಲಿಕ್ ಅವರ ತಾಳ್ಮೆಯ ಆಟದಿಂದಾಗಿ 43.1 ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟದಲ್ಲಿ ಜಯಭೇರಿ ಬಾರಿಸಿತು.
ಹಫೀಜ್ ಮತ್ತು ಮಲಿಕ್ ನಾಲ್ಕನೇ ವಿಕೆಟಿಗೆ 113 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡು ತಂಡವನ್ನು ಸುಸ್ಥಿತಿಗೆ ತಲುಪಿಸಿದರು. ಹಫೀಜ್ 81 ರನ್ ಗಳಿಸಿ ಔಟಾದ ಬಳಿಕ ಮಲಿಕ್ ಅವರನ್ನು ಸಫìರಾಜ್ ಅಹ್ಮದ್ ಸೇರಿಕೊಂಡರು. ಅವರಿಬ್ಬರು ಮುರಿಯದ ಐದನೇ ವಿಕೆಟಿಗೆ 87 ರನ್ ಪೇರಿಸಿ ತಂಡದ ಜಯ ಸಾರಿದರು. ಈ ನಡುವೆ ಮಲಿಕ್ ಶತಕ ಸಿಡಿಸಿ ಸಂಭ್ರಮಿಸಿದರು. 111 ಎಸೆತ ಎದುರಿಸಿದ ಅವರು 10 ಬೌಂಡರಿ ಮತ್ತು 2 ಸಿಕ್ಸರ್ ಬಾರಿಸಿದರು.
ತಾಳ್ಮೆಯ ಆಟವಾಡಿದ ಹಫೀಜ್ ನನ್ನ ಮೇಲೆ ಯಾವುದೇ ಒತ್ತಡ ಬೀಳದಂತೆ ನೋಡಿಕೊಂಡರು. ಅದಕ್ಕಾಗಿ ಅವರಿಗೆ ಕೃತಜ್ಞತೆ ಸಲ್ಲಿಸುವೆ ಎಂದು ಪಂದ್ಯಶ್ರೇಷ್ಠ ಮತ್ತು ಸರಣಿಶ್ರೇಷ್ಠ ಪ್ರಶಸ್ತಿ ಪುರಸ್ಕೃತ ಶೋಯಿಮ್ ಮಲಿಕ್ ತಿಳಿಸಿದರು.
ಸಂಕ್ಷಿಪ್ತ ಸ್ಕೋರು: ವೆಸ್ಟ್‌ಇಂಡೀಸ್ 9 ವಿಕೆಟಿಗೆ 233 (ಕೈರನ್ ಪೊವೆಲ್ 23, ಶಾಯಿ ಹೋಪ್ 71, ಜಾಸನ್ ಮೊಹಮ್ಮದ್ 59, ಮೊಹಮ್ಮದ್ ಆಮಿರ್ 41ಕ್ಕೆ 2, ಜುನೈದ್ ಖಾನ್ 60ಕ್ಕೆ 2, ಶಾದಾಬ್ ಖಾನ್ 57ಕ್ಕೆ 2); ಪಾಕಿಸ್ಥಾನ 43.1 ಓವರ್‌ಗಳಲ್ಲಿ 4 ವಿಕೆಟಿಗೆ 236 (ಮೊಹಮ್ಮದ್ ಹಫೀಜ್ 81, ಶೋಯಿಬ್ ಮಲಿಕ್ 101 ಔಟಾಗದೆ, ಸಫìರಾಜ್ ಅಹ್ಮದ್ 24 ಔಟಾಗದೆ, ಶಾನನ್ ಗ್ಯಾಬ್ರಿಯೆಲ್ 60ಕ್ಕೆ 2).
ಪಂದ್ಯಶ್ರೇಷ್ಠ : ಶೋಯಿಬ್ ಮಲಿಕ್.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.