10ಪಿಎಲ್: ಪಾಕಿಸ್ಥಾನದ ಮಾಜಿ ವೇಗಿ ಆಸಿಫ್ ಕಣಕ್ಕೆ
Team Udayavani, Mar 4, 2018, 6:40 AM IST
ದುಬಾೖ: ಪಾಕಿಸ್ಥಾನದ ಮಾಜಿ ವೇಗಿ ಮೊಹಮ್ಮದ್ ಆಸಿಫ್, ಮಾ. 19ರಿಂದ 23ರ ವರೆಗೆ ದುಬಾೖನಲ್ಲಿ ನಡೆಯಲಿರುವ 10 ಪಿಎಲ್ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾಟದ ಪ್ರಮುಖ ಆಕರ್ಷಣೆಯಾಗಲಿದ್ದಾರೆ.
10ಪಿಎಲ್ ಎರಡನೇ ಆವೃತ್ತಿಯು ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದ್ದು, ಶೆಹೆನ್‌ಶಾ ವಾರಿಯರ್ ತಂಡವನ್ನು ಆಸಿಫ್ ಪ್ರತಿನಿಧಿಸಲಿದ್ದಾರೆ. ಒಟ್ಟು 16 ತಂಡಗಳು ಟೂರ್ನಿಯಲ್ಲಿ ಪಾಲ್ಗೊಳ್ಳಲಿವೆ.
ಪಾಕಿಸ್ಥಾನ ಪರ ಒಟ್ಟು 23 ಟೆಸ್ಟ್, 38 ಏಕದಿನ ಮತ್ತು 11 ಟಿ20 ಪಂದ್ಯಗಳನ್ನು ಆಡಿರುವ ಆಸಿಫ್, 2010ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದಿದ್ದ ಟೆಸ್ಟ್ ಸರಣಿಯ ವೇಳೆ ಸ್ಪಾಟ್ ಫಿಕ್ಸಿಂಗ್ ಆರೋಪದಡಿ ನಿಷೇಧಕ್ಕೊಳಗಾಗಿದ್ದರು. ಅನಂತರ ಅವರು ಯಾವುದೇ ಪಂದ್ಯವನ್ನಾಡಿರಲಿಲ್ಲ.
“ಪಾಕಿಸ್ಥಾನದ ಬೀದಿಗಳಲ್ಲಿ ನಾನು 10ಪಿಎಲ್ ಮಾದರಿಯ ಎಷ್ಟೋ ಪಂದ್ಯಗಳನ್ನು ಆಡಿದ್ದೇನೆ. ಬಹುತೇಕ ನಾವೆಲ್ಲರೂ ಇಂಥ ಆಟಗಳಿಂದಲೇ ಬಹಳಷ್ಟು ಕಲಿತಿದ್ದೇವೆ. ಟೂರ್ನಿಯಲ್ಲಿ ತಂಡದ ಗೆಲುವಿಗಾಗಿ ನಾನು ನನ್ನೆಲ್ಲ ಅನುಭವಗಳನ್ನು ಬಳಸಿಕೊಳ್ಳಲಿದ್ದೇನೆ’ ಎಂದು ಆಸಿಫ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka sports meet: ಈಜು ಸ್ಪರ್ಧೆ ಆರಂಭ; ದಕ್ಷಿಣ ಕನ್ನಡ ಮೇಲುಗೈ
Under-19 Women’s T20 World Cup: ವೈಷ್ಣವಿ ಹ್ಯಾಟ್ರಿಕ್, 5 ರನ್ನಿಗೆ 5 ವಿಕೆಟ್ ದಾಖಲೆ
Australia Open: 50ನೇ ಬಾರಿಗೆ ಗ್ರ್ಯಾನ್‌ಸ್ಲಾಮ್ ಸೆಮೀಸ್‌ಗೇರಿದ ಜೋಕೋ
Women’s ODI rankings: ಅಗ್ರಸ್ಥಾನಕ್ಕೆ ಮಂಧನಾ ಸನಿಹ
Rinku Singh: ತಂದೆಗೆ ಸೂಪರ್ ಬೈಕ್ ಗಿಫ್ಟ್ ನೀಡಿದ ರಿಂಕು ಸಿಂಗ್… ಬೆಲೆ ಎಷ್ಟು ಗೊತ್ತಾ?