ಟಿ20: ಬಾಂಗ್ಲಾದ ಗೆಲುವು ಕಸಿದ ಪಾಕಿಸ್ಥಾನ
Team Udayavani, Nov 19, 2021, 9:30 PM IST
ಢಾಕಾ: ಆತಿಥೇಯ ಬಾಂಗ್ಲಾದೇಶದ ಸಣ್ಣ ಮೊತ್ತವನ್ನು ಹಿಂದಿಕ್ಕಲು ಚಡಪಡಿಸಿದ ಪಾಕಿಸ್ಥಾನ, ಮೊದಲ ಟಿ20 ಪಂದ್ಯವನ್ನು 4 ವಿಕೆಟ್‌ಗಳಿಂದ ಜಯಿಸಿ ಮುನ್ನಡೆ ಕಂಡಿದೆ.
“ಶೇರ್ ಎ ಬಾಂಗ್ಲಾ ನ್ಯಾಶನಲ್ ಸ್ಟೇಡಿಯಂ’ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಲು ನಿರ್ಧರಿಸಿದ ಬಾಂಗ್ಲಾದೇಶಕ್ಕೆ ಗಳಿಸಲು ಸಾಧ್ಯವಾದದ್ದು 7ಕ್ಕೆ 127 ರನ್ ಮಾತ್ರ. ಇದನ್ನು ಬೆನ್ನಟ್ಟುವ ಹಾದಿಯ ಕೊನೆಯಲ್ಲಿ ಪಾಕ್ ತೀವ್ರ ಒತ್ತಡಕ್ಕೆ ಸಿಲುಕಿತು. 3 ಓವರ್‌ಗಳಿಂದ 32 ರನ್ ತೆಗೆಯುವ ಸವಾಲು ಎದುರಾಯಿತು. 4 ವಿಕೆಟ್‌ಗಳಷ್ಟೇ ಉಳಿದಿತ್ತು. ಆದರೆ ಶದಾಬ್ ಖಾನ್-ಮೊಹಮ್ಮದ್ ನವಾಜ್ ಸಾಹಸದಿಂದ 19.2 ಓವರ್‌ಗಳಲ್ಲಿ 6 ವಿಕೆಟಿಗೆ 132 ರನ್ ಮಾಡಿ ಗುರಿ ಮುಟ್ಟಿತು.
ಶದಾಬ್-ನವಾಜ್ ಮುರಿಯದ 7ನೇ ವಿಕೆಟಿಗೆ 2.3 ಓವರ್‌ಗಳಿಂದ 32 ರನ್ ಚಚ್ಚಿ ಬಾಂಗ್ಲಾ ಕೈಯಿಂದ ಗೆಲುವನ್ನು ಕಸಿದರು.
ಶದಾಬ್ 10 ಎಸೆತಗಳಿಂದ 21 ರನ್, ನವಾಜ್ 8 ಎಸೆತಗಳಿಂದ 18 ರನ್ ಬಾರಿಸಿದರು. ಇಬ್ಬರೂ 2 ಸಿಕ್ಸರ್, ಒಂದು ಬೌಂಡರಿ ಹೊಡೆದರು. ತಲಾ 34 ರನ್ ಮಾಡಿದ ಫಕರ್ ಜಮಾನ್ ಮತ್ತು ಖುಷಿªಲ್ ಖಾನ್ ಪಾಕ್ ಸರದಿಯ ಗರಿಷ್ಠ ಸ್ಕೋರರ್.
ಇದನ್ನೂ ಓದಿ:ಆಸ್ಪತ್ರೆಯಲ್ಲೇ ನಾಯಿಯ ಬಾಯಲ್ಲಿ ನವಜಾತ ಶಿಶುವಿನ ಮೃತ ದೇಹ; ವೀಡಿಯೊ ವೈರಲ್
ಬಾಂಗ್ಲಾ ಪದ ಆಫಿಫ್ ಹೊಸೇನ್ 36, ಮೆಹೆದಿ ಹಸನ್ ಮಿರಾಜ್ ಅಜೇಯ 30 ರನ್ ಹೊಡೆದರು. 22ಕ್ಕೆ 3 ವಿಕೆಟ್ ಕಿತ್ತ ಹಸನ್ ಅಲಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.
ಸಂಕ್ಷಿಪ್ತ ಸ್ಕೋರ್: ಬಾಂಗ್ಲಾದೇಶ-7 ವಿಕೆಟಿಗೆ 127 (ಆಫಿಫ್ 36, ಮಿರಾಜ್ ಔಟಾಗದೆ 30, ನುರುಲ್ 28, ಹಸನ್ ಅಲಿ 22ಕ್ಕೆ 3, ಮೊಹಮ್ಮದ್ ವಾಸಿಮ್ ಜೂ. 24ಕ್ಕೆ 2).
ಪಾಕಿಸ್ಥಾನ-19.2 ಓವರ್‌ಗಳಲ್ಲಿ 6 ವಿಕೆಟಿಗೆ 132 (ಫಕರ್ ಜಮಾನ್ 34, ಖುಷಿªಲ್ 34, ಶಬಾದ್ ಔಟಾಗದೆ 21, ಟಸ್ಕಿನ್ 31ಕ್ಕೆ 2). ಪಂದ್ಯಶ್ರೇಷ್ಠ: ಹಸನ್ ಅಲಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.