ಪಾಕಿಸ್ಥಾನ್ ಸೂಪರ್ ಲೀಗ್ ಟಿ20 ಸೀರಿಸ್: ಲಿನ್ ಶತಕ, ಖಲಂದರ್ಗೆ 9 ವಿಕೆಟ್ ಜಯ
Team Udayavani, Mar 16, 2020, 6:00 AM IST
ಲಾಹೋರ್: ಸದ್ಯ ಜಗತ್ತಿನಲ್ಲಿ ನಡೆಯುತ್ತಿರುವ ಕ್ರೀಡಾ ಕೂಟವೆಂದರೆ “ಪಾಕಿಸ್ಥಾನ್ ಸೂಪರ್ ಲೀಗ್’ (ಪಿಎಸ್‌ಎಲ್) ಟಿ20 ಮಾತ್ರ. ರವಿವಾರ “ಗದ್ದಾಫಿ ಸ್ಟೇಡಿಯಂ’ನಲ್ಲಿ ನಡೆದ ಕೂಟದ 29ನೇ ಪಂದ್ಯದಲ್ಲಿ ಆತಿಥೇಯ ಲಾಹೋರ್ ಖಲಂದರ್ ತಂಡ 9 ವಿಕೆಟ್‌ಗಳಿಂದ ಮುಲ್ತಾನ್ ಸುಲ್ತಾನ್ ತಂಡವನ್ನು ಪರಾಭವಗೊಳಿಸಿತು. ಕ್ರಿಸ್ ಲಿನ್ ಅವರ ಪ್ರಚಂಡ ಶತಕ ಈ ಪಂದ್ಯದ ಆಕರ್ಷಣೆ ಆಗಿತ್ತು.
ಮೊದಲು ಬ್ಯಾಟಿಂಗ್ ನಡೆಸಿದ ಮುಲ್ತಾನ್ ಸುಲ್ತಾನ್ 6 ವಿಕೆಟಿಗೆ 187 ರನ್ನುಗಳ ದೊಡ್ಡ ಮೊತ್ತವನ್ನೇ ಪೇರಿಸಿತ್ತು. ಭರ್ಜರಿಯಾಗಿ ಜವಾಬಿತ್ತ ಲಾಹೋರ್ ಖಲಂದರ್ 18.5 ಓವರ್‌ಗಳಲ್ಲಿ ಒಂದೇ ವಿಕೆಟಿಗೆ 191 ರನ್ ಬಾರಿಸಿತು.
ಆರಂಭಕಾರ ಕ್ರಿಸ್ ಲಿನ್ 55 ಎಸೆತಗಳಿಂದ 113 ರನ್ ಮಾಡಿ ಅಜೇಯರಾಗಿ ಉಳಿದರು. 12 ಬೌಂಡರಿ, 8 ಸಿಕ್ಸರ್‌ಗಳನ್ನು ಇದು ಒಳಗೊಂಡಿತ್ತು. ಮತ್ತೂಬ್ಬ ಆರಂಭಕಾರ ಫಕಾರ್ ಜಮಾನ್ 57 ರನ್ ಹೊಡೆದರು (35 ಎಸೆತ, 7 ಬೌಂಡರಿ, 2 ಸಿಕ್ಸರ್). ಇವರಿಬ್ಬರ ಮೊದಲ ವಿಕೆಟ್ ಜತೆಯಾಟದಲ್ಲಿ 9 ಓವರ್‌ಗಳಿಂದ 100 ರನ್ ಹರಿದು ಬಂತು.
ಮುಲ್ತಾನ್ ಸುಲ್ತಾನ್ 4 ರನ್ನಿಗೆ 2 ವಿಕೆಟ್ ಕಳೆದುಕೊಂಡು ತೀವ್ರ ಸಂಕಟಕ್ಕೆ ಸಿಲುಕಿತ್ತು. ಆದರೆ 5ನೇ ಕ್ರಮಾಂಕದಲ್ಲಿ ಆಡಲಿಳಿದ ಖುಷ್‌ದಿಲ್ ಶಾ ಔಟಾಗದೆ 70 ರನ್ ಮಾಡಿ ತಂಡದ ದೊಡ್ಡ ಮೊತ್ತಕ್ಕೆ ಕಾರಣರಾದರು.
ಸಂಕ್ಷಿಪ್ತ ಸ್ಕೋರ್: ಮುಲ್ತಾನ್ ಸುಲ್ತಾನ್-6 ವಿಕೆಟಿಗೆ 187 (ಖುಷ್‌ದಿಲ್ ಔಟಾಗದೆ 70, ಶಾನ್ ಮಸೂದ್ 42, ರವಿ ಬೋಪಾರ 33, ಶಾಹಿನ್ ಅಫ್ರಿದಿ 23ಕ್ಕೆ 2, ಡೇವಿಡ್ ವೀಸ್ 24ಕ್ಕೆ 2). ಲಾಹೋರ್ ಖಲಂದರ್: 18.5 ಓವರ್‌ಗಳಲ್ಲಿ ಒಂದು ವಿಕೆಟಿಗೆ 191 (ಕ್ರಿಸ್ ಲಿನ್ ಔಟಾಗದೆ 113, ಫಕಾರ್ ಜಮಾನ್ 57).
ಪಂದ್ಯಶ್ರೇಷ್ಠ: ಕ್ರಿಸ್ ಲಿನ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ
Eden Gardens; ‘ಬಿ’ ಬ್ಲಾಕ್‌ಗೆ ಜೂಲನ್ ಗೋಸ್ವಾಮಿ ಹೆಸರಿಡಲು ನಿರ್ಧಾರ
PCB; ಚಾಂಪಿಯನ್ಸ್ ಟ್ರೋಫಿಗೆ ಅಧಿಕಾರಿಯ ನೇಮಕ
MUST WATCH
ಹೊಸ ಸೇರ್ಪಡೆ
Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.