PAK vs ENG: 2021ರ ಬಳಿಕ ತವರಲ್ಲಿ ಟೆಸ್ಟ್ ಸರಣಿ ಗೆದ್ದ ಪಾಕ್!
Team Udayavani, Oct 26, 2024, 7:51 PM IST
ರಾವಲ್ಪಿಂಡಿ: ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯವನ್ನು 9 ವಿಕೆಟ್‌ಗಳಿಂದ ಗೆದ್ದ ಪಾಕಿಸ್ತಾನ, ತವರಲ್ಲಿ ಸರಣಿ ಜಯದ ಬರವನ್ನು ನೀಗಿಸಿಕೊಂಡಿದೆ.
3 ಪಂದ್ಯಗಳ ಸರಣಿಯನ್ನು 2-1ರಿಂದ ತನ್ನದಾಗಿಸಿಕೊಂಡಿದೆ. 2021ರ ಬಳಿಕ ತವರಲ್ಲಿ ಪಾಕಿಸ್ತಾನ ಗೆದ್ದ ಮೊದಲ ಸರಣಿ ಜಯ! ಅಂದು ದ.ಆಫ್ರಿಕಾವನ್ನು 2-0ಯಿಂದ ಮಣಿಸಿತ್ತು. 1ನೇ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್ 267ಕ್ಕೆ ಆಲೌಟಾಗಿತ್ತು. ಪಾಕಿಸ್ತಾನ 1ನೇ ಇನಿಂಗ್ಸ್‌ನಲ್ಲಿ 344 ರನ್ ಗಳಿಸಿತ್ತು. 2ನೇ ಇನಿಂಗ್ಸ್‌ನಲ್ಲಿ 112ಕ್ಕೆ ಆಲೌಟಾಗಿತ್ತು. ಇದು ಪಾಕಿಸ್ತಾನಲ್ಲಿ ಇಂಗ್ಲೆಂಡ್ ದಾಖಲಿಸಿದ ಕನಿಷ್ಠ ಸ್ಕೋರ್. ಕೇವಲ 36 ರನ್ ಗುರಿ ಪಡೆದಿದ್ದ ಪಾಕಿಸ್ತಾನ 1 ವಿಕೆಟ್‌ಗೆ 37 ರನ್ ಗಳಿಸಿ, 9 ವಿಕೆಟ್ ಜಯ ಸಾಧಿಸಿತು.
77 ರನ್ ಹಿನ್ನಡೆಗೆ ಸಿಲುಕಿದ್ದ ಇಂಗ್ಲೆಂಡ್, 3ನೇ ದಿನದಾಟದಲ್ಲಿ 112ಕ್ಕೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಇದು ಪಾಕಿಸ್ತಾನಲ್ಲಿ ಇಂಗ್ಲೆಂಡ್ ದಾಖಲಿಸಿದ ಕನಿಷ್ಠ ಸ್ಕೋರ್. 1987ರ ಲಾಹೋರ್ ಟೆಸ್ಟ್‌ನಲ್ಲಿ 130ಕ್ಕೆ ಆಲೌಟ್ ಆದದ್ದು ಹಿಂದಿನ ದಾಖಲೆ ಆಗಿತ್ತು. ಗೆಲುವಿಗೆ 36 ರನ್ ರನ್ ಗುರಿ ಪಡೆದ ಪಾಕಿಸ್ತಾನ ಒಂದು ವಿಕೆಟ್ ನಷ್ಟಕ್ಕೆ 37 ರನ್ ಮಾಡಿತು. ಪಾಕಿಸ್ತಾನ ಮೊದಲ ಟೆಸ್ಟ್ ಪಂದ್ಯವನ್ನು 47 ರನ್ನುಗಳಿಂದ ಕಳೆದುಕೊಂಡಿತ್ತು. ದ್ವಿತೀಯ ಪಂದ್ಯವನ್ನು 152 ರನ್ನುಗಳಿಂದ ಗೆದ್ದು ಸರಣಿಯನ್ನು ಸಮಬಲಕ್ಕೆ ತಂದಿತ್ತು.
ಇದು 2021ರ ಬಳಿಕ ಪಾಕಿಸ್ತಾನ ತವರಲ್ಲಿ ಗೆದ್ದ ಮೊದಲ ಟೆಸ್ಟ್ ಸರಣಿ. ಅಂದು ದಕ್ಷಿಣ ಆಫ್ರಿಕಾವನ್ನು 2-0 ಅಂತರದಿಂದ ಮಣಿಸಿತ್ತು. ಹಾಗೆಯೇ 2015ರ ಬಳಿಕ ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನಕ್ಕೆ ಒಲಿದ ಮೊದಲ ಸರಣಿಯೂ ಆಗಿದೆ. ಪಾಕಿಸ್ತಾನ ಮೊದಲ ಟೆಸ್ಟ್ ಪಂದ್ಯವನ್ನು ಕಳೆದುಕೊಂಡ ಬಳಿಕ 3 ಪಂದ್ಯಗಳ ಸರಣಿಯನ್ನು ಗೆದ್ದ ಕೇವಲ 2ನೇ ನಿದರ್ಶನ ಇದಾಗಿದೆ. 1995ರಲ್ಲಿ ಜಿಂಬಾಬ್ವೆ ವಿರುದ್ಧ ಈ ಸಾಧನೆಗೈದಿತ್ತು.
ಸಾಜಿದ್-ನೊಮಾನ್ ದಾಳಿ:
ಸ್ಪಿನ್‌ದ್ವಯರಾದ ಸಾಜಿದ್ ಖಾನ್ ಮತ್ತು ನೊಮಾನ್ ಅಲಿ ಸೇರಿಕೊಂಡು ಇಂಗ್ಲೆಂಡ್ ಕತೆ ಮುಗಿಸಿದರು. ಇವರಿಬ್ಬರು 19 ವಿಕೆಟ್ ಉಡಾಯಿಸಿ ಆಂಗ್ಲರಿಗೆ ಎದ್ದು ನಿಲ್ಲಲಾಗದಂತೆ ಮಾಡಿದರು. ಮೊದಲ ಇನ್ನಿಂಗ್ಸ್‌ನಲ್ಲಿ 6 ವಿಕೆಟ್ ಕೆಡವಿದ್ದ ಸಾಜಿದ್ ಅಲಿ, ದ್ವಿತೀಯ ಸರದಿಯಲ್ಲಿ 4 ವಿಕೆಟ್ ಉರುಳಿಸಿದರು. ನೊಮಾನ್ ಅಲಿ 88ಕ್ಕೆ 3 ಹಾಗೂ 42ಕ್ಕೆ 6 ವಿಕೆಟ್ ಕಿತ್ತು ಮೆರೆದರು.
ಇಂಗ್ಲೆಂಡ್‌ನ ದ್ವಿತೀಯ ಸರದಿಯಲ್ಲಿ ಜೋ ರೂಟ್ 33, ಹ್ಯಾರಿ ಬ್ರೂಕ್ 26 ರನ್ ಮಾಡಿದರು. ಒಂದು ಹಂತದಲ್ಲಿ 3ಕ್ಕೆ 66 ರನ್ ಮಾಡಿದ್ದ ಇಂಗ್ಲೆಂಡ್, ಕೇವಲ 46 ರನ್ ಅಂತರದಲ್ಲಿ ಉಳಿದ ಆರೂ ವಿಕೆಟ್ ಉದುರಿಸಿಕೊಂಡಿತು.
ಸಂಕ್ಷಿಪ್ತ ಸ್ಕೋರ್: ಇಂಗ್ಲೆಂಡ್-267 ಮತ್ತು 112 (ರೂಟ್ 33, ಬ್ರೂಕ್ 26, ನೊಮಾನ್ 42ಕ್ಕೆ 6, ಸಾಜಿದ್ 69ಕ್ಕೆ 4). ಪಾಕಿಸ್ತಾನ-344 ಮತ್ತು ಒಂದು ವಿಕೆಟಿಗೆ 37 (ಮಸೂದ್ ಔಟಾಗದೆ 23).
ಪಂದ್ಯಶ್ರೇಷ್ಠ: ಸೌದ್ ಶಕೀಲ್. ಸರಣಿಶ್ರೇಷ್ಠ: ಸಾಜಿದ್ ಖಾನ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cricket; ಮಹಿಳಾ ಅಂಡರ್-19 ಏಕದಿನ ಟ್ರೋಫಿ: ಅಸ್ಸಾಂ ವಿರುದ್ಧ ಕರ್ನಾಟಕಕ್ಕೆ ಜಯ
NZ vs SL: ಮಳೆ ಪಂದ್ಯದಲ್ಲಿ ಎಡವಿದ ಲಂಕಾ ; ಏಕದಿನ ಸರಣಿ ಗೆದ್ದ ನ್ಯೂಜಿಲ್ಯಾಂಡ್
Retirement: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಸ್ಫೋಟಕ ಆಟಗಾರ
Team India; ಆಸ್ಟ್ರೇಲಿಯ ಸೋಲಿಗಿಂತ ತವರಿನ ವೈಟ್‌ವಾಶ್ ಆಘಾತಕಾರಿ: ಯುವಿ
ICC Champions Trophy: ಅಫ್ಘಾನಿಸ್ಥಾನ ವಿರುದ್ಧದ ಪಂದ್ಯಕ್ಕೆ ಇಂಗ್ಲೆಂಡ್ ಬಹಿಷ್ಕಾರ?
MUST WATCH
ಹೊಸ ಸೇರ್ಪಡೆ
Mangaluru ಲಂಚ: ಬಂಧಿತ ಮೂಲ್ಕಿ ಆರ್‌ಐ ಜಾಮೀನು ಅರ್ಜಿ ತಿರಸ್ಕೃತ
Dinner Meeting: ಸಭೆ ಮಾಡಬೇಡಿ ಎನ್ನಲು ಇವರೇನು ಪರಿಶಿಷ್ಟ ಸಮುದಾಯದ ವಿರೋಧಿಗಳಾ?: ಸಚಿವ
Kasaragod: ಯುವತಿ ನಾಪತ್ತೆ; ದೂರು ದಾಖಲು
Sheesh Mahal Row: ಶೀಶ್‌ಮಹಲ್ ವರ್ಸಸ್ ರಾಜ್ ಮಹಲ್: ದಿಲ್ಲೀಲಿ ಬಿಜೆಪಿ, ಆಪ್ ಹೈಡ್ರಾಮ
Foundation: ಆಂಧ್ರ ಅಭಿವೃದ್ಧಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುವೆವು: ಮೋದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.