ಅಫ್ಘಾನ್ ಗೆಲುವಿಗೆ ಮಲಿಕ್ ಅಡ್ಡಿ
Team Udayavani, Sep 23, 2018, 6:00 AM IST
ಅಬುಧಾಬಿ: ಅಪಾಯಕಾರಿ ಅಫ್ಘಾನಿಸ್ಥಾನದ ಬಿಗಿಯಾದ ಸವಾಲಿಗೆ ಒಂದಿಷ್ಟು ಅಳುಕಿದ ಪಾಕಿಸ್ಥಾನ, ಸೂಪರ್ ಫೋರ್ ಪಂದ್ಯವನ್ನು ಅಂತಿಮ ಓವರ್‌ನಲ್ಲಿ ಗೆದ್ದು ನಿಟ್ಟುಸಿರೆಳೆದಿದೆ. ಗೆಲುವಿನ ಅಂತರ ಕೇವಲ 3 ವಿಕೆಟ್.
ಶುಕ್ರವಾರ ರಾತ್ರಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಅಫ್ಘಾನಿಸ್ಥಾನ 6 ವಿಕೆಟಿಗೆ 257 ರನ್ ಪೇರಿಸಿತು. ಪಾಕಿಸ್ಥಾನ ಮೊದಲ ಓವರಿನಲ್ಲೇ ಫಕಾರ್ ಜಮಾನ್ (0) ಅವರನ್ನು ಕಳೆದುಕೊಂಡು ಆಘಾತಕ್ಕೆ ಸಿಲುಕಿತಾದರೂ ಇಮಾಮ್ ಉಲ್ ಹಕ್ (80) ಮತ್ತು ಬಾಬರ್ ಆಜಂ (66) ಕ್ರೀಸ್ ಆಕ್ರಮಿಸಿಕೊಂಡು ದ್ವಿತೀಯ ವಿಕೆಟಿಗೆ 154 ರನ್ ಪೇರಿಸಿ ತಂಡವನ್ನು ಸುಸ್ಥಿತಿಗೆ ತಲುಪಿಸಿದರು. ಇದು ಅಬುಧಾಬಿ ಏಕದಿನದಲ್ಲಿ 2ನೇ ವಿಕೆಟಿಗೆ ದಾಖಲಾದ ದೊಡ್ಡ ಜತೆಯಾಟವಾಗಿದೆ.
2008ರಲ್ಲಿ ಕ್ರಿಸ್ ಗೇಲ್-ರಾಮ್‌ನರೇಶ್ ಸರವಣ್ 151 ರನ್ ಪೇರಿಸಿದ ದಾಖಲೆ ಪತನಗೊಂಡಿತು.ಆದರೆ ಇಮಾಮ್ ಮತ್ತು ಬಾಬರ್ 4 ರನ್ ಅಂತರದಲ್ಲಿ ಔಟಾಗುವುದರೊಂದಿಗೆ ಅಫ್ಘಾನ್ ಹಿಡಿತ ಸಾಧಿಸಿತು. ಪಾಕ್ ಕುಸಿತ ಮುಂದುವರಿಯುತ್ತ ಹೋದಂತೆ ಪಂದ್ಯದ ಕುತೂಹಲವೂ ತೀವ್ರಗೊಂಡಿತು. 49ನೇ ಓವರ್ ವೇಳೆ 242ಕ್ಕೆ 7 ವಿಕೆಟ್ ಹಾರಿಸಿದ ಅಫ್ಘಾನ್ ಮುಂದೆ ಗೆಲುವಿನ ಬಾಗಿಲೊಂದು ತೆರೆದುಕೊಂಡಿತ್ತು.
ಅಂತಿಮ ಓವರಿನಲ್ಲಿ ಗೆಲುವಿಗಾಗಿ 10 ರನ್ ತೆಗೆಯುವ ಒತ್ತಡ ಪಾಕಿಸ್ಥಾನದ್ದಾಯಿತು. ಆದರೆ ಅನುಭವಿ ಶೋಯಿಬ್ ಮಲಿಕ್ ಬೇರೂರಿ ನಿಂತಿದ್ದರಿಂದ ಪಾಕಿಗೆ ಅವಕಾಶ ಹೆಚ್ಚಿತ್ತು. ಈ ನಿರೀಕ್ಷೆಯನ್ನು ಮಲಿಕ್ ಹುಸಿಗೊಳಿಸಲಿಲ್ಲ. ಅಫ್ತಾಬ್ ಆಲಂ ಪಾಲಾದ ಅಂತಿಮ ಓವರಿನ ಮೊದಲ ಎಸೆತದಲ್ಲಿ ರನ್ ಗಳಿಸುವಲ್ಲಿ ಎಡವಿದರೂ ಮುಂದಿನೆರಡು ಎಸೆತಗಳನ್ನು ಕ್ರಮವಾಗಿ ಸಿಕ್ಸರ್ ಹಾಗೂ ಫೋರ್‌ಗೆ ಬಡಿದಟ್ಟಿ ತಂಡದ ಗೆಲುವನ್ನು ಸಾರಿದರು. ಆಗ ಮಲಿಕ್ 51 ರನ್ ಮಾಡಿ ಅಜೇಯರಾಗಿದ್ದರು (43 ಎಸೆತ, 3 ಬೌಂಡರಿ, 1 ಸಿಕ್ಸರ್). ಈ ಸಾಹಸಕ್ಕಾಗಿ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿದು ಬಂತು.
ಸ್ಕೋರ್‌ಪಟ್ಟಿ
ಅಫ್ಘಾನಿಸ್ಥಾನ
ಮೊಹಮ್ಮದ್ ಶಾಬಾಜ್ ಸಿ ಸಫìರಾಜ್ ಬಿ ನವಾಜ್ 20
ಇಹಸಾನುಲ್ಲ ಸಿ ಮತ್ತು ಬಿ ನವಾಜ್ 10
ರಹಮತ್ ಷಾ ಸಿ ಮತ್ತು ಬಿ ನವಾಜ್ 36
ಹಶ್ಮತುಲ್ಲ ಶಾಹಿದಿ ಔಟಾಗದೆ 97
ಅಸYರ್ ಅಫ್ಘಾನ್ ಬಿ ಅಫ್ರಿದಿ 67
ಮೊಹಮ್ಮದ್ ನಬಿ ಸಿ ಅಲಿ ಬಿ ಅಫ್ರಿದಿ 7
ನಜೀಬುಲ್ಲ ಜದ್ರಾನ್ ಬಿ ಅಲಿ 5
ಗುಲ್ಬದಿನ್ ನೈಬ್ ಔಟಾಗದೆ 10
ಇತರ 5
ಒಟ್ಟು (50 ಓವರ್‌ಗಳಲ್ಲಿ 6 ವಿಕೆಟಿಗೆ) 257
ವಿಕೆಟ್ ಪತನ: 1-26, 2-31, 3-94, 4-188, 5-200, 6-212.
ಬೌಲಿಂಗ್:
ಉಸ್ಮಾನ್ ಖಾನ್ 10-1-58-0
ಶಹೀನ್ ಷಾ ಅಫ್ರಿದಿ 10-0-38-2
ಮೊಹಮ್ಮದ್ ನವಾಜ್ 10-1-57-3
ಶೋಯಿಬ್ ಮಲಿಕ್ 4-0-21-0
ಹ್ಯಾರಿಸ್ ಸೊಹೈಲ್ 6-0-30-0
ಹಸನ್ ಅಲಿ 10-0-51-1
ಪಾಕಿಸ್ಥಾನ
ಫಕಾರ್ ಜಮಾನ್ ಎಲ್‌ಬಿಡಬ್ಲ್ಯು ಮುಜೀಬ್ 0
ಇಮಾಮ್ ಉಲ್ ಹಕ್ ರನೌಟ್ 80
ಬಾಬರ್ ಆಜಂ ಸ್ಟಂಪ್ಡ್ ಶಾಜಾದ್ ಬಿ ರಶೀದ್ 66
ಹ್ಯಾರಿಸ್ ಸೊಹೈಲ್ ಸಿ ಇಹಸಾನುಲ್ಲ ಬಿ ಮುಜೀಬ್ 13
ಶೋಯಿಬ್ ಮಲಿಕ್ ಔಟಾಗದೆ 51
ಸಫìರಾಜ್ ಅಹ್ಮದ್ ಬಿ ನೈಬ್ 8
ಆಸಿಫ್ ಅಲಿ ಸಿ ಅಫ್ತಾಬ್ ಬಿ ರಶೀದ್ 7
ಮೊಹಮ್ಮದ್ ನವಾಜ್ ಬಿ ರಶೀದ್ 10
ಹಸನ್ ಆಲಿ ಔಟಾಗದೆ 6
ಇತರ 17
ಒಟ್ಟು (49.3 ಓವರ್‌ಗಳಲ್ಲಿ 7 ವಿಕೆಟಿಗೆ) 258
ವಿಕೆಟ್ ಪತನ: 1-0, 2-154, 3-158, 4-194, 5-216, 6-226, 7-242.
ಬೌಲಿಂಗ್:
ಮುಜೀಬ್ ಉರ್ ರೆಹಮಾನ್ 10-2-33-2
ಅಫ್ತಾಬ್ ಆಲಂ 9.3-1-64-0
ಗುಲ್ಬದಿನ್ ನೈಬ್ 10-0-61-1
ಮೊಹಮ್ಮದ್ ನಬಿ 10-0-56-0
ರಶೀದ್ ಖಾನ್ 10-0-46-3
ಪಂದ್ಯಶ್ರೇಷ್ಠ: ಶೋಯಿಬ್ ಮಲಿಕ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ITF Open: ಬೆಂಗಳೂರು ಐಟಿಎಫ್ ಟೆನಿಸ್‌ಗೆ ಅಗ್ರ 100 ರ್‍ಯಾಂಕ್‌ನ ನಾಲ್ವರು
Travis Head: ಶ್ರೀಲಂಕಾ ಪ್ರವಾಸದಲ್ಲಿ ಟ್ರ್ಯಾವಿಸ್ ಹೆಡ್ ಓಪನಿಂಗ್?
NZ Vs SL: 3ನೇ ಏಕದಿನ; ಲಂಕಾಕ್ಕೆ ಜಯ, 2-1ರಿಂದ ಸರಣಿ ಕಿವೀಸ್ ವಶ
T20; ಇಂಗ್ಲೆಂಡ್ ವಿರುದ್ಧದ ಸರಣಿಗೆ ಟೀಮ್ ಇಂಡಿಯಾ ಪ್ರಕಟ: ಶಮಿಗೆ ಅವಕಾಶ
Malaysia Open; ಸೆಮಿಫೈನಲ್‌ನಲ್ಲಿ ಸಾತ್ವಿಕ್-ಚಿರಾಗ್ ಜೋಡಿಗೆ ಸೋಲು
MUST WATCH
ಹೊಸ ಸೇರ್ಪಡೆ
ತುಳುವಿಗೆ ರಾಜ್ಯಭಾಷೆ ಗೌರವ ಪರಿಗಣನೆ: ನರಿಂಗಾನ ಕಂಬಳ್ಳೋತ್ಸವದಲ್ಲಿ ಸಿಎಂ
ದೇಶಾಭಿವೃದ್ಧಿಗೆ ಪ್ರತಿಯೊಬ್ಬರ ಕೊಡುಗೆ ಅಗತ್ಯ : ನ್ಯಾ| ವಿಶ್ವನಾಥ ಶೆಟ್ಟಿ ಕರೆ
ಅಣ್ಣಾಮಲೈರಿಂದ ಬೇರೇನು ನಿರೀಕ್ಷಿಸಬಹುದು: ಸಿಎಂ ಪ್ರಶ್ನೆ
ಮಂಗಳೂರಿನಲ್ಲಿ ಇಂಧನ ಭದ್ರತಾ ಸಮಾವೇಶ ನಡೆಸಿ: ಸಚಿವ ಹರ್ದೀಪ್ ಸಿಂಗ್
Suvarna Bharathi Mahotsava: ಶೃಂಗೇರಿಯಲ್ಲಿ ದಾಖಲೆ ಬರೆದ ತ್ರಿವೇಣಿ ಸ್ತೋತ್ರ ಪಠಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.