1st Test; ಪಾಕಿಸ್ಥಾನಕ್ಕೆ ತವರಿನಲ್ಲೇ ಶಾಕ್:ಇಂಗ್ಲೆಂಡ್ ಗೆ ಇನಿಂಗ್ಸ್ & 47 ರನ್‌ಗಳ ಜಯ
ತವರಿನಲ್ಲಿ ಹೀನಾಯ ಸೋಲು ಅನುಭವಿಸಿದ ಪಾಕ್.. ಪಂದ್ಯಶ್ರೇಷ್ಠರಾದ ತ್ರಿಶತಕ ವೀರ ಹ್ಯಾರಿ ಬ್ರೂಕ್
Team Udayavani, Oct 11, 2024, 3:01 PM IST
ಮುಲ್ತಾನ್ : ಇಲ್ಲಿ ನಡೆದ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್ ಎದುರು ಪಾಕಿಸ್ಥಾನ ಇನಿಂಗ್ಸ್ ಮತ್ತು 47 ರನ್‌ಗಳ ಹೀನಾಯ ಸೋಲು ಅನುಭವಿಸಿದೆ.
ಪಂದ್ಯದ ನಾಲ್ಕನೇ ದಿನದ ಆಟದ ಅಂತ್ಯಕ್ಕೆ ಎರಡನೇ ಇನ್ನಿಂಗ್ಸ್ ನಲ್ಲಿ ಭಾರೀ ಸವಾಲು ಎದುರಿಸಲು ಹೋಗಿ ಸೋಲಿನ ಸುಳಿಗೆ ಸಿಲುಕಿದ್ದ ಪಾಕಿಸ್ಥಾನ ಐದನೇ ದಿನದ ಆಟದ(ಶುಕ್ರವಾರ, ಅ11) ಆರಂಭದಲ್ಲೇ ಸರ್ವ ಪತನ ಕಂಡು ಆಘಾತಕಾರಿ ಸೋಲು ಅನುಭವಿಸಿತು. ಅಮೋಘ ಆಟವಾಡಿ ತ್ರಿಶತಕ ವೀರ ಹ್ಯಾರಿ ಬ್ರೂಕ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಪಾಕಿಸ್ತಾನ ಮೊದಲ ಇನಿಂಗ್ಸ್ ಲ್ಲಿ ಉತ್ತಮ ಆಟವಾಡಿ 556 ರನ್ ಗಳಿಗೆ ಆಲೌಟಾಗಿತ್ತು. ನಾಯಕ ಶಾನ್ ಮಸೂದ್ 151, ಆರಂಭಿಕ ಆಟಗಾರ ಅಬ್ದುಲ್ಲಾ ಶಫೀಕ್ 102, ಮಾಧ್ಯಮ ಕ್ರಮಾಂಕದಲ್ಲಿ ಬಂದ ಅಘಾ ಸಲ್ಮಾನ್ ಔಟಾಗದೆ 104 ರನ್ ಮತ್ತು ಸೌದ್ ಶಕೀಲ್ 82 ರನ್ ಕೊಡುಗೆ ನೀಡಿದ್ದರು.
ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್ ನಲ್ಲಿ ಬೃಹತ್ ಮೊತ್ತ ಕಲೆ ಹಾಕಿತು. ಜೋ ರೂಟ್ ಅವರ 262 ರನ್ , ಹ್ಯಾರಿ ಬ್ರೂಕ್ ಅವರ 317 ರನ್ ಕೊಡುಗೆ ಭಾರೀ ಮೊತ್ತ ಕಲೆ ಹಾಕಲು ಕಾರಣವಾಯಿತು. 7ವಿಕೆಟ್ ನಷ್ಟಕ್ಕೆ 823 ರನ್ ಕಲೆ ಹಾಕಿ ಡಿಕ್ಲೇರ್ ಮಾಡಿ ಗೆಲುವಿನ ರಣತಂತ್ರ ರೂಪಿಸಿತ್ತು.
ಭಾರೀ ಗುರಿ ಬೆನ್ನಟ್ಟಿದ ಪಾಕ್ 220 ರನ್ ಗಳಿಗೆ ಆಲೌಟಾಗುವ ಮೂಲಕ ಹೀನಾಯ ಸೋಲು ಅನುಭವಿಸಿತು. ಇನ್ನಿಂಗ್ಸ್ ಸೋಲು ತಪ್ಪಿಸಲು ಹೋರಾಟ ನಡೆಸಿದರೂ ಇಂಗ್ಲೆಂಡ್ ತಂಡದ ರಣತಂತ್ರದ ಎದುರು ಸಾಧ್ಯವಾಗಲಿಲ್ಲ. ಎರಡನೇ ಇನ್ನಿಂಗ್ಸ್ ನಲ್ಲಿ ಬಿಗಿ ದಾಳಿ ನಡೆಸಿದ ಜ್ಯಾಕ್ ಲೀಚ್ 4 ವಿಕೆಟ್ ಕಿತ್ತರು(ಮೊದಲ ಇನ್ನಿಂಗ್ಸ್ ನಲ್ಲಿ 3 ವಿಕೆಟ್) .ಬ್ರೈಡನ್ ಕಾರ್ಸೆ, ಗಸ್ ಅಟ್ಕಿನ್ಸನ್ ತಲಾ 2 ವಿಕೆಟ್ ಕಿತ್ತು(ಮೊದಲ ಇನ್ನಿಂಗ್ಸ್ ನಲ್ಲೂ ತಲಾ 2) ಪಾಕಿಸ್ಥಾನವನ್ನು ಕಟ್ಟಿ ಹಾಕಿದರು. ಕ್ರಿಸ್ ವೋಕ್ಸ್ ಪ್ರಮುಖ ವಿಕೆಟ್ ಕಬಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
R.Ashwin retirement: ಅಶ್ವಿನ್ ವಿದಾಯದ ಸುತ್ತಮುತ್ತ…
Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು
Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್
Brisbane Test; ವರುಣನ ಅಡ್ಡಿ: ಕೂತೂಹಲ ಮೂಡಿಸಿದ್ದ ಪಂದ್ಯ ಡ್ರಾದಲ್ಲಿ ಅಂತ್ಯ
Brisbane Test; ರೋಚಕ.. ಭಾರತ ಗೆಲ್ಲಲು 54 ಓವರ್‌ಗಳಲ್ಲಿ 275 ರನ್ ಅಗತ್ಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.