ಟಿ20: ಪಾಕ್‌ ಗೆಲುವಿನ ಆರಂಭ


Team Udayavani, Oct 28, 2017, 6:15 AM IST

AP10_27_2017_000020A.jpg

ಅಬುದಾಭಿ: ಏಕದಿನ ಸರಣಿಯಲ್ಲಿ ವೈಟ್‌ವಾಶ್‌ ಸಂಕಟಕ್ಕೆ ಸಿಲುಕಿದ ಶ್ರೀಲಂಕಾ, ಟಿ20 ಸರಣಿಯಲ್ಲೂ ಪಾಕಿಸ್ಥಾನದ ವಿರುದ್ಧ ಸೋಲಿನ ಆರಂಭ ಪಡೆದಿದೆ. ಗುರುವಾರ ರಾತ್ರಿ ಅಬುದಾಭಿಯಲ್ಲಿ ಶೋಚನೀಯ ಬ್ಯಾಟಿಂಗ್‌ ಪ್ರದರ್ಶಿಸಿದ ಲಂಕಾ ಪಡೆ 7 ವಿಕೆಟ್‌ಗಳಿಂದ ಎಡವಿದೆ.

ಟಾಸ್‌ ಸೋತು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಶ್ರೀಲಂಕಾ 18.3 ಓವರ್‌ಗಳಲ್ಲಿ 102 ರನ್ನಿಗೆ ಸರ್ವಪತನ ಕಂಡಿತು. ಜವಾಬಿತ್ತ ಪಾಕಿಸ್ಥಾನ 17.2 ಓವರ್‌ಗಳಲ್ಲಿ 3 ವಿಕೆಟಿಗೆ 103 ರನ್‌ ಮಾಡಿ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು.

ಪಾಕಿಸ್ಥಾನದ ನೂತನ ಬೌಲಿಂಗ್‌ ಅಸ್ತ್ರವಾಗಿರುವ ಎಡಗೈ ವೇಗಿ ಉಸ್ಮಾನ್‌ ಖಾನ್‌ 4 ಓವರ್‌ಗಳ ಕೋಟಾದಲ್ಲಿ 20 ರನ್ನಿತ್ತು 2 ವಿಕೆಟ್‌ ಹರಿಸಿದರೆ, ಮತ್ತೂಬ್ಬ ವೇಗಿ ಹಸನ್‌ ಅಲಿ 23 ರನ್‌ ನೀಡಿ 3 ವಿಕೆಟ್‌ ಕಿತ್ತರು. ಆಫ್ಸ್ಪಿನ್‌ ಆಲ್‌ರೌಂಡರ್‌ ಮೊಹಮ್ಮದ್‌ ಹಫೀಜ್‌ ಕೇವಲ 10 ರನ್‌ ನೀಡಿ ಇಬ್ಬರನ್ನು ಪೆವಿಲಿಯನ್ನಿಗೆ ಅಟ್ಟಿದರು. ಉಸ್ಮಾನ್‌ ಖಾನ್‌ ಅವರಿಗೆ ಪಂದ್ಯಶ್ರೇಷ್ಠ ಗೌರವ ಒಲಿಯಿತು.

ಪಾಕಿಸ್ಥಾನದ ಬೌಲಿಂಗ್‌ ಸರದಿಯಲ್ಲಿ 6 ಮಂದಿ ದಾಳಿಗಿಳಿದು ಲಂಕಾ ಮೇಲೆ ಮುಗಿಬಿದ್ದರು. ಎಲ್ಲರೂ ವಿಕೆಟ್‌ ಕೀಳುವಲ್ಲಿ ಯಶಸ್ವಿಯಾದರು. ಇಮಾದ್‌ ವಾಸಿಮ್‌, ಫಾಹಿಮ್‌ ಅಶ್ರಫ್ ಮತ್ತು ಶಾದಾಬ್‌ ಖಾನ್‌ ಅವರಿಗೆ ಒಂದೊಂದು ವಿಕೆಟ್‌ ಲಭಿಸಿತು.

ಪಂದ್ಯದ 3ನೇ ಎಸೆತದಲ್ಲೇ ಮುನವೀರ (0) ವಿಕೆಟ್‌ ಕಳೆದುಕೊಂಡ ಶ್ರೀಲಂಕಾ, ಅನಂತರ ಸ್ವಲ್ಪ ಚೇತರಿಕೆಯ ಆಟವಾಡಿತು. 9ನೇ ಓವರ್‌ ವೇಳೆ ಎರಡೇ ವಿಕೆಟಿಗೆ 51 ರನ್‌ ಗಳಿಸಿ ಹೋರಾಟದ ಸೂಚನೆ ನೀಡಿತು. ಆದರೆ ಇಲ್ಲಿಂದ ಮೊದಲ್ಗೊಂಡ ಕುಸಿತ ನಿಲ್ಲಲೇ ಇಲ್ಲ. ಲಂಕಾ ಪರ ಕೀಪರ್‌ ಸಮರವಿಕ್ರಮ ಮತ್ತು ಸಿಕ್ಕುಗೆ ಪ್ರಸನ್ನ ತಲಾ 23 ರನ್‌ ಹೊಡೆದರು.

ಪಾಕಿಸ್ಥಾನದ 2 ವಿಕೆಟ್‌ 18 ರನ್ನಿಗೆ ಬಿತ್ತಾದರೂ ಶೋಯಿಬ್‌ ಮಲಿಕ್‌ (ಔಟಾಗದೆ 42) ಮತ್ತು ಮೊಹಮ್ಮದ್‌ ಹಫೀಜ್‌ (ಔಟಾಗದೆ 25) ತಂಡವನ್ನು ಸುರಕ್ಷಿತವಾಗಿ ದಡ ಸೇರಿಸಿದರು.

ಸಂಕ್ಷಿಪ್ತ ಸ್ಕೋರ್‌: ಶ್ರೀಲಂಕಾ-18.3 ಓವರ್‌ಗಳಲ್ಲಿ 102 (ಸಮರವಿಕ್ರಮ 23, ಪ್ರಸನ್ನ 23, ಗುಣತಿಲಕ 18, ಅಲಿ 23ಕ್ಕೆ 3, ಉಸ್ಮಾನ್‌ 20ಕ್ಕೆ 2, ಹಫೀಜ್‌ 10ಕ್ಕೆ 2). ಪಾಕಿಸ್ಥಾನ-17.2 ಓವರ್‌ಗಳಲ್ಲಿ 3 ವಿಕೆಟಿಗೆ 103 (ಮಲಿಕ್‌ ಔಟಾಗದೆ 42, ಹಫೀಜ್‌ ಔಟಾಗದೆ 25, ಶೆಹಜಾದ್‌ 22, ವಿಕುಮ್‌ ಸಂಜಯ 20ಕ್ಕೆ 2).

ಪಂದ್ಯಶ್ರೇಷ್ಠ: ಉಸ್ಮಾನ್‌ ಖಾನ್‌.

ಟಾಪ್ ನ್ಯೂಸ್

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್

BGT 2024: Team India faces injury problems ahead of Melbourne match

BGT 2024: ಮೆಲ್ಬೋರ್ನ್‌ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

BGT 2024: Team India faces injury problems ahead of Melbourne match

BGT 2024: ಮೆಲ್ಬೋರ್ನ್‌ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ

ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್‌ ಸೂರ್ಯವಂಶಿ

Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್‌ ಸೂರ್ಯವಂಶಿ

IND-W vs WI: ವನಿತೆಯರ ಏಕದಿನ ಮುಖಾಮುಖಿ

IND-W vs WI: ವನಿತೆಯರ ಏಕದಿನ ಮುಖಾಮುಖಿ

Ahmed Shehzad: ಭಾರತ-ಪಾಕ್‌ ಗಡಿಯಲ್ಲಿ ಕ್ರಿಕೆಟ್‌ ಸ್ಟೇಡಿಯಂಗೆ ಸಲಹೆ!

Ahmed Shehzad: ಭಾರತ-ಪಾಕ್‌ ಗಡಿಯಲ್ಲಿ ಕ್ರಿಕೆಟ್‌ ಸ್ಟೇಡಿಯಂಗೆ ಸಲಹೆ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

4

Bengaluru: ಹಫ್ತಾ ನೀಡಲು ವ್ಯಾಪಾರಿಗೆ ಜೈಲಿನಿಂದಲೇ ಧಮ್ಕಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.