ಅಬುದಾಭಿ ಟೆಸ್ಟ್: ಲಂಕೆಗೆ ಪಾಕ್ ದಿಟ್ಟ ಉತ್ತರ
Team Udayavani, Oct 1, 2017, 7:40 AM IST
ಅಬುದಾಭಿ: ಅಬುದಾಭಿ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾದ 419 ರನ್ನಿಗೆ ಪಾಕಿಸ್ಥಾನ ದಿಟ್ಟ ಉತ್ತರ ನೀಡಿದೆ. 3ನೇ ದಿನದಾಟದ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 266 ರನ್ ಗಳಿಸಿದೆ.
ಪಾಕ್ ಆರಂಭಿಕರಾದ ಶಾನ್ ಮಸೂದ್ (59)-ಸಮಿ ಅಸ್ಲಾಮ್ (51) ಮೊದಲ ವಿಕೆಟಿಗೆ 114 ರನ್ ಪೇರಿಸಿ ಉತ್ತಮ ಆರಂಭ ಒದಗಿಸಿದರು. ಅಸದ್ ಶಫೀಕ್ 39 ಹಾಗೂ ಬಾಬರ್ ಆಜಂ 28 ರನ್ ಮಾಡಿ ನಿರ್ಗಮಿಸಿದರು. ಅಜರ್ ಅಲಿ 74 ರನ್ ಬಾರಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅಲಿ 5 ಸಾವಿರ ರನ್ ಪೂರ್ತಿಗೊಳಿಸಿದರು. ಆಜಂ ಔಟಾದೊಡನೆ ದಿನದಾಟವನ್ನು ಮುಗಿಸಲಾಯಿತು. ಲಂಕಾ ಪರ ಹೆರಾತ್ 2 ವಿಕೆಟ್ ಉರುಳಿಸಿದರು.
ನಾಯಕ ದಿನೇಶ್ ಚಂಡಿಮಾಲ್ ಅವರ 155 ರನ್ ಸಾಹಸ ಶ್ರೀಲಂಕಾ ಬ್ಯಾಟಿಂಗ್ ಸರದಿಯ ಆಕರ್ಷಣೆಯಾಗಿತ್ತು. ಕರುಣರತ್ನೆ 93, ಡಿಕ್ವೆಲ್ಲ 83 ರನ್ ಹೊಡೆದರು. ಪಾಕ್ ಪರ ಮೊಹಮ್ಮದ್ ಅಬ್ಟಾಸ್ ಮತ್ತು ಯಾಸಿರ್ ಷಾ ತಲಾ 3 ವಿಕೆಟ್ ಉರುಳಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.