ಲಂಕೆಗೆ ಮತ್ತೆ ಸೋಲು; ಪಾಕಿಗೆ ಸರಣಿ
Team Udayavani, Oct 29, 2017, 6:55 AM IST
ಅಬುದಾಭಿ: ದ್ವಿತೀಯ ಟಿ20 ಪಂದ್ಯದಲ್ಲೂ ಸಾಮಾನ್ಯ ಮಟ್ಟದ ಬ್ಯಾಟಿಂಗ್ ಪ್ರದರ್ಶಿಸಿದ ಶ್ರೀಲಂಕಾ 2 ವಿಕೆಟ್‌ಗಳಿಂದ ಪಾಕಿಸ್ಥಾನಕ್ಕೆ ಶರಣಾಗಿ ಸರಣಿಯನ್ನು ಕಳೆದುಕೊಂಡಿದೆ. ಸರಣಿಯ 3ನೇ ಹಾಗೂ ಅಂತಿಮ ಪಂದ್ಯ ರವಿವಾರ ಲಾಹೋರ್‌ನ “ಗದ್ದಾಫಿ ಸ್ಟೇಡಿಯಂ’ನಲ್ಲಿ ನಡೆಯಲಿದೆ. 8 ವರ್ಷಗಳ ಹಿಂದೆ ಲಾಹೋರ್‌ನಲ್ಲಿ ಭಯೋತ್ಪಾದಕ ದಾಳಿಗೆ ತುತ್ತಾದ ಶ್ರೀಲಂಕಾ ಕ್ರಿಕೆಟಿಗರಿಂದಲೇ ಪಾಕಿಸ್ಥಾನದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟಿಗೆ ನೂತನ ಆರಂಭ ಲಭಿಸುವುದೊಂದು ವಿಶೇಷ.
ಅಬುದಾಭಿಯಲ್ಲಿ ಶುಕ್ರವಾರ ರಾತ್ರಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಶ್ರೀಲಂಕಾಕ್ಕೆ ಗಳಿಸಲು ಸಾಧ್ಯವಾದದ್ದು 9ಕ್ಕೆ 124 ರನ್ ಮಾತ್ರ. ಆದರೆ ಇದನ್ನು ಬೆನ್ನಟ್ಟುವ ಹಾದಿಯಲ್ಲಿ ಪಾಕಿಸ್ಥಾನ ತೀವ್ರ ಸಂಕಟ ಹಾಗೂ ಒತ್ತಡಕ್ಕೆ ಸಿಲುಕಿತು. ಕೊನೆಗೂ ಒಂದು ಎಸೆತ ಬಾಕಿ ಉಳಿದಿರುವಾಗ 8 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು.
ಅಂತಿಮ ಓವರ್ ರೋಮಾಂಚನ
ವಿಕುಮ್ ಸಂಜಯ ಪಾಲಾದ ಆಂತಿಮ ಓವರಿನಲ್ಲಿ ಪಾಕ್ ಜಯಕ್ಕೆ 3 ವಿಕೆಟ್‌ಗಳಿಂದ 12 ರನ್ ಅಗತ್ಯವಿತ್ತು. ಮೊದಲ ಎಸೆತದಲ್ಲೇ ಫಾಹಿಮ್ ಅಶ್ರಫ್ ವಿಕೆಟ್ ಬಿತ್ತು. 2ನೇ ಎಸೆತದಲ್ಲಿ ಶಾದಾಬ್ ಖಾನ್ ಒಂದು ರನ್ ತೆಗೆದರು. ಬಳಿಕ ಹಸನ್ ಅಲಿಗೆ ಲಾಂಗ್‌ಆಫ್ನಲ್ಲೊಂದು ಜೀವದಾನ ಲಭಿಸಿತು. ಇದರಿಂದ 3 ರನ್ ಕೂಡ ಬಂತು. 4ನೇ ಎಸೆತವನ್ನು ಸಿಕ್ಸರ್‌ಗೆ ಅಟ್ಟಿದ ಶಾದಾಬ್, ಮುಂದಿನ ಎಸೆತದಲ್ಲಿ 2 ರನ್ ಬಾರಿಸಿ ಲಂಕೆಯ ಕೈಯಿಂದ ಗೆಲುವನ್ನು ಕಸಿದೇ ಬಿಟ್ಟರು!
ಶಾದಾಬ್ ಗಳಿಕೆ 8 ಎಸೆತಗಳಿಂದ 16 ರನ್.
ಬೌಲಿಂಗಿನಲ್ಲೂ ಮಿಂಚಿದ ಅವರು 4 ಓವರ್‌ಗಳಲ್ಲಿ ಕೇವಲ 14 ರನ್ ನೀಡಿ ಒಂದು ವಿಕೆಟ್ ಉರುಳಿಸಿದ್ದರು. ಈ ಸಾಧನೆಗಾಗಿ ಶಾದಾಬ್‌ಗ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿದು ಬಂತು. 28 ರನ್ ಮಾಡಿದ ನಾಯಕ ಸಫìರಾಜ್ ಅಹ್ಮದ್ ಪಾಕ್ ಸರದಿಯ ಟಾಪ್ ಸ್ಕೋರರ್. ಅಹ್ಮದ್ ಶೆಹಜಾದ್ 27 ರನ್ ಮಾಡಿದರು.
ಶ್ರೀಲಂಕಾದ ಅಗ್ರ ಕ್ರಮಾಂಕದ ಬ್ಯಾಟಿಂಗ್ ಉತ್ತಮ ಮಟ್ಟದಲ್ಲೇ ಇತ್ತು. ಆರಂಭಿಕರಾದ ಗುಣತಿಲಕ 51, ಮುನವೀರ 19 ಹಾಗೂ ವನ್‌ಡೌನ್ ಬ್ಯಾಟ್ಸ್‌ಮನ್ ಸಮರವಿಕ್ರಮ 32 ರನ್ ಬಾರಿಸಿದರು. ಉಳಿದವರೆಲ್ಲ ಸೇರಿ ಗಳಿಸಿದ್ದು ಕೇವಲ 18 ರನ್ ಮಾತ್ರ. 16ನೇ ಓವರ್ ಮುಕ್ತಾಯಕ್ಕೆ ಒಂದು ವಿಕೆಟಿಗೆ 106 ರನ್ ಮಾಡಿದ್ದ ಲಂಕಾ ಬಳಿಕ ನಾಟಕೀಯ ಕುಸಿತಕ್ಕೆ ಸಿಲುಕಿತು.
ಸಂಕ್ಷಿಪ್ತ ಸ್ಕೋರ್: ಶ್ರೀಲಂಕಾ-9 ವಿಕೆಟಿಗೆ 124 (ಗುಣತಿಲಕ 51, ಸಮರವಿಕ್ರಮ 32, ಮುನವೀರ 19, ಫಾಹಿಮ್ ಅಶ್ರಫ್ 16ಕ್ಕೆ 3, ಹಸನ್ ಅಲಿ 31ಕ್ಕೆ 2). ಪಾಕಿಸ್ಥಾನ-19.5 ಓವರ್‌ಗಳಲ್ಲಿ 8 ವಿಕೆಟಿಗೆ 125 (ಸಫìರಾಜ್ 28, ಶೆಹಜಾದ್ 27, ಶಾದಾಬ್ ಔಟಾಗದೆ 16, ತಿಸರ ಪೆರೆರ 24ಕ್ಕೆ 3). ಪಂದ್ಯಶ್ರೇಷ್ಠ: ಶಾದಾಬ್ ಖಾನ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Test: ಇಂಗ್ಲೆಂಡ್ ಸರಣಿಯ ಬಳಿಕ ಟೆಸ್ಟ್ ಕ್ರಿಕೆಟ್ ನಿಂದ ದೂರವಾಗಲಿದ್ದಾರೆ ಕಿವೀಸ್ ಆಟಗಾರ
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್; ಗಾಯಗೊಂಡ ರಾಹುಲ್
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
K.L. Rahul; ಕುಡ್ಲದ ಜನರ ಬೆಂಬಲವೇ ಸಾಧನೆಗೆ ಕಾರಣ
MUST WATCH
ಹೊಸ ಸೇರ್ಪಡೆ
Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಎತ್ತು ಸಾವು
Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.