ಪಾಕಿಸ್ಥಾನಕ್ಕೆ ಮತ್ತೆ ಸೋಲು
Team Udayavani, Jan 17, 2018, 12:30 PM IST
ಹ್ಯಾಮಿಲ್ಟನ್: ಆಲ್‌ರೌಂಡ್ ಆಟದ ಪ್ರದರ್ಶನ ನೀಡಿದ ನ್ಯೂಜಿಲ್ಯಾಂಡ್ ತಂಡವು ಮತ್ತೆ ಪಾಕಿಸ್ಥಾನ ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸಿದೆ. ಈ ಗೆಲುವಿನಿಂದ ನ್ಯೂಜಿಲ್ಯಾಂಡ್ ಐದು ಪಂದ್ಯಗಳ ಸರಣಿಯಲ್ಲಿ 4-0 ಮುನ್ನಡೆ ಸಾಧಿಸಿದ್ದು ಕ್ಲೀನ್‌ಸ್ವೀಪ್‌ಗೈಯುವ ಗುರಿ ಇಟ್ಟುಕೊಂಡಿದೆ.
ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ಥಾನ ತಂಡವು 8 ವಿಕೆಟಿಗೆ 262 ರನ್ನುಗಳ ಉತ್ತಮ ಮೊತ್ತ ಪೇರಿಸಿತು. ಒಂದು ಹಂತದಲ್ಲಿ 130 ರನ್ನಿಗೆ 5 ವಿಕೆಟ್ ಕಳೆದುಕೊಂಡಿದ್ದ ಪಾಕಿಸ್ಥಾನಕ್ಕೆ ಮೊಹಮ್ಮದ್ ಹಫೀಜ್ ಮತ್ತು ನಾಯಕ ಸಫìರಾಜ್ ಅಹ್ಮದ್ ಆಸರೆಯಾದರು. ಅವರಿಬ್ಬರು ಆರನೇ ವಿಕೆಟಿಗೆ 98 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡ ಕಾರಣ ಪಾಕಿಸ್ಥಾನ ಚೇತರಿಸಿಕೊಂಡಿತು.
ಗೆಲ್ಲಲು 263 ರನ್ ತೆಗೆಯುವ ಸವಾಲು ಪಡೆದ ನ್ಯೂಜಿಲ್ಯಾಂಡ್ ಕೂಡ ಒಂದು ಹಂತದಲ್ಲಿ 154 ರನ್ನಿಗೆ 5 ವಿಕೆಟ್ ಕಳೆದುಕೊಂಡು ಒದ್ದಾಡುತ್ತಿತ್ತು. ಆದರೆ ಹೆನ್ರಿ ನಿಕೋಲ್ಸ್ ಮತ್ತು ಗ್ರ್ಯಾಂಡ್‌ಹೋಮ್ ಮುರಿಯದ ಆರನೇ ವಿಕೆಟಿಗೆ 109 ರನ್ನುಗಳ ಜತೆಯಾಟ ನಡೆಸಿದ್ದರಿಂದ ನ್ಯೂಜಿಲ್ಯಾಂಡ್ 45.5 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ ಜಯಭೇರಿ ಬಾರಿಸುವಂತಾಯಿತು.
ಪಾಕಿಸ್ಥಾನದ ಮಲಿಕ್ ಪಾರು
ಹ್ಯಾಮಿಲ್ಟನ್: ಪಾಕಿಸ್ಥಾನ ಮತ್ತು ನ್ಯೂಜಿಲ್ಯಾಂಡ್ ನಡುವಿನ 4ನೇ ಏಕದಿನ ಪಂದ್ಯದಲ್ಲಿ ಭಾರೀ ದುರ್ಘಟನೆಯೊಂದು ತಪ್ಪಿದೆ. ಪಾಕಿಸ್ಥಾನದ ಶೋಯಿಬ್ ಮಲಿಕ್ ದುರ್ಮರಣದಿಂದ ಬಚಾವಾಗಿದ್ದಾರೆ. ನ್ಯೂಜಿ ಲ್ಯಾಂಡ್‌ನ ಸ್ಪಿನ್ನರ್‌ಗಳು ಬೌಲಿಂಗ್ ಮಾಡುತ್ತಿದ್ದರಿಂದ ಮಲಿಕ್ ಹೆಲ್ಮೆಟ್ ಧರಿಸದೇ ಆಡುತ್ತಿದ್ದರು. 32ನೆ ಓವರ್‌ನಲ್ಲಿ ಮಲಿಕ್ ಅವರು ರನ್ ಗಳಿಸಲು ಓಡಿದಾಗ ಮತ್ತೂಬ್ಬ ಬ್ಯಾಟ್ಸ್‌ಮನ್ ಮೊಹಮ್ಮದ್ ಹಫೀಜ್ ಹಿಂದಕ್ಕೆ ಕಳಿಸಿದರು. ಅದೇ ವೇಳೆ ನ್ಯೂಜಿಲ್ಯಾಂಡ್ ಕ್ಷೇತ್ರರಕ್ಷಕ ಕಾಲಿನ್ ಮನ್ರೊ ಸ್ಪಂಪ್‌ಗೆ ಗುರಿ ಮಾಡಿ ಚೆಂಡನ್ನು ಎಸೆದಿದ್ದರು. ಅದು ನೇರವಾಗಿ ಮಲಿಕ್ ತಲೆಗೆ ಬಡಿದಿದೆ. ಕೂಡಲೇ ಮಲಿಕ್ ಕುಸಿದು ಬಿದ್ದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ICC ಪಿಚ್ ರೇಟಿಂಗ್: ಸಿಡ್ನಿ ತೃಪ್ತಿಕರ, ಉಳಿದವು ಅತ್ಯುತ್ತಮ
ICC Bowling Ranking: ಐಸಿಸಿ ಬೌಲಿಂಗ್ ರ್‍ಯಾಂಕಿಂಗ್… ಬುಮ್ರಾ ಅಗ್ರಸ್ಥಾನ ಗಟ್ಟಿ
Cricket; ಮಹಿಳಾ ಅಂಡರ್-19 ಏಕದಿನ ಟ್ರೋಫಿ: ಅಸ್ಸಾಂ ವಿರುದ್ಧ ಕರ್ನಾಟಕಕ್ಕೆ ಜಯ
NZ vs SL: ಮಳೆ ಪಂದ್ಯದಲ್ಲಿ ಎಡವಿದ ಲಂಕಾ ; ಏಕದಿನ ಸರಣಿ ಗೆದ್ದ ನ್ಯೂಜಿಲ್ಯಾಂಡ್
Retirement: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಸ್ಫೋಟಕ ಆಟಗಾರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.