PAKvsENG: ಬಾಬರ್ ಅಜಂಗೆ ಸಂಕಷ್ಟ ತಂದ ಕಮ್ರಾನ್ ಘುಲಾಂ ಶತಕ
Team Udayavani, Oct 15, 2024, 8:18 PM IST
ಮುಲ್ತಾನ್: ಪ್ರವಾಸಿ ಇಂಗ್ಲೆಂಡ್ ವಿರುದ್ದದ ಟೆಸ್ಟ್ ಸರಣಿಯ ಆರಂಭದ ಪಂದ್ಯದಲ್ಲಿ ಅವಮಾನಕಾರಿಯಾಗಿ ಸೋಲನುಭವಿಸಿದ ಪಾಕಿಸ್ತಾನ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಉತ್ತಮ ಮೊತ್ತ ಸಂಪಾದಿಸಿದೆ. ಮೊದಲ ದಿನದಾಟದ ಅಂತ್ಯಕ್ಕೆ ಐದು ವಿಕೆಟ್ ನಷ್ಟಕ್ಕೆ 259 ರನ್ ಗಳಿಸಿದೆ.
ಮೊದಲ ಪಂದ್ಯದಲ್ಲಿ ಬೃಹತ್ ಮೊತ್ತ ಸಂಪಾದಿಸಿದ್ದರೂ ಸೋಲು ಕಂಡ ಬಳಿಕ ಪಾಕಿಸ್ತಾನ ತಂಡದಲ್ಲಿ ಮೇಜರ್ ಸರ್ಜರಿ ಮಾಡಲಾಗಿದೆ. ಎರಡನೇ ಮತ್ತು ಮೂರನೇ ಪಂದ್ಯಕ್ಕಾಗಿ ಪ್ರಮುಖ ಬ್ಯಾಟರ್ ಬಾಬರ್ ಅಜಂ, ಸ್ಟಾರ್ ವೇಗಿಗಳಾದ ಶಹೀನ್ ಶಾ ಅಫ್ರೀದಿ ಮತ್ತು ನಸೀಂ ಶಾ ಅವರನ್ನು ಕೈಬಿಡಲಾಗಿದೆ.
ಬಾಬರ್ ಅಜಂ ಅವರ ಸ್ಥಾನದಲ್ಲಿ ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ ಕಮ್ರಾನ್ ಘುಲಾಂ ಚೊಚ್ಚಲ ಪಂದ್ಯದಲ್ಲೇ ಶತಕ ಬಾರಿಸಿ ಮಿಂಚಿದ್ದಾರೆ. ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಬಂದ ಘುಲಾಂ 224 ಎಸೆತಗಳಲ್ಲಿ 118 ರನ್ ಮಾಡಿದರು. ಅತ್ಯುತ್ತಮ ಆಡುತ್ತಿದ್ದ ಘುಲಾಂ ದಿನದ ಕೊನೆಯಲ್ಲಿ ಸ್ಪಿನ್ನರ್ ಶೋಯೆಬ್ ಬಶೀರ್ ಗೆ ಔಟಾದರು.
ಉಳಿದಂತೆ ಸ್ಯಾಮ್ ಆಯುಬ್ 77 ರನ್ ಗಳಿಸಿದರು. ದಿನದಾಟದ ಅಂತ್ಯಕ್ಕೆ ಮೊಹಮ್ಮದ್ ರಿಜ್ವಾನ್ 37 ರನ್ ಗಳಿಸಿ ಆಡುತ್ತಿದ್ದಾರೆ.
ಇಂಗ್ಲೆಂಡ್ ಪರ ಜ್ಯಾಕ್ ಲೀಚ್ ಎರಡು ವಿಕೆಟ್, ಮ್ಯಾಥ್ಯೂ ಪಾಟ್ಸ್, ಬ್ರೈಡನ್ ಕಾರ್ಸ್, ಶೋಯೆಬ್ ಬಶೀರ್ ತಲಾ ಒಂದು ವಿಕೆಟ್ ಕಿತ್ತರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Football ಮಾಜಿ ತಾರೆ ಮಿಖಾಯಿಲ್ ಈಗ ಜಾರ್ಜಿಯಾ ಅಧ್ಯಕ್ಷ
Australia vs India 3rd Test; ಭಾರತಕ್ಕೆ ಮತ್ತೆ ತಲೆ ನೋವಾದ ಹೆಡ್,ಸ್ಮಿತ್ ಅಮೋಘ ಶತಕಗಳು
India vs West Indies ವನಿತಾ ಟಿ20:ಸತತ ವೈಫಲ್ಯ ಕಾಣುತ್ತಿರುವ ಕೌರ್ ನಾಯಕತ್ವಕ್ಕೆ ಸವಾಲು
T20; 3 ನೇ ಪಂದ್ಯ ರದ್ದು : ಪಾಕಿಸ್ಥಾನ ವಿರುದ್ಧ ಸರಣಿ ಗೆದ್ದ ದಕ್ಷಿಣ ಆಫ್ರಿಕಾ
Women’s Premier League 2025;ಇಂದು ಬೆಂಗಳೂರಿನಲ್ಲಿ ಹರಾಜು: RCBಯಲ್ಲಿ 4ಸ್ಥಾನ ಖಾಲಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.