ಆಸೀಸ್ ವಿರುದ್ಧ ಸರಣಿ ವಿಕ್ರಮ
Team Udayavani, Sep 25, 2017, 12:09 PM IST
ಇಂದೋರ್: ಆರಂಭಿಕರಾದ ರೋಹಿತ್ ಶರ್ಮ, ಅಜಿಂಕ್ಯ ರಹಾನೆ ಮತ್ತು ಹಾರ್ದಿಕ್ ಪಾಂಡ್ಯ ಅವರ ಅಮೋಘ ಆಟದಿಂದಾಗಿ ಭಾರತ ತಂಡವು ಪ್ರವಾಸಿ ಆಸ್ಟ್ರೇಲಿಯ ವಿರುದ್ಧ ರವಿವಾರ ನಡೆದ ಮೂರನೇ ಪಂದ್ಯದಲ್ಲಿ 5 ವಿಕೆಟ್‌ಗಳ ಜಯಭೇರಿ ಬಾರಿಸಿತಲ್ಲದೇ ಐದು ಪಂದ್ಯಗಳ ಸರಣಿಯಲ್ಲಿ 3-0 ಮುನ್ನಡೆಯೊಂದಿಗೆ ಸರಣಿ ತನ್ನದಾಗಿಸಿಕೊಂಡಿದೆ. ಈ ಸಾಧನೆಯಿಂದ ಭಾರತ ಮುಂದಿನ ಐಸಿಸಿ ರ್‍ಯಾಂಕಿಂಗ್‌ನಲ್ಲಿ ವಿಶ್ವದ ನಂಬರ್ ವನ್ ಸ್ಥಾನಕ್ಕೇರಲಿದೆ.
ಆಸ್ಟ್ರೇಲಿಯ ನೀಡಿದ 294 ರನ್ ಗೆಲುವಿನ ಕಠಿನ ಸವಾಲಿಗೆ ದಿಟ್ಟ ಉತ್ತರ ನೀಡಿದ ಭಾರತವು 47.5 ಓವರ್‌ಗಳಲ್ಲಿ ಕೇವಲ 5 ವಿಕೆಟಿಗೆ ಗುರಿ ತಲುಪಿ ವಿಜಯೋತ್ಸವ ಆಚರಿಸಿತು. ಆರಂಭಿಕರಾದ ರೋಹಿತ್ ಮತ್ತು ರಹಾನೆ ಅವರ ಅಮೋಘ ಆಟದಿಂದಾಗಿ ಭಾರತ ಸುಲಭ ಗೆಲುವು ಕಾಣುವಂತಾಯಿತು. ಆಸ್ಟ್ರೇ ಲಿಯ ದಾಳಿಯನ್ನು ತೀವ್ರವಾಗಿ ದಂಡಿಸಿದ ಅವರಿಬ್ಬರು ಮೊದಲ ವಿಕೆಟಿಗೆ 21.4 ಓವರ್‌ಗಳಲ್ಲಿ 139 ರನ್ ಪೇರಿಸಿ ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ಟರು. ಆದರೆ ಅವರಿಬ್ಬರು 8 ರನ್ ಅಂತರದಲ್ಲಿ ಪೆವಿಲಿಯನ್ ಸೇರಿಕೊಂಡರು. ರೋಹಿತ್ 62 ಎಸೆತ ಎದುರಿಸಿ 6 ಬೌಂಡರಿ ಮತ್ತು 4 ಸಿಕ್ಸರ್ ನೆರವಿನಿಂದ 71 ರನ್ ಗಳಿಸಿ ಮೊದಲಿಗರಾಗಿ ಔಟಾದರೆ ರಹಾನೆ 76 ಎಸೆತಗಳಿಂದ 70 ರನ್ ಹೊಡೆದರು. 9 ಬೌಂಡರಿ ಬಾರಿಸಿದ್ದರು.
ಆರಂಭಿಕರ ನಿರ್ಗಮನದ ಬಳಿಕ ಕ್ರೀಸ್‌ನಲ್ಲಿದ್ದ ನಾಯಕ ವಿರಾಟ್ ಕೊಹ್ಲಿ ಮತ್ತು ಭಡ್ತಿ ಪಡೆದು ಬ್ಯಾಟಿಂಗಿಗೆ ಆಗಮಿಸಿದ ಹಾರ್ದಿಕ್ ಪಾಂಡ್ಯ ತಂಡವನ್ನು ಆಧರಿಸುವ ಪ್ರಯತ್ನ ಮಾಡಿದರು. ಅವರಿಬ್ಬರು ಮೂರನೇ ವಿಕೆಟಿಗೆ 56 ರನ್ ಪೇರಿಸಿ ಬೇರ್ಪಟ್ಟರು. ಉತ್ತಮವಾಗಿ ಆಡುತ್ತಿದ್ದ ಕೊಹ್ಲಿ 28 ರನ್ ಗಳಿಸಿ ಔಟಾದರೆ ಕೇದಾರ್ ಜಾಧವ್ 2 ರನ್ ಗಳಿಸಲಷ್ಟೇ ಶಕ್ತರಾದರು. ಇವರಿಬ್ಬರ ವಿಕೆಟ್ ಬೇಗನೇ ಉರುಳಿದಾಗ ಭಾರತ ಆಘಾತಕ್ಕೆ ಒಳಗಾಯಿತು. ಆದರೆ ಹಾರ್ದಿಕ್ ಪಾಂಡ್ಯ ಮತ್ತು ಮನೀಷ್ ಪಾಂಡೆ ಜವಾಬ್ದಾರಿಯಿಂದ ಆಡಿ 78 ರನ್ ಪೇರಿಸಿ ತಂಡದ ಗೆಲುವು ಖಚಿತಪಡಿಸಿದರು. ಗೆಲ್ಲಲು 10 ರನ್ ಗಳಿರುವಾಗ ಹಾರ್ದಿಕ್ ಔಟಾದರು. 72 ಎಸೆತ ಎದುರಿಸಿದ ಅವರು 5 ಬೌಂಡರಿ ಮತ್ತು 4 ಸಿಕ್ಸರ್ ನೆರವಿನಿಂದ 78 ರನ್ ಹೊಡೆದರು. ಅರ್ಹವಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಫಿಂಚ್; ಸೆಂಚುರಿ ಮಿಂಚ್!
ಮೊದಲೆರಡು ಪಂದ್ಯಗಳಲ್ಲಿ ಗಾಯಾಳಾಗಿ ಹೊರಗುಳಿದಿದ್ದ ಆರಂಭಕಾರ ಆರನ್ ಫಿಂಚ್ ತಮ್ಮ “ಸರಣಿ ಪ್ರವೇಶ’ವನ್ನು ಸೆಂಚುರಿಯೊಂದಿಗೆ ಆರಂಭಿಸಿದ್ದು ಆಸ್ಟ್ರೇಲಿಯ ಇನ್ನಿಂಗ್ಸಿನ ವಿಶೇಷ ವಾಗಿತ್ತು. ಇವರೊಂದಿಗೆ ಡೇವಿಡ್ ವಾರ್ನರ್, ನಾಯಕ ಸ್ಟೀವ್ ಸ್ಮಿತ್ ಕೂಡ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದರು. ಈ ಮೂವರ ಹಾರಾಟ ಕಂಡಾಗ ಕಾಂಗರೂ ಸ್ಕೋರ್ 350ರ ಗಡಿ ಮುಟ್ಟುತ್ತದೆಂದೇ ಭಾವಿಸ ಲಾಗಿತ್ತು. ಆದರೆ ಅಂತಿಮ 12 ಓವರ್‌ಗಳಲ್ಲಿ ಅಮೋಘ ಬೌಲಿಂಗ್ ಪ್ರದರ್ಶಿಸಿದ ಭಾರತ, ಕಾಂಗರೂ ಬ್ಯಾಟಿಂಗಿಗೆ ದೊಡ್ಡ ಬ್ರೇಕ್ ಹಾಕುವಲ್ಲಿ ಯಶಸ್ವಿಯಾಯಿತು. ಕೊನೆಯಲ್ಲಿ 300 ರನ್ ಕೂಡ ಆಸೀಸ್‌ಗೆ ಮರೀಚಿಕೆಯಾಯಿತು.
38ನೇ ಓವರ್ ವೇಳೆ ಆಸ್ಟ್ರೇಲಿಯ ಒಂದೇ ವಿಕೆಟಿಗೆ 224 ರನ್ ಬಾರಿಸಿ ಮುನ್ನುಗ್ಗುತ್ತಿತ್ತು. ಆದರೆ ಅನಂತರದ 12 ಓವರ್‌ಗಳಲ್ಲಿ ಭಾರತ ಜಬರ್ದಸ್ತ್ ಬೌಲಿಂಗ್ ಮೂಲಕ ಕಾಂಗರೂ ಮೇಲೆ ನಿಯಂತ್ರಣ ಸಾಧಿಸಿತು. ಈ ಅವಧಿಯಲ್ಲಿ ಬಂದದ್ದು ಕೇವಲ 69 ರನ್ ಮಾತ್ರ. ಕೊನೆಯ 10 ಓವರ್‌ಗಳಲ್ಲಿ ಆಸೀಸ್ ಕೇವಲ 59 ರನ್ ಗಳಿಸುವುದರ ಜತೆಗೆ 4 ವಿಕೆಟ್ ಕಳೆದುಕೊಂಡಿತು.
ಆಸ್ಟ್ರೇಲಿಯದ ಇನ್ನಿಂಗ್ಸ್ ಆರನ್ ಫಿಂಚ್ ಅವರ 8ನೇ ಶತಕದೊಂದಿಗೆ ಸಿಂಗಾರಗೊಂಡಿತು. ಫಿಂಚ್ ಗಳಿಕೆ 124 ರನ್. 125 ಎಸೆತಗಳ ಈ ಆಕರ್ಷಕ ಆಟದಲ್ಲಿ 12 ಬೌಂಡರಿ ಹಾಗೂ 5 ಪ್ರಚಂಡ ಸಿಕ್ಸರ್ ಒಳಗೊಂಡಿತ್ತು. ಈ ಬಿರುಸಿನ ಬ್ಯಾಟಿಂಗ್ ವೇಳೆ ಅವರು ಗೂಗ್ಲಿ ಬೌಲರ್‌ಗಳನ್ನು ಚೆನ್ನಾಗಿ ದಂಡಿಸಿದರು. ಮುಖ್ಯವಾಗಿ ಚೈನಾಮನ್ ಬೌಲರ್ ಯಾದವ್ ಅವರನ್ನು ಟಾರ್ಗೆಟ್ ಮಾಡಿಕೊಂಡಂತಿತ್ತು. ಯಾದವ್ ಅವರ 26 ಎಸೆತಗಳಿಂದ ಫಿಂಚ್ 41 ರನ್ ಬಾರಿಸಿದರು. ಫಿಂಚ್ ಅವರ ಅರ್ಧ ಶತಕ 61 ಎಸೆತಗಳಲ್ಲಿ ಬಂದರೆ, ಶತಕ 110 ಎಸೆತಗಳಲ್ಲಿ ಪೂರ್ತಿಗೊಂಡಿತು.
ಇದು ಭಾರತದೆದುರು ಫಿಂಚ್ ಹೊಡೆದ 2ನೇ ಶತಕ. ಕಳೆದ ವರ್ಷ ಕ್ಯಾನ್‌ಬೆರ್ರಾದಲ್ಲಿ 107 ರನ್ ಗಳಿಸಿದ್ದರು.
ಡೇವಿಡ್ ವಾರ್ನರ್ 44 ಎಸೆತಗಳಿಂದ 42 ರನ್ ಮಾಡಿದರು. ಸಿಡಿಸಿದ್ದು 4 ಬೌಂಡರಿ ಹಾಗೂ ಒಂದು ಸಿಕ್ಸರ್. ವಾರ್ನರ್-ಫಿಂಚ್ 13.3 ಓವರ್‌ಗಳ ಜತೆಯಾಟದಲ್ಲಿ 70 ರನ್ ಒಟ್ಟುಗೂಡಿಸಿದರು.
154 ರನ್ ಜತೆಯಾಟ
ನಾಯಕ ಸ್ಟೀವ್ ಸ್ಮಿತ್ ಸತತ 2ನೇ ಅರ್ಧ ಶತಕದೊಂದಿಗೆ ಗಮನ ಸೆಳೆದರು. “ಕಪ್ತಾನನ ಆಟ’ದಲ್ಲಿ 63 ರನ್ ಹರಿದು ಬಂತು. 71 ಎಸೆತ ಎದುರಿಸಿದ ಸ್ಮಿತ್ 5 ಬೌಂಡರಿ ಹೊಡೆದರು. ಫಿಂಚ್-ಸ್ಮಿತ್ ದ್ವಿತೀಯ ವಿಕೆಟಿಗೆ 24.2 ಓವರ್‌ಗಳಿಂದ 154 ರನ್ ಪೇರಿಸುವ ವೇಳೆ ಭಾರತದ ಬೌಲಿಂಗ್ ಲಯ ಕಳೆದುಕೊಂಡಿತ್ತು. ಆದರೆ ಬೇರೂರಿ ನಿಂತಿದ್ದ ಫಿಂಚ್ ಮತ್ತು ಸ್ಮಿತ್ ಅವರನ್ನು 19 ರನ್ ಅಂತರದಲ್ಲಿ ಪೆವಿಲಿಯನ್ನಿಗೆ ಅಟ್ಟಿದ ಯಾದವ್ ಭಾರತದ ಕೈ ಮೇಲಾಗುವಂತೆ ನೋಡಿಕೊಂಡರು. ಬೆನ್ನಲ್ಲೇ ಬಿಗ್ ಹಿಟ್ಟರ್ ಮ್ಯಾಕ್ಸ್‌ವೆಲ್ (5) ವಿಕೆಟ್ ಕೂಡ ಬಿತ್ತು. ಚಾಹಲ್ ಎಸೆತವನ್ನು ಮುನ್ನುಗ್ಗಿ ಬಾರಿಸಲು ಹೋದ ಅವರು ಧೋನಿಯ ಮಿಂಚಿನ ಸ್ಟಂಪಿಂಗಿಗೆ ಬಲಿಯಾದರು.
ಹ್ಯಾಂಡ್ಸ್‌ಕಾಂಬ್, ಫಿಂಚ್ ಸೇರ್ಪಡೆ
ಇಂದೋರ್ ಪಂದ್ಯಕ್ಕಾಗಿ ಆಸ್ಟ್ರೇಲಿಯ ತಂಡದಲ್ಲಿ 2 ಬದ ಲಾವಣೆ ಮಾಡಿಕೊಳ್ಳಲಾಯಿತು. ಗಾಯದಿಂದ ಚೇತರಿಸಿಕೊಂಡ ಆರಂಭಕಾರ ಆರನ್ ಫಿಂಚ್ ಮತ್ತು ಇವರ ಬದಲು ಆಸ್ಟ್ರೇಲಿಯದಿಂದ ಹಾರಿಬಂದಿದ್ದ ಪೀಟರ್ ಹ್ಯಾಂಡ್ಸ್‌ಕಾಂಬ್ ಅವರನ್ನು ಆಡುವ ಬಳಗಕ್ಕೆ ಸೇರಿಸಿಕೊಳ್ಳಲಾಯಿತು. ಇವರಿಬ್ಬರಿಗಾಗಿ ಸ್ಥಾನ ತೆರವುಗೊಳಿಸಿ ದವರು ಹಿಲ್ಟನ್ ಕಾರ್ಟ್‌ರೈಟ್ ಮತ್ತು ಮ್ಯಾಥ್ಯೂ ವೇಡ್. ಕೀಪರ್ ವೇಡ್ ಅನುಪಸ್ಥಿತಿಯಲ್ಲಿ ಹ್ಯಾಂಡ್ಸ್‌ಕಾಂಬ್ ವಿಕೆಟ್ ಕೀಪಿಂಗ್ ಹೊಣೆ ಹೊತ್ತರು. ಭಾರತ ತಂಡದಲ್ಲಿ ಯಾವುದೇ ಬದಲಾವಣೆ ಕಂಡುಬರಲಿಲ್ಲ. ಹಿಂದಿನ ಎರಡೂ ಪಂದ್ಯಗಳಲ್ಲಿ ವಿಫಲರಾಗಿದ್ದ ಮನೀಷ್ ಪಾಂಡೆ ಸ್ಥಾನ ಉಳಿಸಿಕೊಳ್ಳು ವಲ್ಲಿ ಯಶಸ್ವಿಯಾದರು.
ಸ್ಕೋರ್‌ಪಟ್ಟಿ
ಆಸ್ಟ್ರೇಲಿಯ
ಡೇವಿಡ್ ವಾರ್ನರ್ ಬಿ ಪಾಂಡ್ಯ 42
ಆರನ್ ಫಿಂಚ್ ಸಿ ಜಾಧವ್ ಬಿ ಯಾದವ್ 124
ಸ್ಟೀವ್ ಸ್ಮಿತ್ ಸಿ ಬುಮ್ರಾ ಬಿ ಯಾದವ್ 63
ಗ್ಲೆನ್ ಮ್ಯಾಕ್ಸ್‌ವೆಲ್ ಸ್ಟಂಪ್ಡ್ ಧೋನಿ ಬಿ ಚಾಹಲ್ 5
ಟ್ರ್ಯಾವಿಸ್ ಹೆಡ್ ಬಿ ಬುಮ್ರಾ 4
ಮಾರ್ಕಸ್ ಸ್ಟೊಯಿನಿಸ್ ಔಟಾಗದೆ 27
ಪೀಟರ್ ಹ್ಯಾಂಡ್ಸ್‌ಕಾಂಬ್ ಸಿ ಪಾಂಡೆ ಬಿ ಬುಮ್ರಾ 3
ಆ್ಯಶrನ್ ಅಗರ್ ಔಟಾಗದೆ 9
ಇತರ 16
ಒಟ್ಟು (50 ಓವರ್‌ಗಳಲ್ಲಿ 6 ವಿಕೆಟಿಗೆ) 293
ವಿಕೆಟ್ ಪತನ: 1-70, 2-224, 3-243, 4-243, 5-260, 6-275.
ಬೌಲಿಂಗ್:
ಭುವನೇಶ್ವರ್ ಕುಮಾರ್ 10-0-52-0
ಜಸ್‌ಪ್ರೀತ್ ಬುಮ್ರಾ 10-0-52-2
ಯಜುವೇಂದ್ರ ಚಾಹಲ್ 10-0-54-1
ಹಾರ್ದಿಕ್ ಪಾಂಡ್ಯ 10-0-58-1
ಕುಲದೀಪ್ ಯಾದವ್ 10-0-75-2
ಭಾರತ
ಅಜಿಂಕ್ಯ ರಹಾನೆ ಎಲ್‌ಬಿಡಬ್ಲ್ಯು ಕಮಿನ್ಸ್ 70
ರೋಹಿತ್ ಶರ್ಮ ಸಿ ಬದಲಿಗ ಬಿ ನೈಲ್ 71
ವಿರಾಟ್ ಕೊಹ್ಲಿ ಸಿ ಫಿಂಜ್ ಬಿ ಅಗರ್ 28
ಹಾರ್ದಿಕ್ ಪಾಂಡ್ಯ ಸಿ ರಿಚಡ್ಸìನ್ ಬಿ ಕಮಿನ್ಸ್ 78
ಕೇದಾರ್ ಜಾಧವ್ ಸಿ ಹ್ಯಾಂಡ್ಸ್‌ಕಾಂಬ್ ಬಿ ರಿಚಡ್ಸìನ್ 2
ಮನೀಷ್ ಪಾಂಡೆ ಔಟಾಗದೆ 36
ಎಂಎಸ್ ಧೋನಿ ಔಟಾಗದೆ 3
ಇತರ: 6
ಒಟ್ಟು (47.5 ಓವರ್‌ಗಳಲ್ಲಿ 5 ವಿಕೆಟಿಗೆ) 294
ವಿಕೆಟ್ ಪತನ: 1-139, 2-147, 3-203, 4-206, 5-284
ಬೌಲಿಂಗ್:
ಪ್ಯಾಟ್ ಕಮಿನ್ಸ್ 10-0-54-2
ನಥನ್ ಕೋಲ್ಟರ್ ನೈಲ್ 10-0-58-1
ಕೇನ್ ರಿಚಡ್ಸìನ್ 8.5-0-45-1
ಮಾರ್ಕಸ್ ಸ್ಟೋಯಿನಿಸ್ 8-0-61-0
ಆ್ಯಸ್ಟನ್ ಅಗರ್ 10-0-71-1
ಗ್ಲೆನ್ ಮ್ಯಾಕ್ಸ್‌ವೆಲ್ 1-0-2-0
ಪಂದ್ಯಶ್ರೇಷ್ಠ: ಹಾರ್ದಿಕ್ ಪಾಂಡ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.