ಇಕ್ವಾಡೋರ್, ಜಪಾನ್‌ಗೆ ಹೃದಯಾಘಾತ; ಪರಗ್ವೆ ಕ್ವಾ. ಫೈನಲಿಗೆ
Team Udayavani, Jun 26, 2019, 5:28 AM IST
ಬೆಲೊ ಹಾರಿಝಾಂಟೆ: ಕೊಪಾ ಅಮೆರಿಕ ಫುಟ್‌ಬಾಲ್ ಪಂದ್ಯಾಟದ ಅಂತಿಮ ಲೀಗ್ ಪಂದ್ಯ ಡ್ರಾಗೊಳ್ಳುವ ಮೂಲಕ ಜಪಾನ್ ಮತ್ತು ಇಕ್ವಾಡೋರ್‌ಗೆ ಹೃದಯಾಘಾತವಾಗಿದೆ. ಈ ಪಂದ್ಯದ ವಿಜೇತ ತಂಡಕ್ಕೆ ಕೊಪಾ ಅಮೆರಿಕ ಫುಟ್‌ಬಾಲ್ ಕೂಟದ ಕ್ವಾರ್ಟರ್‌ಫೈನಲಿಗೇರುವ ಅವಕಾಶವಿತ್ತು. ಆದರೆ ಪಂದ್ಯ ಡ್ರಾಗೊಂಡ ಕಾರಣ ಎರಡೂ ತಂಡಗಳು ಹೊರಬಿದ್ದಿವೆ. ಪರಗ್ವೆ ಕೊನೆಯ ತಂಡವಾಗಿ ಕ್ವಾರ್ಟರ್‌ಫೈನಲಿಗೇರಿದೆ.
ಕ್ವಾರ್ಟರ್‌ಫೈನಲಿಗೇರಬೇಕಾದರೆ ಜಪಾನ್ ಮತ್ತು ಇಕ್ವಾಡೋರ್‌ಗೆ ಗೆಲುವು ಅನಿವಾರ್ಯವಾಗಿತ್ತು. ಹಾಗಾಗಿ ತೀವ್ರ ಹೋರಾಟ ನಡೆಸಿದ್ದವು. ಆದರೆ ಪಂದ್ಯ 1-1ರಿಂದ ಡ್ರಾ ಗೊಂಡು ಉಭಯ ತಂಡಗಳು ಆಘಾತಕ್ಕೆ ಒಳಗಾದವು. 15ನೇ ನಿಮಿಷದಲ್ಲಿ ಶೋಯ ನಕಜಿಮ ಗೋಲನ್ನು ಹೊಡೆಯುವ ಮೂಲಕ ಜಪಾನ್ ಮುನ್ನಡೆ ಸಾಧಿಸಿತ್ತು. ಆದರೆ ಇಕ್ವಾಡೋರ್‌ನ ಏಂಜೆಲ್ ಮೆನಾ ಗೋಲನ್ನು ಹೊಡೆದು ಸಮಬಲ ಸಾಧಿಸಿದ್ದರು.
ಕೊನೆ ಕ್ಷಣದಲ್ಲಿ ಜಪಾನಿನ ತಕೆಫುಸ ಕುಬೊ ಗೋಲನ್ನು ಹೊಡೆದರೂ ವಿಎ ಆರ್ ಸಲಹೆ ಪಡೆದ ಬಳಿಕ ಆಫ್ಸೈಡ್ ಕಾರಣಕ್ಕೆ ಗೋಲು ನಿರಾಕರಿಸಲಾ ಯಿತು. ಇದರಿಂದ ಜಪಾನ್ ಗೆಲ್ಲುವ ಅವಕಾಶ ಕಳೆದುಕೊಂಡು ನಿರಾಶೆಗೊಳಗಾಯಿತು.
ಜಪಾನ್ ಮತ್ತು ಇಕ್ವಾಡೋರ್ ನಡು ವಣ ಪಂದ್ಯ ಡ್ರಾಗೊಂಡ ಹಿನ್ನೆಲೆಯಲ್ಲಿ ಪರಗ್ವೆ ಕ್ವಾರ್ಟರ್‌ಫೈನಲ್‌ನಲ್ಲಿ ಆಡುವ ಅದೃಷ್ಟ ಪಡೆಯಿತು. “ಬಿ’ ಬಣದಲ್ಲಿ ಆಡಿದ್ದ ಪರಗ್ವೆ ಮೂರು ಪಂದ್ಯಗಳಿಂದ ಕೇವಲ ಎರಡಂಕ ಪಡೆದಿತ್ತು.
ಕ್ವಾರ್ಟರ್‌ಫೈನಲ್ಸ್
ಪರಗ್ವೆ ಎಂಟನೇ ತಂಡವಾಗಿ ಮುನ್ನಡೆಯುವ ಮೂಕ ಕ್ವಾರ್ಟರ್‌ಫೈನಲ್ಸ್ ಸೆಣಸಾಟಕ್ಕೆ ವೇದಿಕೆ ಸಿದ್ಧಗೊಂಡಿತು. ಜೂ. 28ರಿಂದ ಕ್ವಾರ್ಟರ್‌ಫೈನಲ್ಸ್ ನಡೆಯಲಿದ್ದು ಮೊದಲ ಪಂದ್ಯವು ಬ್ರಝಿಲ್ ಮತ್ತು ಪರಗ್ವೆ ನಡುವೆ ನಡೆಯ ಲಿದೆ. ಇನ್ನುಳಿದ ಪಂದ್ಯಗಳು ವೆನೆಜುವೆಲ -ಆರ್ಜೆಂಟೀನಾ, ಕೊಲಂಬಿಯ-ಚಿಲಿ ಮತ್ತು ಉರುಗ್ವೆ -ಪೆರು ನಡುವೆ ಜರಗಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Amazon Employee: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.