![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
Team Udayavani, Sep 9, 2024, 6:45 AM IST
ಪ್ಯಾರಿಸ್: ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ಮುಗಿದಿದೆ. ಭಾರತ ಅಸಾಮಾನ್ಯ ಸಾಧನೆಗೈದು ವಿಜೃಂಭಿಸಿದೆ. ಒಟ್ಟು 13 ಪ್ಯಾರಾಲಿಂಪಿಕ್ಸ್‌ಗಳಲ್ಲಿ ಸ್ಪರ್ಧಿಸಿದ ಭಾರತ, 29 ಪದಕಗಳನ್ನು ಗೆದ್ದು ನೂತನ ಎತ್ತರಕ್ಕೇರಿದೆ. ಟೋಕಿಯೊದಲ್ಲಿ 19 ಪದಕ ಗೆದ್ದಿತ್ತು. ಪ್ಯಾರಿಸ್‌ನಲ್ಲಿ 7 ಚಿನ್ನ, 9 ಬೆಳ್ಳಿ, 13 ಕಂಚು ಒಲಿದಿದೆ. ಟೋಕಿಯೊ ಪದಕಪಟ್ಟಿಯಲ್ಲಿ 24ನೇ ಸ್ಥಾನದಲ್ಲಿದ್ದ ಭಾರತ ಈ ಬಾರಿ 18ಕ್ಕೆ ಜಿಗಿದಿದೆ.
2 ಕೂಟ, 48 ಪದಕ
ಪ್ಯಾರಾಲಿಂಪಿಕ್ಸ್ ಶುರುವಾಗಿದ್ದು 1960ರಲ್ಲಿ. ಒಟ್ಟು 4 ಕೂಟಗಳಲ್ಲಿ ಭಾರತೀಯರು ಸ್ಪರ್ಧಿಸಿರಲಿಲ್ಲ. 2016ರ ರಿಯೋ ಪ್ಯಾರಾಲಿಂಪಿಕ್ಸ್ ವರೆಗೆ ಭಾರತ ಪಾಲ್ಗೊಂಡ 11 ಕೂಟಗಳಲ್ಲಿ 4 ಚಿನ್ನ, 4 ಬೆಳ್ಳಿ, 4 ಕಂಚು ಸೇರಿ 12 ಪದಕಗಳನ್ನಷ್ಟೇ ಗೆದ್ದಿತ್ತು. ಆದರೆ ಟೋಕಿಯೊ ಮತ್ತು ಪ್ಯಾರಿಸ್‌ನಲ್ಲಿ ಒಟ್ಟು 48 ಪದಕಗಳನ್ನು ಗೆದ್ದಿದೆ. 2016ರ ವರೆಗಿನ 12 ಪದಕ ಸಾಧನೆಗೆ ಹೋಲಿಸಿದರೆ, ಈ ಎರಡು ಕೂಟಗಳಲ್ಲಿ ಭಾರತದ ಸಾಧನೆ 4 ಪಟ್ಟು ಹೆಚ್ಚು!
84 ಸ್ಪರ್ಧಿಗಳು, 12 ಕ್ರೀಡೆ
ಟೋಕಿಯೋದಲ್ಲಿ 54 ಭಾರತೀಯರು 9 ವಿಭಾಗಗಳಲ್ಲಿ ಸ್ಪರ್ಧಿಸಿದ್ದರು. ಅಲ್ಲಿ 19 ಪದಕ ಬಂದಿತ್ತು. ಈ ಬಾರಿ 84 ಸ್ಪರ್ಧಿಗಳು 12 ಕ್ರೀಡೆಗಳಲ್ಲಿ ಸ್ಪರ್ಧಿಸಿ 29 ಪದಕ ಜಯಿಸಿದ್ದಾರೆ. ಈ ಬಾರಿ ಆ್ಯತೆಟಿಕ್ಸ್‌ನಲ್ಲಿ ದಾಖಲೆಯ 17 ಪದಕ (4 ಚಿನ್ನ, 6 ಬೆಳ್ಳಿ, 7 ಕಂಚು), ಬ್ಯಾಡ್ಮಿಂಟನ್‌ನಲ್ಲಿ 5 ಪದಕ (1 ಚಿನ್ನ, 2 ಬೆಳ್ಳಿ, 2 ಕಂಚು), ಶೂಟಿಂಗ್‌ನಲ್ಲಿ 4 ಪದಕ (1 ಚಿನ್ನ, 1 ಬೆಳ್ಳಿ, 2 ಕಂಚು), ಬಿಲ್ಗಾರಿಕೆಯಲ್ಲಿ 2 (1 ಚಿನ್ನ, 1 ಕಂಚು), ಜೂಡೋದಲ್ಲಿ 1 ಕಂಚು ಲಭಿಸಿದೆ.
ಭಾರತಕ್ಕೆ ಸೈಕ್ಲಿಂಗ್, ಪ್ಯಾರಾ ಕನೋಯಿಂಗ್, ಪವರ್‌ಲಿಫ್ಟಿಂಗ್, ರೋಯಿಂಗ್, ಈಜು, ಟೇಬಲ್ ಟೆನಿಸ್, ಟೇಕ್ವಾಂಡೋದಲ್ಲಿ ಈ ಬಾರಿ ಪದಕ ಸಿಗಲಿಲ್ಲ.
ಈ ಬಾರಿಯೂ ಚೀನವೇ ಟಾಪ್
ಚೀನ ಈ ಬಾರಿಯೂ ನಂ.1 ಸ್ಥಾನ ಉಳಿಸಿಕೊಂಡಿದೆ. ಪದಕ ಗಳಿಕೆಯಲ್ಲೂ ಪ್ರಗತಿ ಸಾಧಿಸಿದೆ. ಕಳೆದ ಬಾರಿ ಚೀನ 96 ಚಿನ್ನ, 60 ಬೆಳ್ಳಿ, 51 ಕಂಚುಗಳೊಂದಿಗೆ 207 ಪದಕ ಗಳಿಸಿತ್ತು. ಈ ಬಾರಿ ಅದು 94 ಚಿನ್ನ, 76 ಬೆಳ್ಳಿ, 50 ಕಂಚುಗಳೊಂದಿಗೆ 220 ಪದಕ ಜಯಿಸಿದೆ. ಈ ಬಾರಿ 2 ಚಿನ್ನ ಕಡಿಮೆ ಬಂದರೂ ಕಳೆದ ಬಾರಿಗೆ ಹೋಲಿಸಿದರೆ ಹೆಚ್ಚುವರಿ 16 ಬೆಳ್ಳಿ ಗೆದ್ದಿದೆ.
ದ್ವಿತೀಯ ಸ್ಥಾನದಲ್ಲಿರುವ ಇಂಗ್ಲೆಂಡ್ ಕಳೆದ ಬಾರಿ ಗೆದ್ದಷ್ಟೇ ಪದಕ ಗಳಿಸಿದೆ (124). ಅಮೆರಿಕ 105 ಪದಕ ಗೆದ್ದು 3ನೇ ಸ್ಥಾನಿಯಾಗಿದೆ. ಕಳೆದ ಸಲಕ್ಕಿಂತ ಒಂದು ಪದಕ ಹೆಚ್ಚು.
ಪಾಕ್‌ನಿಂದ ಒಬ್ಬನೇ ಸ್ಪರ್ಧಿ!
ಈ ಬಾರಿ ಪ್ಯಾರಾಲಿಂಪಿಕ್ಸ್‌ನಲ್ಲಿ ಪಾಕಿಸ್ಥಾನದಿಂದ ಸ್ಪರ್ಧಿಸಿದ್ದು ಕೇವಲ ಒಬ್ಬ ಆ್ಯತ್ಲೀಟ್. 39 ವರ್ಷದ ಹೈದರ್ ಅಲಿ ಡಿಸ್ಕಸ್ ತ್ರೋ ಎಫ್ 37 ವಿಭಾಗದಲ್ಲಿ ಸ್ಪರ್ಧಿಸಿ ಕಂಚು ಗೆದ್ದರು. ಪದಕಪಟ್ಟಿಯಲ್ಲಿ ಪಾಕ್ ಜಂಟಿ 79ನೇ ಸ್ಥಾನ ಪಡೆದಿದೆ.
ಭಾರತದ ಪದಕ ವೀರರು
ಚಿನ್ನ
ಅವನಿ ಲೇಖರಾ, 10 ಮೀ. ಏರ್ ರೈಫಲ್
ನಿತೇಶ್ ಕುಮಾರ್, ಬ್ಯಾಡ್ಮಿಂಟನ್
ಸುಮಿತ್ ಅಂತಿಲ್, ಜಾವೆಲಿನ್ ತ್ರೋ
ಹರ್ವಿಂದರ್ ಸಿಂಗ್, ಬಿಲ್ಗಾರಿಕೆ
ಧರಂಬೀರ್, ಕ್ಲಬ್ ತ್ರೋ
ಪ್ರವೀಣ್ ಕುಮಾರ್, ಹೈಜಂಪ್
ನವದೀಪ್ ಸಿಂಗ್, ಜಾವೆಲಿನ್ ತ್ರೋ
ಬೆಳ್ಳಿ
ಮನೀಷ್ ನರ್ವಾಲ್, 10 ಮೀ. ಏರ್ ಪಿಸ್ತೂಲ್
ನಿಷಾದ್ ಕುಮಾರ್, ಹೈಜಂಪ್
ಯೋಗೇಶ್ ಕಥುನಿಯಾ, ಡಿಸ್ಕಸ್ ತ್ರೋ
ತುಳಸೀಮತಿ, ಬ್ಯಾಡ್ಮಿಂಟನ್
ಸುಹಾಸ್ ಯತಿರಾಜ್, ಬ್ಯಾಡ್ಮಿಂಟನ್
ಶರದ್ ಕುಮಾರ್, ಹೈಜಂಪ್
ಅಜಿತ್ ಸಿಂಗ್,
ಜಾವೆಲಿನ್ ತ್ರೋ
ಸಚಿನ್ ಖೀಲಾರಿ, ಶಾಟ್‌ಪುಟ್
ಪ್ರಣವ್ ಸೂರ್ಮಾ,
ಕ್ಲಬ್ ತ್ರೋ
ಕಂಚು
ಮೋನಾ ಅಗರ್ವಾಲ್, 10 ಮೀ. ಏರ್ ರೈಫಲ್
ಪ್ರೀತಿ ಪಾಲ್,
100 ಮೀ. ಓಟ
ರುಬಿನಾ ಫ್ರಾನ್ಸಿಸ್, 10 ಮೀ. ಏರ್ ಪಿಸ್ತೂಲ್
ಪ್ರೀತಿ ಪಾಲ್,
200 ಮೀ. ಓಟ
ಮನೀಷಾ ರಾಮ್‌ದಾಸ್, ಬ್ಯಾಡ್ಮಿಂಟನ್
ರಾಕೇಶ್-ಶೀತಲ್‌ದೇವಿ, ಬಿಲ್ಗಾರಿಕೆ
ನಿತ್ಯಶ್ರೀ ಶಿವನ್, ಬ್ಯಾಡ್ಮಿಂಟನ್
ದೀಪ್ತಿ ಜೀವನ್‌ಜಿ,
400 ಮೀ. ಓಟ
ಮರಿಯಪ್ಪನ್ ತಂಗವೇಲು, ಹೈಜಂಪ್
ಸುಂದರ್ ಸಿಂಗ್,
ಜಾವೆಲಿನ್ ತ್ರೋ
ಕಪಿಲ್ ಪರ್ಮಾರ್, ಜೂಡೋ
ಹೊಕಟೊ ಸೆಮ, ಶಾಟ್‌ಪುಟ್
ಸಿಮ್ರಾನ್ ಶರ್ಮ,
200 ಮೀ. ಓಟ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್‌ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಯಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
You seem to have an Ad Blocker on.
To continue reading, please turn it off or whitelist Udayavani.