ಪ್ಯಾರಾಲಿಂಪಿಕ್ಸ್ : ಭಾರತಕ್ಕೆ ಪದಕವಿಲ್ಲದ ದಿನ
Team Udayavani, Sep 1, 2021, 10:09 PM IST
ಟೋಕಿಯೊ: ಕಳೆದ 3 ದಿನ ಬರೋಬ್ಬರಿ 10 ಪ್ಯಾರಾಲಿಂಪಿಕ್ಸ್ ಪದಕ ಗೆದ್ದು ಮೆರೆದಿದ್ದ ಭಾರತಕ್ಕೆ ಬುಧವಾರದ ಸ್ಪರ್ಧೆಗಳಲ್ಲಿ ಯಾವುದೇ ಪದಕ ಒಲಿಯಲಿಲ್ಲ. ಬ್ಯಾಡ್ಮಿಂಟನ್, ಈಜು, ಶೂಟಿಂಗ್ ಸ್ಪರ್ಧೆಗಳಲ್ಲಿ ವೈಫಲ್ಯವೇ ಎದುರಾಯಿತು. ಸದ್ಯ ಭಾರತ 2 ಚಿನ್ನ, 5 ಬೆಳ್ಳಿ, 3 ಕಂಚಿನ ಪದಕ ಗೆದ್ದು 34ನೇ ಸ್ಥಾನದಲ್ಲಿದೆ.
ಮಿಕ್ಸೆಡ್ ಬ್ಯಾಡ್ಮಿಂಟನ್ ಜೋಡಿಯಾದ ಪ್ರಮೋದ್ ಭಗತ್-ಪಲಕ್ ಕೊಹ್ಲಿ ಎಸ್‌ಎಲ್3-ಎಸ್‌ಯು5 ಕ್ಲಾಸ್ ವಿಭಾಗದ “ಬಿ’ ಸುತ್ತಿನ ಮೊದಲ ಪಂದ್ಯದಲ್ಲಿ ವೀರೋಚಿತ ಸೋಲು ಕಂಡರು. ಇವರನ್ನು ಫ್ರಾನ್ಸ್‌ನ ಲೂಕಾಸ್ ಮಜೂರ್-ಫಾಸ್ಟಿನ್ ನೋಯೆಲ್ 21-9, 15-21, 21-19 ಅಂತರದಿಂದ ಮಣಿಸಿದರು.
ಮೊದಲ ಗೇಮ್‌ನಲ್ಲಿ 9-21 ಹಿನ್ನಡೆಯೊಂದಿಗೆ ನೀರಸ ಪ್ರದರ್ಶನ ತೋರಿದ ಭಗತ್-ಕೊಹ್ಲಿ ದ್ವಿತೀಯ ಗೇಮ್‌ನಲ್ಲಿ ತಿರುಗಿ ಬಿದ್ದು ಮೇಲುಗೈ ಸಾಧಿಸಿದರು. ನಿರ್ಣಾಯಕ ಸುತ್ತಿನಲ್ಲಿ ತೀವ್ರ ಪೈಪೋಟಿ ಕಂಡುಬಂತು. ಆದರೆ ಭಾರತದ ಜೋಡಿಯಿಂದ ಕಡೇ ಗಳಿಗೆಯ ಒತ್ತಡವನ್ನು ನಿಭಾಯಿಸಲಾಗಲಿಲ್ಲ.
ಪುರುಷರ ಸಿಂಗಲ್ಸ್ ವಿಭಾಗದ ಆಲ್ ಇಂಡಿಯನ್ ಸ್ಪರ್ಧೆಯೊಂದರಲ್ಲಿ ಮನೋಜ್ ಸರ್ಕಾರ್ ವಿರುದ್ಧ ವಿಶ್ವದ ನಂ.1 ಪ್ರಮೋದ್ ಭಗತ್ ಜಯ ಸಾಧಿಸಿದರು. ಆದರೆ ಪಲಕ್ ಕೊಹ್ಲಿ ವನಿತಾ ಸಿಂಗಲ್ಸ್‌ನಲ್ಲೂ ಪರಾಭವಗೊಂಡರು.
ಯಶಸ್ಸು ಕಾಣದ ಸುಯಶ್ :
ಪ್ಯಾರಾ ಸ್ವಿಮ್ಮರ್ ಸುಯಶ್ ಜಾಧವ್ 100 ಮೀ. ಬ್ರೆಸ್ಟ್ ಸ್ಟ್ರೋಕ್ ಎಸ್‌ಬಿ7 ವಿಭಾಗದ ಫೈನಲ್ ತಲುಪಿಯೂ ನಿಯಮ ಉಲ್ಲಂಘಿಸಿ ಅನರ್ಹಗೊಂಡರು.
ಸ್ವಿಮ್ಮಿಂಗ್ ನಿಯಮ 11.4.1ರ ಪ್ರಕಾರ, ಪ್ರತಿಯೊಂದು ಟರ್ನ್ ವೇಳೆ ಒಂದೇ ಬಟರ್‌ಫ್ಲೈ ಕಿಕ್‌ಗೆ ಅವಕಾಶವಿರುತ್ತದೆ. ಆದರೆ ಸುಯಶ್ ಒಂದಕ್ಕಿಂತ ಹೆಚ್ಚಿನ ಫ್ಲೈ ಕಿಕ್ ಮಾಡಿ ಅವ ಕಾಶ ಕಳೆದುಕೊಂಡರು. ಸುಯಶ್ ಜಾಧವ್ ಶೀತ ಹಾಗೂ ಗಂಟಲು ಕೆರೆತದಿಂದಾಗಿ ಶುಕ್ರವಾರದ 200 ಮೀ. ಮಿಡ್ಲೆ ಎಸ್‌ಎಂ7 ಸ್ಪರ್ಧೆಯಿಂದ ಹೊರಗುಳಿದಿದ್ದರು.
ಅವನಿ ಲೇಖರ ವಿಫಲ:
ಎರಡು ದಿನಗಳ ಹಿಂದೆ ಶೂಟಿಂಗ್ ಸ್ವರ್ಣ ಗೆದ್ದು ಇತಿಹಾಸ ನಿರ್ಮಿಸಿದ್ದ ಅವನಿ ಲೇಖರ, ಬುಧವಾರದ 10 ಮೀ. ಏರ್ ರೈಫಲ್ ಪ್ರೋನ್ ಎಸ್‌ಎಚ್1 ವಿಭಾಗದ ಅರ್ಹತಾ ಸುತ್ತಿನ ಫೈನಲ್‌ಗೆ ಏರಲು ವಿಫಲರಾದರು. ಇಲ್ಲಿ ಅವರು 27ರಷ್ಟು ಕೆಳ ಸ್ಥಾನಕ್ಕೆ ಕುಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Derogatory Remark: ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮುಗಿದ ಕತೆ: ಸಿ.ಟಿ.ರವಿ
Police: ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ10,ದೆಹಲಿಯಲ್ಲಿ11 ಮಂದಿ ಸೆರೆ
Kashmir: 300 ಅಡಿ ಕಮರಿಗೆ ಸೇನಾ ವಾಹನ ಬಿದ್ದು 5 ಯೋಧರ ಸಾವು; ಹಲವರಿಗೆ ಗಾಯ
Catholic ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿ: ಕೇರಳದ ಬಿಷಪ್ ತರಾಟೆ
England; ಬೆನ್ ಸ್ಟೋಕ್ಸ್‌ಗೆ ಗಾಯ: ಚಾಂಪಿಯನ್ಸ್ ಟ್ರೋಫಿಗೆ ಅಲಭ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.