Paralympics ಜೂಡೊ: ಕಪಿಲ್‌ಗೆ ಕಂಚು
Team Udayavani, Sep 6, 2024, 12:31 AM IST
ಪ್ಯಾರಿಸ್: ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಪದಕ ಖಾತೆಗೆ ಮತ್ತೂಂದು ಪದಕ ಸೇರ್ಪಡೆಯಾಗಿದೆ. ಜೂಡೋ ಪುರುಷರ 60 ಕೆಜಿ ಜೆ1 ವಿಭಾಗದಲ್ಲಿ ಭಾರತದ ಕಪಿಲ್ ಪರ್ಮಾರ್ ಕಂಚು ಜಯಿಸಿದ್ದಾರೆ. ಇದು ಪ್ಯಾರಾಲಿಂಪಿಕ್ಸ್ ಮತ್ತು ಒಲಿಂಪಿಕ್ಸ್ ಇತಿಹಾಸದಲ್ಲೇ ಜೂಡೋದಲ್ಲಿ ಭಾರತಕ್ಕೆ ಲಭಿಸಿದ ಚೊಚ್ಚಲ ಪದಕ. ಕಂಚಿನ ಪದಕಕ್ಕಾಗಿ ನಡೆದ ಸ್ಪರ್ಧೆಯಲ್ಲಿ ಬ್ರಝಿಲ್‌ನ ಎಲಿಯೆಲ್ಟನ್ ಒಲಿವೆರಾ ವಿರುದ್ಧ ಕೇವಲ 33 ಸೆಕೆಂಡ್‌ಗಳಲ್ಲೇ 10-0 ಅಂತರದಿಂದ ಗೆದ್ದು ಕಂಚಿನ ಪದಕ ಕೊರಳಿಗೇರಿಸಿಕೊಂಡರು.
24 ವರ್ಷದ ಮಧ್ಯಪ್ರದೇಶದ ಕಪಿಲ್ ಪರ್ಮಾರ್, ಇಪ್ಪಾನ್ ಕೌಶಲ ದಲ್ಲಿ ಎತ್ತಿದ ಕೈ. ಇದೇ ಕೌಶಲ ಬಳಸಿ ಕೊಂಡು ಗುರುವಾರ ಕೂಡ ಕಪಿಲ್ ಕೇವಲ 33 ಸೆಕೆಂಡ್‌ಗಳಲ್ಲೇ ಎದುರಾಳಿ ಎಲಿಯೆಲ್ಟನ್ ಅವರನ್ನು ಮಣಿಸಿ ಗಮನ ಸೆಳೆದರು.
ವಿದ್ಯುತ್ ಆಘಾತ
24 ವರ್ಷದ ಕಪಿಲ್ ಪರ್ಮಾರ್ ಹುಟ್ಟಿದ್ದು ಮಧ್ಯಪ್ರದೇಶದ ಸಣ್ಣ ಗ್ರಾಮ ಶಿವೋರ್‌ನಲ್ಲಿ. 4 ಸಹೋದರರು ಮತ್ತು ಒಬ್ಬಳು ಸಹೋದರಿಯಿರುವ ಇವರ ಕುಟಂಬದಲ್ಲಿ ಇವರೇ ಕೊನೆಯವರು. ತಂದೆ ಟ್ಯಾಕ್ಸಿ ಡ್ರೈವರ್. ಅಕ್ಕ ಪ್ರಾಥಮಿಕ ಶಾಲೆಯೊಂದನ್ನು ನಡೆಸುತ್ತಿದ್ದಾರೆ. ಸಣ್ಣವರಿದ್ದಾಗ ಊರಿನ ಗದ್ದೆಯಲ್ಲಿ ಆಡುತ್ತಿದ್ದ ಕಪಿಲ್, ಆಕಸ್ಮಿಕವಾಗಿ ನೀರಿನ ಪಂಪ್ ಮುಟ್ಟಿದರು. ಈ ವೇಳೆ ಗಂಭೀರ ವಿದ್ಯುತ್ ಆಘಾತಕ್ಕೆ ಒಳಗಾಗಿ ಪ್ರಜ್ಞೆತಪ್ಪಿ ಬಿದ್ದರು. ಅವರನ್ನು ಭೋಪಾಲ್‌ನ ಆಸ್ಪತ್ರೆಗೆ ಸೇರಿಸಲಾಯಿತು. ಅಲ್ಲಿ ಅವರು ಸುಮಾರು 6 ತಿಂಗಳ ಕಾಲ ಕೋಮಾವಸ್ಥೆಯಲ್ಲಿದ್ದರು. ಅದಾಗಿ ಮೆಲ್ಲನೆ ಚೇತರಿಸಿಕೊಂಡ ಕಪಿಲ್ ಅರೆಬರೆ ದೃಷ್ಟಿಶಕ್ತಿಯನ್ನು ಮಾತ್ರ ಉಳಿಸಿಕೊಂಡರು. ಬಳಿಕ ಕ್ರೀಡೆಯಲ್ಲಿ ಬೆಳೆದಿದ್ದೇ ಒಂದು ಕೌತುಕ.
ಅಂಧರ ಜೂಡೋದಲ್ಲಿ ಖುಷಿ
ವಿದ್ಯುತ್ ಆಘಾತದಲ್ಲಿ ಕೋಮಾಕ್ಕೆ ಹೋಗಿದ್ದ ಕಪಿಲ್ ಬಳಿಕ ಚೇತರಿಸಿಕೊಂಡ ರಾದರೂ ಅಷ್ಟರಲ್ಲಿ ಅವರ ಕಣ್ಣುಗಳು ಬಹುತೇಕ ದೃಷ್ಟಿ ಕಳೆದುಕೊಂಡಿದ್ದವು. ಹೀಗಾಗಿ ಬಾಲಕ ಬದುಕಿನ ಸ್ಫೂರ್ತಿ ಕಳೆದುಕೊಳ್ಳಬಾರದೆಂದು ಭಗವಾನ್ ದಾಸ್ (ಮೆಂಟರ್) ಮತ್ತು ಮನೋಜ್ (ಕೋಚ್) ಕಪಿಲ್‌ನನ್ನು ಜೂಡೋಗೆ ಪರಿಚಯಿಸಿದರು. ಅಲ್ಲಿಂದ ಅವರ ಕ್ರೀಡಾ ಬದುಕು ಆರಂಭವಾಯಿತು.
ಕಾಮನ್‌ವೆಲ್ತ್‌ನಲ್ಲಿ ಚಿನ್ನ
ಜೂಡೋವನ್ನು ವೃತ್ತಿಪರ ಕ್ರೀಡೆ ಯಾಗಿಸಿಕೊಂಡ ಕಪಿಲ್ ಪರ್ಮಾರ್, 2019ರಲ್ಲಿ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಕಾಮನ್‌ವೆಲ್ತ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ, 2023ರ ಅಲೆಕ್ಸಾಂಡ್ರಿಯಾ ಗ್ರ್ಯಾನ್‌ಪ್ರೀನಲ್ಲಿ ಚಿನ್ನ, 2022ರ ಹಾಂಗ್‌ಝೋ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಬೆಳ್ಳಿ ಗೆದ್ದ ಸಾಧನೆ ಹೊಂದಿದ್ದಾರೆ.
100 ಮೀ. (ಟಿ12); ಸಿಮ್ರಾನ್ ಫೈನಲಿಗೆ
ಪ್ಯಾರಾಲಿಂಪಿಕ್ಸ್‌ನ ವನಿತೆಯರ 100 ಮೀ. (ಟಿ12) ಸ್ಪರ್ಧೆಯಲ್ಲಿ ಭಾರತದ ಸಿಮ್ರಾನ್ ಫೈನಲ್ ಹಂತಕ್ಕೇರಿದ್ದಾರೆ. ಹಾಲಿ ವಿಶ್ವ ಚಾಂಪಿಯನ್ ಆಗಿರುವ ಸಿಮ್ರಾನ್ ಸೆಮಿಫೈನಲ್ ಓಟದಲ್ಲಿ 12.33 ಸೆ.ನಲ್ಲಿ ಗುರಿ ತಲುಪಿ ಫೈನಲಿಗೇರಿದ್ದಾರೆ.
ಎರಡನೇ ಸೆಮಿಫೈನಲ್‌ನಲ್ಲಿ ಅವರು ಎರಡನೇ ಸ್ಥಾನದಲ್ಲಿ ಸ್ಪರ್ಧೆ ಮುಗಿಸಿದ್ದರು. ಜರ್ಮನಿಯ ಕ್ಯಾತ್ರಿನ್ ಮ್ಯುಲ್ಲೆರ್ ರೋಟ್‌ಗಾಡ್¤ì ಮೊದಲ ಸ್ಥಾನಿಯಾಗಿದ್ದರು. ಫೈನಲ್ ನಾಲ್ವರು ಸ್ಪರ್ಧಿಗಳೊಂದಿಗೆ ನಡೆಯಲಿದೆ.
ಆರ್ಚರಿ: ಕಂಚು ಗೆಲ್ಲಲು ವಿಫಲ
ಇತಿಹಾಸ ನಿರ್ಮಿಸಿದ ಭಾರತೀಯ ಆರ್ಚರ್ ಹರ್ವಿಂದರ್ ಸಿಂಗ್ ಅವರು ರಿಕರ್ವ್ ಮಿಕ್ಸೆಡ್ ತಂಡ ಸ್ಪರ್ಧೆಯ ಕಂಚಿನ ಪದಕಕ್ಕಾಗಿ ನಡೆದ ಹೋರಾಟದಲ್ಲಿ ಪೂಜಾ ಜತ್ಯನ್ ಅವರ ಜತೆಗೂಡಿ ತೀವ್ರ ಹೋರಾಟ ನಡೆಸಿದರೂ ಸ್ಲೊವೇನಿಯದ ವಿರುದ್ಧ ಸೋತು ನಿರಾಶೆಗೊಳಗಾದರು.
ಸೆಮಿಫೈನಲ್‌ನಲ್ಲಿ ಇಟೆಲಿಯ ಅಗ್ರ ಶ್ರೇಯಾಂಕದ ಜೋಡಿಯೆದುರು ಸೋತ ಹರ್ವಿಂದರ್ ಮತ್ತು ಪೂಜಾ ಅವರು ಆಬಳಿಕ ಕಂಚಿನ ಪದಕಕ್ಕಾಗಿ ನಡೆದ ಹೋರಾಟದಲ್ಲಿ ಝಿವ ಲಾವ್ರಿಕ್ ಮತ್ತು ಡೆಜಾನ್ ಫ್ಯಾಬ್ಸಿಕ್ ಅವರೆದುರು 4-5 ಅಂತರದಿಂದ ಸೋತು ಪದಕ ಗೆಲ್ಲಲು ವಿಫಲರಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BBK11: ಕ್ಯಾಪ್ಟನ್ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.