ಆರಂಭವಾಯ್ತು ಪ್ಯಾರಾಲಿಂಪಿಕ್ಸ್‌ 


Team Udayavani, Aug 24, 2021, 9:29 PM IST

ಆರಂಭವಾಯ್ತು ಪ್ಯಾರಾಲಿಂಪಿಕ್ಸ್‌ 

ಟೋಕ್ಯೊ: ಆ.8ಕ್ಕೆ ಟೋಕ್ಯೊ ಒಲಿಂಪಿಕ್ಸ್‌ ಐತಿಹಾಸಿಕವೆನ್ನುವಂತೆ ಮುಗಿದಿತ್ತು. ಕೊರೊನಾ ಒಡ್ಡಿದ ಎಲ್ಲ ಸವಾಲುಗಳನ್ನು ಎದುರಿಸಿ ಗೆದ್ದಿತ್ತು. ಅದೇ ಮಾದರಿಯಲ್ಲಿ ಪ್ಯಾರಾ ಒಲಿಂಪಿಕ್ಸ್‌ ಕೂಡಾ ಮಂಗಳವಾರದಿಂದ ಟೋಕ್ಯೊದಲ್ಲಿ ಶುರುವಾಗಿದೆ. ಈ ಕೂಟ ನಿಜಕ್ಕೂ ನಡೆಯಲು ಸಾಧ್ಯವೇ ಎಂಬ ಅನುಮಾನಗಳ ನಡುವೆ, ಸಂಘಟಕರೇ ಬೆರಗಾಗುವಂತೆ ಪ್ಯಾರಾಲಿಂಪಿಕ್ಸ್‌ ಮೈದಳೆದು ನಿಂತಿದೆ.

ಜಪಾನಿನ ಚಕ್ರವರ್ತಿ ನೌರುಹಿಟೊ ಅಧಿಕೃತವಾಗಿ ಕೂಟ ಉದ್ಘಾಟನೆಯಾಗಿದೆ ಎಂದು ಘೋಷಿಸಿದರು. ಈ ಕೂಟದ ಮುಖ್ಯಧ್ಯೇಯ “ನಮಗೆ ರೆಕ್ಕೆಗಳಿವೆ’ ಎನ್ನುವುದಾಗಿದೆ. ವರ್ಣರಂಜಿತ ಕಾರ್ಯಕ್ರಮದಲ್ಲಿ ಈ ಧ್ಯೇಯ ಪ್ರಕಟವಾಯಿತು. ದಿವ್ಯಾಂಗರು (ಅಂಗವಿಕಲರು) ಕೂಡಾ ಅದ್ಭುತ ಸಾಧನೆ ಮಾಡಬಹುದು ಎನ್ನುವುದರ ಸೂಚಕವಾಗಿ ಇದನ್ನು ಬಳಸಲಾಗಿದೆ.

ಪ್ರತಿಯೊಬ್ಬ ಮನುಷ್ಯನಿಗೂ ಒಂದು ಸಾಧನೆಯ ರೆಕ್ಕೆಯಿರುತ್ತದೆ. ಅದನ್ನು ಧೈರ್ಯದಿಂದ ಪೋಷಿಸಿದರೆ, ಗಾಳಿ ಯಾವ ದಿಕ್ಕಿಗೇ ಬೀಸುತ್ತಿರಲಿ, ವ್ಯಕ್ತಿ ತನಗಿಷ್ಟ ಬಂದೆಡೆ ಹಾರಿಹೋಗಬಲ್ಲ ಎನ್ನುವುದು ನಮಗೆ ರೆಕ್ಕೆಗಳಿವೆ ಎನ್ನುವುದರ ಆಶಯ.

ವಿಡಿಯೊದೊಂದಿಗೆ ಆರಂಭ: ಬೃಹತ್‌ ವಿಡಿಯೊವೊಂದನ್ನು ಪರದೆಯಲ್ಲಿ ತೋರಿಸುವುದರೊಂದಿಗೆ ಪ್ಯಾರಾಲಿಂಪಿಕ್ಸ್‌ ಆರಂಭವಾಯಿತು. ಮೊದಲು ತಣ್ಣಗೆ ಮಂದವಾಗಿ ಬೀಸುತ್ತಿದ್ದ ಮಾರುತ, ನಿಧಾನಕ್ಕೆ ತೀವ್ರ ವೇಗ ಪಡೆದು ಪ್ರಚಂಡವಾಗಿ ಬೀಸತೊಡಗಿ ಉದ್ಘಾಟನಾ ಮೈದಾನವನ್ನು ತಲುಪಿ ನಂತರ, ವಿವಿಧ ಸ್ಪರ್ಧೆಗಳು ನಡೆಯುವ ಅಂಕಣಗಳ ಮೇಲೆಲ್ಲ ಬೀಸಿಕೊಂಡು ಹೋಯಿತು. ಇದಾದ ವಿಮಾನನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಎಣಿಕೆ ಆರಂಭಿಸಿದರು. ಅದು ಮುಗಿದ ಕೂಡಲೇ ಬಣ್ಣಬಣ್ಣದ ಪಟಾಕಿಗಳು ಸಿಡಿಯತೊಡಗಿದವು. ಈ ವರ್ಣಗಳಲಿ ಆಕಾಶ ತುಂಬಿಹೋಯಿತು. ಅನಂತರ ಜಪಾನಿನ ಧ್ವಜವನ್ನು ವೇದಿಕೆಗೆ ತರಲಾಯಿತು. ಸುಂದರ ಸಂಗೀತ ಮೈದಾನದಲ್ಲೆಲ್ಲ ಕೇಳತೊಡಗಿತು.

2ನೇ ಬಾರಿ ಟೋಕ್ಯೊದಲ್ಲಿ ಪ್ಯಾರಾಲಿಂಪಿಕ್ಸ್‌:

1964ರಲ್ಲಿ ಜಪಾನ್‌ ರಾಜಧಾನಿ ಟೋಕ್ಯೊದಲ್ಲೇ ಪ್ಯಾರಾಲಿಂಪಿಕ್ಸ್‌ ನಡೆದಿತ್ತು. ಅದಾದ 57 ವರ್ಷಗಳ ನಂತರ ಮತ್ತೆ ಇದೇ ಸ್ಥಳದಲ್ಲಿ ಪ್ಯಾರಾಲಿಂಪಿಕ್ಸ್‌ ಆರಂಭವಾಗಿದೆ. 1964ರಲ್ಲಿ ಟೋಕೊÂದಲ್ಲೇ ಒಲಿಂಪಿಕ್ಸ್‌ ಕೂಡಾ ನಡೆದಿತ್ತು ಎನ್ನುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಪ್ಯಾರಾಲಿಂಪಿಕ್ಸ್‌ ಅನ್ನು ಎರಡು ಬಾರಿ ಆಯೋಜಿಸಿದ ನಗರ ಎಂಬ ಹೆಗ್ಗಳಿಕೆಯೂ ಟೋಕ್ಯೊಗೆ ದಕ್ಕಿದೆ.

ನಾವಿಲ್ಲಿದ್ದೇವೆ, ಕೂಟ ಶುರುವಾಗಿದೆ ಎಂದು ನನಗೆ ನಂಬಲಿಕ್ಕೆ ಆಗುತ್ತಿಲ್ಲ. ಈ ದಿನ ಬರುತ್ತದೆ ಎನ್ನುವುದರ ಬಗ್ಗೆ ಹಲವರು ಅನುಮಾನ ವ್ಯಕ್ತಪಡಿಸಿದ್ದರು. ನೂರಾರು ಮಂದಿಯ ಪರಿಶ್ರಮಕ್ಕೆ ಧನ್ಯವಾದ, ಅದ್ಭುತ ಪರಿವರ್ತನೆಯೊಂದು ಜರುಗುತ್ತಿದೆ. ಸಂಘಟಕರು ಭರವಸೆ ಕಳೆದುಕೊಂಡಿರಲಿಲ್ಲ. ದಣಿವರಿಯದೇ ಜಪಾನ್‌ ಸರ್ಕಾರದೊಂದಿಗೆ ಹೋರಾಟ ಮಾಡಿದ್ದರು. -ಆಂಡ್ರ್ಯೂ ಪಾರ್ಸನ್ಸ್‌, ಅಂತಾರಾಷ್ಟ್ರೀಯ ಪ್ಯಾರಾಲಿಂಪಿಕ್ಸ್‌ ಸಮಿತಿ ಅಧ್ಯಕ್ಷ

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?

Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?

Udupi: ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಬದಲಿಲ್ಲ: ಕೋಟ

Udupi: ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಬದಲಿಲ್ಲ: ಕೋಟ

Foot ball

ಬೆಂಗಳೂರಿನಲ್ಲಿ ಭಾರತ- ಮಾಲ್ಡೀವ್ಸ್‌   ವನಿತಾ ಫುಟ್‌ಬಾಲ್‌

Congress ಸರಕಾರದಿಂದ ಗೂಂಡಾಗಳಿಗೆ ಮಣೆ: ನಳಿನ್‌ ಟೀಕೆ

Congress ಸರಕಾರದಿಂದ ಗೂಂಡಾಗಳಿಗೆ ಮಣೆ: ನಳಿನ್‌ ಟೀಕೆ

Dec.24: ಬಸ್ರೂರು “ಅಪ್ಪಣ್ಣ ಹೆಗ್ಡೆ 90′: ವಕ್ವಾಡಿಯಲ್ಲಿ ಸಾರ್ವಜನಿಕ ಸಂಭ್ರಮ

Dec.24: ಬಸ್ರೂರು “ಅಪ್ಪಣ್ಣ ಹೆಗ್ಡೆ 90′: ವಕ್ವಾಡಿಯಲ್ಲಿ ಸಾರ್ವಜನಿಕ ಸಂಭ್ರಮ

Sasthan Toll Plaza: ವಾಣಿಜ್ಯ ವಾಹನಗಳಿಗೆ ಮತ್ತೆ ಶುಲ್ಕ: ಪ್ರತಿಭಟನೆ

Sasthan Toll Plaza: ವಾಣಿಜ್ಯ ವಾಹನಗಳಿಗೆ ಮತ್ತೆ ಶುಲ್ಕ: ಪ್ರತಿಭಟನೆ

Udupi: ಭಗವಾನುವಾಚ ಪುಸ್ತಕ ಇಂದು ಲೋಕಾರ್ಪಣೆ

Udupi: ಭಗವಾನುವಾಚ ಪುಸ್ತಕ ಇಂದು ಲೋಕಾರ್ಪಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-jyo

Asian Weightlifting: ಜೋಶ್ನಾ ನೂತನ ದಾಖಲೆ

1-bcc

U-19 ವನಿತಾ ಏಷ್ಯಾ ಕಪ್‌: ಫೈನಲ್‌ಗೆ ಭಾರತ

1-J-PP

Pro Kabaddi: ಜೈಪುರ್‌ 12ನೇ ವಿಜಯ

1-bangla

T20;ಮೂರೂ ಪಂದ್ಯ ಗೆದ್ದ ಬಾಂಗ್ಲಾ: ವಿಂಡೀಸಿಗೆ ವೈಟ್‌ವಾಶ್‌

1-pak

ODI; ತವರಲ್ಲೇ ಎಡವಿದ ದಕ್ಷಿಣ ಆಫ್ರಿಕಾ: ಸರಣಿ ಗೆದ್ದ ಪಾಕಿಸ್ಥಾನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-jyo

Asian Weightlifting: ಜೋಶ್ನಾ ನೂತನ ದಾಖಲೆ

1-bcc

U-19 ವನಿತಾ ಏಷ್ಯಾ ಕಪ್‌: ಫೈನಲ್‌ಗೆ ಭಾರತ

1-J-PP

Pro Kabaddi: ಜೈಪುರ್‌ 12ನೇ ವಿಜಯ

1-bangla

T20;ಮೂರೂ ಪಂದ್ಯ ಗೆದ್ದ ಬಾಂಗ್ಲಾ: ವಿಂಡೀಸಿಗೆ ವೈಟ್‌ವಾಶ್‌

1-pak

ODI; ತವರಲ್ಲೇ ಎಡವಿದ ದಕ್ಷಿಣ ಆಫ್ರಿಕಾ: ಸರಣಿ ಗೆದ್ದ ಪಾಕಿಸ್ಥಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.