Paris 2024: ಭಾರತೀಯ ಕುಸ್ತಿಪಟುವನ್ನು ಹೊರಹಾಕಿದ ಒಲಿಂಪಿಕ್‌ ಅಧಿಕಾರಿಗಳು; ಆಗಿದ್ದೇನು?

Team Udayavani, Aug 8, 2024, 4:02 PM IST

Paris 2024: ಭಾರತೀಯ ಕುಸ್ತಿಪಟುವನ್ನು ಹೊರಹಾಕಿದ ಒಲಿಂಪಿಕ್‌ ಅಧಿಕಾರಿಗಳು; ಆಗಿದ್ದೇನು?

ಪ್ಯಾರಿಸ್:‌ ತೂಕ ಹೆಚ್ಚಾದ ಕಾರಣದಿಂದ ಫೈನಲ್‌ ಪಂದ್ಯದಿಂದ ಭಾರತೀಯ ಕುಸ್ತಿಪಟು ವಿನೀಶ್‌ ಫೋಗಾಟ್‌ ಅನರ್ಹಗೊಂಡ ಬಳಿಕ ಮತ್ತೋರ್ವ ಕುಸ್ತಿಪಟು ಭಾರತಕ್ಕೆ ಮುಜುಗರ ತರುವಂತಹ ಕೆಲಸ ಮಾಡಿದ್ದಾರೆ. 53 ಕೆಜಿ ಕುಸ್ತಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಅಂತಿಮ್‌ ಪಂಘಾಲ್‌ ಅವರನ್ನು ಕ್ರೀಡಾಗ್ರಾಮದಿಂದ ಹೊರಹಾಕಲು ಒಲಿಂಪಿಕ್‌ ಅಧಿಕಾರಿಗಳು ನಿರ್ಧರಿಸಿದ್ದಾರೆ.

ಪ್ಯಾರಿಸ್ ಒಲಿಂಪಿಕ್ಸ್ 2024 ರ ಸಮಯದಲ್ಲಿ ಒಲಂಪಿಕ್ ಕ್ರೀಡಾ ಗ್ರಾಮವನ್ನು ಆಕೆಯ ಸಹೋದರಿ ನಿಶಾ ಭಾರತೀಯ ಕುಸ್ತಿಪಟುಗಳ ಮಾನ್ಯತಾ ಕಾರ್ಡ್‌ ಬಳಸಿ ಪ್ರವೇಶ ಮಾಡಿದ್ದು ವಿವಾದಕ್ಕೆ ಕಾರಣವಾಗಿದೆ. ಪೊಲೀಸರು ನಿಶಾ ಅವರನ್ನು ಬಂಧಿಸಿ ಬಳಿಕ ಬಿಡುಗಡೆ ಮಾಡಿದ್ದಾರೆ. ನಂತರ ಕುಸ್ತಿಪಟು ಆಂತಿಮ್ ಪಂಘಾಲ್ ಮತ್ತು ಅವರ ಪರಿವಾರವನ್ನು ಪ್ಯಾರಿಸ್‌ ನಿಂದ ಗಡೀಪಾರು ಮಾಡಲಾಗುತ್ತದೆ ಎಂದು ವರದಿಯಾಗಿದೆ.

ಪೊಲೀಸರು ನಿಶಾಳನ್ನು ವಿಚಾರಣೆಗೆ ಒಳಪಡಿಸಿದರು ಆದರೆ ಸ್ವಲ್ಪ ಸಮಯದ ನಂತರ ಆಕೆಯನ್ನು ಬಿಡುಗಡೆ ಮಾಡಲಾಯಿತು. ಆಂತಿಮ್‌ ಅವರ ಸಂಪೂರ್ಣ ಪರಿವಾರವನ್ನು ಹೊರಹಾಕಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಅಲ್ಲದೆ ಘಟನೆಯ ನಂತರ ಅವರ ಮಾನ್ಯತೆಯನ್ನು ಸಹ ರದ್ದುಗೊಳಿಸಲಾಗಿದೆ.

ಮಹಿಳೆಯರ 53 ಕೆಜಿ ವಿಭಾಗದಲ್ಲಿ ಟರ್ಕಿಯ ಯೆಟ್ಗಿಲ್ ಝೆನೆಪ್ ವಿರುದ್ಧ ಆಡಿದ್ದ ಅಂತಿಮ್‌ ಪಂಘಾಲ್ 0-10 ಅಂತರದ ಅವಮಾನಕರ ಸೋಲಿಗೆ ತುತ್ತಾಗಿದ್ದರು.‌

“ಶಿಸ್ತು ಉಲ್ಲಂಘನೆಯನ್ನು ಫ್ರೆಂಚ್ ಅಧಿಕಾರಿಗಳು ಗಮನಕ್ಕೆ ತಂದ ನಂತರ ಕುಸ್ತಿಪಟು ಆಂಟಿಮ್ ಮತ್ತು ಅವರ ಸಹಾಯಕ ಸಿಬ್ಬಂದಿಯನ್ನು ಹಿಂದೆ ಕರೆಯಲು ನಿರ್ಧರಿಸಿದೆ” ಎಂದು ಭಾರತೀಯ ಒಲಿಂಪಿಕ್ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.

ಪಂದ್ಯದಲ್ಲಿ ಸೋತ ಬಳಿಕ ಅಂತಿಮ ಅವರು ಕೋಚ್‌ ಗಳೊಂದಿಗೆ ಹೋಟೆಲ್‌ ಗೆ ತೆರಳಿದ್ದರು. ಈ ವೇಳೆ ಅವರ ವಸ್ತುಗಳನ್ನು ತರಲೆಂದು ಸಹೋದರಿ ನಿಶಾ ಅವರನ್ನು ಕ್ರೀಡಾ ಗ್ರಾಮಕ್ಕೆ ಕಳುಹಿಸಿದ್ದಾರೆ. ಆಕೆಯ ಸಹೋದರಿ ಗ್ರಾಮವನ್ನು ಪ್ರವೇಶಿಸುವಲ್ಲಿ ಯಶಸ್ವಿಯಾದರು. ಆದರೆ, ಹಿಂದುರುಗುವಾಗ ಭದ್ರತಾ ಅಧಿಕಾರಿಯ ಕೈಗೆ ಸಿಕ್ಕಿಬಿದ್ದರು.

ಆಕೆಯ ಹೇಳಿಕೆಯನ್ನು ದಾಖಲಿಸಲು ಸ್ಥಳೀಯ ಪೊಲೀಸ್ ಠಾಣೆಗೆ ಕರೆದೊಯ್ದರು. ಬಳಿಕ 19 ವರ್ಷದ ಜೂನಿಯರ್ ವಿಶ್ವ ಚಾಂಪಿಯನ್ ಆಂಟಿಮ್ ಅವರ ಹೇಳಿಕೆಯನ್ನು ದಾಖಲಿಸಲು ಪೊಲೀಸರು ಕರೆದರು.‌

ಅಷ್ಟೇ ಅಲ್ಲದೆ, ಆಂತಿಮ್‌ ಅವರ ವೈಯಕ್ತಿಕ ಸಹಾಯಕ ಸಿಬ್ಬಂದಿಗಳಾದ ವಿಕಾಸ್ ಮತ್ತು ಭಗತ್ ಅವರು ಕ್ಯಾಬ್‌ ನಲ್ಲಿ ಅಮಲೇರಿದ ಸ್ಥಿತಿಯಲ್ಲಿ ಪ್ರಯಾಣಿಸಿದ್ದಾರೆ. ಆದರೆ ಹಣ ಪಾವತಿಸಲು ನಿರಾಕರಿಸಿದ್ದಾರೆ. ಇದು ಕೂಡಾ ಪೊಲೀಸ್‌ ಠಾಣೆ ಮೆಟ್ಟಿಲೇರಿದೆ.

ಟಾಪ್ ನ್ಯೂಸ್

Viral Video: ಮೆದುಳಿನ ಸರ್ಜರಿ ನಡೆಸುವ ವೇಳೆ ಜೂ.ಎನ್‌ ಟಿಆರ್‌ ಸಿನಿಮಾ ವೀಕ್ಷಿಸಿದ ರೋಗಿ.!

Viral Video: ಮೆದುಳಿನ ಸರ್ಜರಿ ನಡೆಸುವ ವೇಳೆ ಜೂ.ಎನ್‌ ಟಿಆರ್‌ ಸಿನಿಮಾ ವೀಕ್ಷಿಸಿದ ರೋಗಿ.!

Video: ಕೇವಲ ಒಂದೇ ಚಕ್ರದಲ್ಲಿ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡಿದ ಪೈಲೆಟ್

Video: ಕೇವಲ ಒಂದೇ ಚಕ್ರದಲ್ಲಿ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡಿದ ಪೈಲೆಟ್

18-pavagada

Pavagada: ಆಂಬ್ಯುಲೆನ್ಸ್ ಸಿಗದೆ ವೃದ್ದ ಮೃತದೇಹವನ್ನು ಬೈಕ್ ನಲ್ಲಿಯೇ ಕೊಂಡೊಯ್ದ ಮಕ್ಕಳು

India: ಭಾರತದ ಈ ಏಳು ರೈಲ್ವೆ ನಿಲ್ದಾಣಗಳ ಹೆಸರೇ ತುಂಬಾ ತಮಾಷೆಯಾಗಿದೆ… ಎಲ್ಲಿವೆ ಅವು!

India: ಭಾರತದ ಈ ಏಳು ರೈಲ್ವೆ ನಿಲ್ದಾಣಗಳ ಹೆಸರೇ ತುಂಬಾ ತಮಾಷೆಯಾಗಿದೆ… ಎಲ್ಲಿವೆ ಅವು!

Kharge (2)

One Nation, One Election ಅಸಂಭವ: ಕೇಂದ್ರ ಸಂಪುಟ ನಿರ್ಧಾರಕ್ಕೆ ಖರ್ಗೆ ವಿರೋಧ

1-congress

Rahul Gandhi ವಿರುದ್ಧ ಕೇಂದ್ರ ಸಚಿವ, ಬಿಜೆಪಿಗರ ಹೇಳಿಕೆ;ದೇಶದ ವಿವಿಧೆಡೆ ಕೈ ಪ್ರತಿಭಟನೆ

12

Actress Sakunthala: ಹೃದಯಾಘಾತದಿಂದ ಬಹುಭಾಷಾ ನಟಿ ʼಸಿ.ಐ.ಡಿ. ಶಕುಂತಲಾʼ ನಿಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Cricket: ಒಂದೇ ಫ್ರೇಮ್‌ನಲ್ಲಿ ಗಂಭೀರ್‌- ಕೊಹ್ಲಿ; ಹಳೆ ದಿನಗಳನ್ನು ಸ್ಮರಿಸಿದ ಸ್ನೇಹಿತರು

Cricket: ಒಂದೇ ಫ್ರೇಮ್‌ನಲ್ಲಿ ಗಂಭೀರ್‌- ಕೊಹ್ಲಿ; ಹಳೆ ದಿನಗಳನ್ನು ಸ್ಮರಿಸಿದ ಸ್ನೇಹಿತರು

T20 world cup 2024; ವನಿತೆಯರ ವಿಶ್ವಕಪ್‌ ನಿಧಿಯಲ್ಲಿ ಭಾರೀ ಏರಿಕೆ, ಸಮಾನ ಬಹುಮಾನ: ಐಸಿಸಿ

T20 world cup 2024; ವನಿತೆಯರ ವಿಶ್ವಕಪ್‌ ನಿಧಿಯಲ್ಲಿ ಭಾರೀ ಏರಿಕೆ, ಸಮಾನ ಬಹುಮಾನ: ಐಸಿಸಿ

Ranji Trophy: Samit Dravid in possible squad

Ranji Trophy: ಸಂಭಾವ್ಯ ತಂಡದಲ್ಲಿ ಸಮಿತ್‌ ದ್ರಾವಿಡ್‌

Champions Trophy; ICC delegation to Karachi for security review

Champions Trophy; ಭದ್ರತೆ ಪರಿಶೀಲನೆಗೆ ಐಸಿಸಿ ನಿಯೋಗ ಕರಾಚಿಗೆ

China Open Badminton: Priyanshu Rajawat out

China Open Badminton: ಪ್ರಿಯಾಂಶು ರಾಜಾವತ್‌ ಹೊರಕ್ಕೆ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

14

Rummy Aata Movie: ಸೆ.20ರಿಂದ ರಮ್ಮಿ ಆಟ ಶುರು

Viral Video: ಮೆದುಳಿನ ಸರ್ಜರಿ ನಡೆಸುವ ವೇಳೆ ಜೂ.ಎನ್‌ ಟಿಆರ್‌ ಸಿನಿಮಾ ವೀಕ್ಷಿಸಿದ ರೋಗಿ.!

Viral Video: ಮೆದುಳಿನ ಸರ್ಜರಿ ನಡೆಸುವ ವೇಳೆ ಜೂ.ಎನ್‌ ಟಿಆರ್‌ ಸಿನಿಮಾ ವೀಕ್ಷಿಸಿದ ರೋಗಿ.!

Video: ಕೇವಲ ಒಂದೇ ಚಕ್ರದಲ್ಲಿ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡಿದ ಪೈಲೆಟ್

Video: ಕೇವಲ ಒಂದೇ ಚಕ್ರದಲ್ಲಿ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡಿದ ಪೈಲೆಟ್

18-pavagada

Pavagada: ಆಂಬ್ಯುಲೆನ್ಸ್ ಸಿಗದೆ ವೃದ್ದ ಮೃತದೇಹವನ್ನು ಬೈಕ್ ನಲ್ಲಿಯೇ ಕೊಂಡೊಯ್ದ ಮಕ್ಕಳು

India: ಭಾರತದ ಈ ಏಳು ರೈಲ್ವೆ ನಿಲ್ದಾಣಗಳ ಹೆಸರೇ ತುಂಬಾ ತಮಾಷೆಯಾಗಿದೆ… ಎಲ್ಲಿವೆ ಅವು!

India: ಭಾರತದ ಈ ಏಳು ರೈಲ್ವೆ ನಿಲ್ದಾಣಗಳ ಹೆಸರೇ ತುಂಬಾ ತಮಾಷೆಯಾಗಿದೆ… ಎಲ್ಲಿವೆ ಅವು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.