Paris Olympics; ಅರ್ಶದ್ ಕೂಡಾ ನನ್ನ ಮಗ..; ಮನ ಗೆದ್ದ ನೀರಜ್ ಚೋಪ್ರಾ ತಾಯಿ
Team Udayavani, Aug 9, 2024, 11:00 AM IST
ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್ 2024ರ (Paris Olympics 2024) ಜಾವೆಲಿನ್ ಥ್ರೋ (Javelin Throw) ಸ್ಪರ್ಧೆಯಲ್ಲಿ ಪಾಕಿಸ್ತಾನದ ಅರ್ಶದ್ ನದೀಂ (Arshad Nadeem) ಒಲಿಂಪಿಕ್ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದಿದ್ದಾರೆ. ಟೋಕಿಯೊ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ (Neeraj Chopra) ಅವರು ಬೆಳ್ಳಿ ಗೆದ್ದಿದ್ದಾರೆ.
ಅರ್ಶದ್ ನದೀಂ ಅವರು 92.77 ಮೀಟರ್ ಜಾವೆಲಿನ್ ಎಸೆದು ದಾಖಲೆ ನಿರ್ಮಿಸಿದರು. ಕೇವಲ ಒಲಿಂಪಿಕ್ ದಾಖಲೆ ಮುರಿದಿದ್ದು ಮಾತ್ರವಲ್ಲದೆ, ಸಾರ್ವಕಾಲಿಕ ಜಾವೆಲಿನ್ ಎಸೆತದಲ್ಲಿ ಆರನೇ ಸ್ಥಾನಕ್ಕೇರಿದರು.
ಅರ್ಹತಾ ಸುತ್ತಿನಲ್ಲಿ ಮೊದಲ ಎಸೆತದಲ್ಲೇ ಭರ್ಜರಿ ಪ್ರದರ್ಶನ ನೀಡಿದ್ದ ನೀರಜ್, ಫೈನಲ್ ನಲ್ಲಿ ಕಷ್ಟಪಟ್ಟರು. ಆರು ಅವಕಾಶಗಳಲ್ಲಿ ನೀರಜ್ ಐದು ಬಾರಿ ಫೌಲ್ ಆದರು. ಎರಡನೇ ಪ್ರಯತ್ನದಲ್ಲಿ ಅವರು 89.45 ಮೀಟರ್ ದೂರ ಈಟಿ ಎಸೆದರು. ಗ್ರೆನೆಡಾದ ಆಂಡರ್ಸನ್ ಪೀಟರ್ಸ್ ಅವರು 88.54 ಮೀಟರ್ ಎಸೆದು ಮೂರನೇ ಸ್ಥಾನಕ್ಕೇರಿದರು.
ಪಂದ್ಯದ ಬಳಿಕ ಮಾತನಾಡಿದ ನೀರಜ್ ಚೋಪ್ರಾ ತಾಯಿ ಸರೋಜ್ ದೇವಿ ಭಾರತ ಮಾತ್ರವಲ್ಲದೆ ಪಾಕಿಸ್ತಾನದ ಅಭಿಮಾನಿಗಳ ಪ್ರೀತಿ ಪಡೆದರು.
“ನಾವು ಬೆಳ್ಳಿಯಿಂದ ಸಂತೋಷವಾಗಿದ್ದೇವೆ, ಚಿನ್ನ ಪಡೆದ ಅರ್ಶದ್ ನದೀಂ ಕೂಡಾ ನನ್ನ ಮಗ” ಎಂದು ಸರೋಜ್ ದೇವಿ ಹೇಳಿದರು.
ನೀರಜ್ ಅವರ ತಾಯಿಯ ಮಾತುಗಳನ್ನು ಭಾರತ ಮತ್ತು ಪಾಕಿಸ್ತಾನಿ ಅಭಿಮಾನಿಗಳು ಅವರ ಪ್ರೀತಿ ಮತ್ತು ಕ್ರೀಡಾ ಮನೋಭಾವಕ್ಕಾಗಿ ವ್ಯಾಪಕವಾಗಿ ಹೊಗಳಿದ್ದಾರೆ.
#WATCH | Haryana: On Neeraj Chopra winning a silver medal in men’s javelin throw at #ParisOlympics2024, his mother Saroj Devi says, “We are very happy, for us silver is also equal to gold…he was injured, so we are happy with his performance…” pic.twitter.com/6VxfMZD0rF
— ANI (@ANI) August 8, 2024
ಪಂದ್ಯದ ಬಳಿಕ ಮಾತನಾಡಿದ ನೀರಜ್ ಚೋಪ್ರಾ ಇಂದು ದೇವರ ಆಶೀರ್ವಾದ ಅರ್ಶದ್ ಮೇಲಿತ್ತು ಎಂದರು.
“ಅವರು ಅತ್ಯುತ್ತಮವಾಗಿ ಎಸೆದರು. ಕ್ರೀಡೆಯಲ್ಲಿ ಕೆಲವೊಮ್ಮೆ ನಿಮ್ಮ ದಿನ, ಕೆಲವೊಮ್ಮೆ ಬೇರೆಯವರ ದಿನವಿರುತ್ತದೆ. ಬಹುಶಃ ದೇವರ ಆಶೀರ್ವಾದವು ಇಂದು ಅರ್ಶದ್ ಗೆ ಹೆಚ್ಚಿತ್ತು. ನಾನು ನನ್ನ ಅತ್ಯುತ್ತಮ ಪ್ರಯತ್ನವನ್ನು ಮಾಡಿದ್ದೇನೆ, ನಾನು ಎಸೆಯಲು ನಿರ್ವಹಿಸಿದ ದೂರದಿಂದ ನನಗೆ ಸಂತೋಷವಾಗಿದೆ” ಎಂದು ನೀರಜ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
IND-W vs WI: ವನಿತೆಯರ ಏಕದಿನ ಮುಖಾಮುಖಿ
Ahmed Shehzad: ಭಾರತ-ಪಾಕ್ ಗಡಿಯಲ್ಲಿ ಕ್ರಿಕೆಟ್ ಸ್ಟೇಡಿಯಂಗೆ ಸಲಹೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.