ಈಕ್ವೇಸ್ಟ್ರಿಯನ್ ಅನುಷ್ಗೆ ಪ್ಯಾರಿಸ್ ಒಲಿಂಪಿಕ್ಸ್ ಟಿಕೆಟ್
Team Udayavani, Feb 20, 2024, 11:23 PM IST
ಹೊಸದಿಲ್ಲಿ: ಏಷ್ಯನ್ ಗೇಮ್ಸ್ ಪದಕ ವಿಜೇತ ಈಕ್ವೇಸ್ಟ್ರಿಯನ್ ಅನುಷ್ ಅಗರ್ವಲ್ಲ ಪ್ಯಾರಿಸ್ ಒಲಿಂಪಿಕ್ಸ್ ಅರ್ಹತೆ ಸಂಪಾದಿಸಿದ್ದಾರೆ. ಅವರು “ಡ್ರೆಸ್ಸೇಜ್ ಡಿಸಿಪ್ಲಿನ್’ ವಿಭಾಗದಲ್ಲಿ ಈ ಅರ್ಹತೆ ಗಳಿಸಿದರೆಂದು ಈಕ್ವೇಸ್ಟ್ರಿಯನ್ ಫೆಡರೇಶನ್ ಆಫ್ ಇಂಡಿಯಾ (ಇಎಫ್ಐ) ತಿಳಿಸಿದೆ.
24 ವರ್ಷದ ಕುದುರೆ ಸವಾರ ಅನುಷ್ ಕಳೆದ ಹ್ಯಾಂಗ್ಝೂ ಏಷ್ಯಾಡ್ನ ವೈಯಕ್ತಿಕ ಡ್ರೆಸ್ಸೇಜ್ ವಿಭಾಗದಲ್ಲಿ ಕಂಚಿನ ಪದಕ ಜಯಿಸಿದ್ದರು. ಈ ಬಾರಿ ಎಫ್ಇಐ ಪಂದ್ಯಾವಳಿಗಳಲ್ಲಿ ತೋರ್ಪಡಿಸಿದ ಒಟ್ಟಾರೆ ಸಾಧನೆ ಮಾನದಂಡದಂತೆ ಪ್ಯಾರಿಸ್ ಅರ್ಹತೆ ಲಭಿಸಿದೆ. ಪೋಲೆಂಡ್ (73.485), ನೆದರ್ಲೆಂಡ್ಸ್ (74.4), ಫ್ರ್ಯಾಂಕ್ಫರ್ಟ್ (72.9), ಬೆಲ್ಜಿಯಂನಲ್ಲಿ (74.2) ಅನುಷ್ ಸಾಧನೆ ಗಮನಾರ್ಹ ಮಟ್ಟದಲ್ಲಿತ್ತು.
ಇದಕ್ಕೂ ಮುನ್ನ ಒಲಿಂಪಿಕ್ಸ್ ಅರ್ಹತೆ ಸಂಪಾದಿಸಿದ್ದ ಭಾರತೀಯರೆಂದರೆ ದರ್ಯಾ ಸಿಂಗ್ (1980, ಮಾಸ್ಕೊ), ಇಂದ್ರಜಿತ್ ಲಾಂಬಾ (1996, ಅಟ್ಲಾಂಟಾ), ಇಮಿ¤ಯಾಜ್ ಅನೀಸ್ (2000, ಸಿಡ್ನಿ) ಮತ್ತು ಫವಾದ್ ಮಿರ್ಜಾ (2022, ಟೋಕಿಯೊ).
“ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸುವುದು ನನ್ನ ಬಾಲ್ಯದ ಕನಸಾಗಿತ್ತು. ಅದೀಗ ಸಾಕಾರಗೊಳ್ಳುತ್ತಿದೆ. ಬಹಳ ಹೆಮ್ಮೆ ಆಗುತ್ತಿದೆ. ಇದೊಂದು ಐತಿಹಾಸಿಕ ಕ್ಷಣ…’ ಎಂಬು ದಾಗಿ ಅನುಷ್ ಪ್ರತಿಕ್ರಿಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.