Paris olympics: ಪ್ಯಾರಿಸ್ ಪದಕದ ಗುಣಮಟ್ಟ ಕಳಪೆ?
Team Udayavani, Aug 10, 2024, 10:51 PM IST
ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್ ವಿಜೇತರಿಗೆ ನೀಡಲಾಗುವ ಪದಕಗಳ ಗುಣಮಟ್ಟ ಕಳಪೆ ಮಟ್ಟದ್ದಾಗಿಯೇ? ಅಮೆರಿಕದ ಸ್ಕೇಟ್‌ಬೋರ್ಡರ್ ನೈಜಾ ಹ್ಯೂಸ್ಟನ್ ಇಂಥದೊಂದು ಪ್ರಶ್ನೆಯನ್ನೆತ್ತಿದ್ದಾರೆ.
ಹ್ಯೂಸ್ಟನ್ ಸ್ಕೇಟ್‌ಬೋರ್ಡ್ ಸ್ಪರ್ಧೆಯಲ್ಲಿ ಕಂಚಿನ ಪದಕ ಜಯಿಸಿದ್ದರು. ಆದರೆ ಕೆಲವೇ ದಿನಗಳಲ್ಲಿ ಈ ಪದಕದ ಬಣ್ಣ ಮಾಸಿದೆ ಎಂಬುದು ಅವರ ಆರೋಪ. ಇದನ್ನವರು ವೀಡಿಯೊ ಸಮೇತ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನು ಜೋಪಾನವಾಗಿ ಹೇಗೆ ಕಾಪಿಡುವುದು ಎಂಬ ಪ್ರಶ್ನೆಯನ್ನೆತ್ತಿದ್ದಾರೆ.
“ಹೊಚ್ಚಹೊಸದಾಗಿದ್ದಾಗ ಈ ಪದಕಗಳು ಚೆಂದವಾಗಿ ಕಾಣುತ್ತವೆ. ಆದರೆ ಈ ಕಂಚಿನ ಪದಕದ ಬಣ್ಣ ಈಗಾಗಲೇ ಮಾಸಿದ್ದು, ದೊರಗು ದೊರಗಾಗಿದೆ. ಪದಕದ ಮೇಲ್ಪದರ ಕಿತ್ತು ಬರಲಾರಂಭಿಸಿದೆ. ಇದು ನಾವು, ನೀವು ನಿರೀಕ್ಷಿಸಿದಷ್ಟು ಉತ್ತಮ ಗುಣಮಟ್ಟವನ್ನು ಹೊಂದಿಲ್ಲ. ಒಲಿಂಪಿಕ್ ಪದಕಗಳೇ, ನಿಮ್ಮ ಗುಣಮಟ್ಟವನ್ನು ಸ್ವಲ್ಪ ಹೆಚ್ಚಿಸಿಕೊಳ್ಳಿ’ ಎಂದಿದ್ದಾರೆ ನೈಜಾ ಹ್ಯೂಸ್ಟನ್.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.