![Gambhir-Agarkar have differences of opinion on Pant-Rahul issue](https://www.udayavani.com/wp-content/uploads/2025/02/agarkar-415x233.jpg)
![Gambhir-Agarkar have differences of opinion on Pant-Rahul issue](https://www.udayavani.com/wp-content/uploads/2025/02/agarkar-415x233.jpg)
Team Udayavani, Aug 17, 2024, 6:00 AM IST
ಹೊಸದಿಲ್ಲಿ: ಪ್ಯಾರಿಸ್ ಪ್ಯಾರಾ ಲಿಂಪಿಕ್ಸ್‌ನಲ್ಲಿ ಪ್ರತಿನಿಧಿಸಲಿರುವ ಭಾರತದ ಕ್ರೀಡಾಪಟುಗಳನ್ನು ಶುಕ್ರವಾರ ಬೀಳ್ಕೊಡ ಲಾಯಿತು. ಪ್ಯಾರಾಲಿಂಪಿಕ್ ಕಮಿಟಿ ಆಫ್ ಇಂಡಿಯಾ (ಪಿಸಿಐ) ಮತ್ತು ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ (ಎಸ್‌ಎಐ) ಸೇರಿಕೊಂಡು ರಾಜಧಾನಿಯಲ್ಲಿ ಈ ಸಮಾರಂಭವನ್ನು ಏರ್ಪಡಿಸಿದ್ದವು.
“ನಮ್ಮ ಪ್ಯಾರಾ ಆ್ಯತ್ಲೀಟ್‌ಗಳು ಅಡೆತಡೆ ಗಳನ್ನೆಲ್ಲ ಮೀರಿ ಗೆಲುವು ಸಾಧಿಸುವ, ಸವಾಲುಗಳನ್ನು ಅವಕಾಶಗಳಾಗಿ ಪರಿವರ್ತಿ ಸುವ ಸಾಮರ್ಥ್ಯ ಹೊಂದಿದ್ದಾರೆ. 2024ರ ಕ್ರೀಡಾಕೂಟದ ತಯಾರಿಯ ವೇಳೆ ಉತ್ತಮ ದೃಢತೆ ಮತ್ತು ಪರಿಶ್ರಮ ವಹಿಸಿದ್ದಾರೆ. ಅನೇಕ ಕ್ರೀಡಾಪಟುಗಳು ಖೇಲೋ ಇಂಡಿಯಾದಿಂದ ಲಾಭ ಪಡೆದಿದ್ದಾರೆ. ಸರಕಾರ ಸರ್ವರೀತಿಯ ಸವಲತ್ತು ನೀಡುತ್ತ ಬಂದಿದೆ. ಇವರೆಲ್ಲರ ಪಾಲಿಗೆ ಇದೊಂದು ಮಹತ್ವದ ಪಯಣ. ದೇಶದ ಪ್ರತಿಷ್ಠೆ ಹಾಗೂ ಗೌರವವನ್ನು ಎತ್ತಿಹಿಡಿಯುವ ವಿಶ್ವಾಸವಿದೆ’ ಎಂದು ಕ್ರೀಡಾ ಸಚಿವ ಮನ್‌ಸುಖ್ ಮಾಂಡವೀಯ ಈ ಸಂದರ್ಭದಲ್ಲಿ ಹೇಳಿದರು.
ಈ ಬಾರಿ 84 ಮಂದಿ
ಟೋಕಿಯೊ ಪ್ಯಾರಾಲಿಂಪಿಕ್ಸ್‌ಗಾಗಿ ಭಾರತ 54 ಕ್ರೀಡಾಳುಗಳನ್ನು ಕಳುಹಿಸಿತ್ತು. ಅಲ್ಲಿ 19 ಪದಕ ಒಲಿದಿತ್ತು. ಈ ಬಾರಿ 84 ಕ್ರೀಡಾಪಟುಗಳ ತಂಡ ಪ್ಯಾರಿಸ್‌ಗೆ ತೆರಳಲಿದೆ. ಆದರೆ ಬ್ಯಾಡ್ಮಿಂಟನ್ ತಾರೆ, ಟೋಕಿಯೊದಲ್ಲಿ ಚಿನ್ನ ಜಯಿಸಿದ್ದ ಪ್ರಮೋದ್ ಭಗತ್ ಅಮಾನತಿಗೊಳಗಾದದ್ದೊಂದು ಹಿನ್ನಡೆ.
ಇದೇ ಸಂದರ್ಭದಲ್ಲಿ ಭಾರತದ ಪ್ಯಾರಾ ಲಿಂಪಿಕ್ಸ್ ಕ್ರೀಡಾಳುಗಳಿಗೆ ಸ್ಫೂರ್ತಿ ತುಂಬಬಲ್ಲ, ಅಭಿಷೇಕ್ ದುಬೆ ಮತ್ತು ಮಹಾವೀರ್ ರಾವತ್ ಬರೆದ “ಬ್ರೇಕಿಂಗ್ ಬ್ಯಾರಿಯರ್’ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.
12 ವಿಭಾಗಗಳಲ್ಲಿ ಸ್ಪರ್ಧೆ
ಭಾರತದ ಕ್ರೀಡಾಪಟುಗಳು 12 ಸ್ಪರ್ಧೆ ಗಳಲ್ಲಿ ಪದಕ ಬೇಟೆಗೆ ಇಳಿಯಲಿದ್ದಾರೆ. ಇವುಗಳೆಂದರೆ ಆರ್ಚರಿ, ಆ್ಯತ್ಲೆಟಿಕ್ಸ್, ಬ್ಯಾಡ್ಮಿಂಟನ್, ಕನೋಯಿಂಗ್, ಸೈಕ್ಲಿಂಗ್, ಬ್ಲೆ„ಂಡ್ ಜೂಡೋ, ಪವರ್‌ಲಿಫ್ಟಿಂಗ್, ರೋವಿಂಗ್, ಶೂಟಿಂಗ್, ಸ್ವಿಮ್ಮಿಂಗ್, ಟೇಬಲ್ ಟೆನಿಸ್ ಮತ್ತು ಟೇಕ್ವಾಂಡೊ.
ಸುಮಿತ್, ಭಾಗ್ಯಶ್ರೀ ಧ್ವಜಧಾರಿಗಳು
ಪ್ಯಾರಾಲಿಂಪಿಕ್ಸ್ ಉದ್ಘಾಟನ ಸಮಾರಂಭದಲ್ಲಿ ಜಾವೆಲಿನ್ ಎಸೆತಗಾರ ಸುಮಿತ್ ಆಂಟಿಲ್ ಮತ್ತು ಶಾಟ್‌ಪುಟ್ ತಾರೆ ಭಾಗ್ಯಶ್ರೀ ಜಾಧವ್ ಭಾರತದ ತ್ರಿವರ್ಣ ಧ್ವಜಧಾರಿಗಳಾಗಿ ಆಯ್ಕೆಯಾಗಿದ್ದಾರೆ.
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್‌ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
Don’t hug players: ಭಾರತದ ಆಟಗಾರರ ಅಪ್ಪಿಕೊಳ್ಬೇಡಿ… ತಂಡಕ್ಕೆ ಪಾಕ್ ಅಭಿಮಾನಿಗಳು ಕರೆ
You seem to have an Ad Blocker on.
To continue reading, please turn it off or whitelist Udayavani.