Paralympics: ಇಂಗ್ಲಿಷ್ ಕಾಲುವೆಯಲ್ಲಿ ಸಾಗಲಿದೆ ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ಜ್ಯೋತಿ
Team Udayavani, Aug 24, 2024, 10:32 PM IST
ಪ್ಯಾರಿಸ್: ಫ್ರಾನ್ಸ್‌ನ ಖ್ಯಾತ ಈಜುಪಟು ಲಿಯಾನ್ ಮಾರ್ಚಂಡ್ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಜ್ಯೋತಿಯನ್ನು ನಂದಿಸಿದ ಎರಡೇ ವಾರಗಳಲ್ಲಿ ಪ್ಯಾರಿಸ್‌ನಲ್ಲಿ ಮತ್ತೂಂದು ಜ್ಯೋತಿ ಪ್ರಜ್ವಲಿಸಲಿದೆ. ಇದು ಪ್ಯಾರಾಲಿಂಪಿಕ್ಸ್ ಜ್ಯೋತಿ!
ಈ ಕ್ರೀಡಾಕೂಟ ಪ್ಯಾರಿಸ್ ಆತಿಥ್ಯ ದಲ್ಲೇ ಆ. 28ರಿಂದ ಸೆ. 8ರ ತನಕ ನಡೆಯಲಿದೆ. ಇದರ ಜ್ಯೋತಿಯನ್ನು ಶನಿವಾರ ಲಂಡನ್ ಸಮೀಪದ ಬಕಿಂಗ್‌ಹ್ಯಾಮ್‌ಶೈರ್‌ನ ಸ್ಟೋಕ್ ಮ್ಯಾಂಡೆವಿಲ್ಲೆಯಲ್ಲಿ ಬೆಳಗಿಸಲಾಯಿತು. ಇದು ಪ್ಯಾರಾಲಿಂಪಿಕ್ಸ್ ಜನ್ಮಸ್ಥಳ. ಇಲ್ಲಿಂದ ಈ ಜ್ಯೋತಿ 4 ದಿನಗಳ ಕಾಲ ಇಂಗ್ಲಿಷ್ ಕಾಲುವೆ ಮೂಲಕ ಪ್ಯಾರಿಸ್‌ಗೆ ಆಗಮಿಸಲಿದೆ. ಅಟ್ಲಾಂಟಿಕ್ ಮಹಾ ಸಾಗರದಿಂದ ಮೆಡಿಟರೇನಿಯನ್ ಕಿನಾರೆ, ಪೈರಿನೀಸ್-ಆಲ್ಫ್ ಪರ್ವತ ಶ್ರೇಣಿಯನ್ನು ಹಾದು ಬರಲಿದೆ. ಕ್ರೀಡಾಕೂಟದ ಆರಂಭದ ದಿನವಾದ ಬುಧವಾರ ಪ್ಯಾರಾಲಿಂಪಿಕ್ಸ್ ಜ್ಯೋತಿ ಪ್ಯಾರಿಸ್ ತಲುಪಲಿದೆ.
50 ಕಿ.ಮೀ. ದೂರದ ಇಂಗ್ಲಿಷ್ ಕಾಲುವೆಯಲ್ಲಿ, 24 ಮಂದಿ ಬ್ರಿಟಿಷ್ ಆ್ಯತ್ಲೀಟ್‌ಗಳ ತಂಡವೊಂದು ಈ ರಿಲೇ ಯಲ್ಲಿ ಪಾಲ್ಗೊಳ್ಳಲಿದೆ. ಅನಂತರ ಇದನ್ನು 24 ಸದಸ್ಯರ ಫ್ರಾನ್ಸ್ ಕ್ರೀಡಾಪಟುಗ ಳಿಗೆ ಹಸ್ತಾಂತರಿಸಲಾಗುವುದು. ಫ್ರಾನ್ಸ್ ತಲುಪಿದ ಬಳಿಕ ಸಾವಿರದಷ್ಟು ಟಾರ್ಚ್ ರಿಲೇ ಸದಸ್ಯರು ಇದನ್ನು ಕೊಂಡೊಯ್ಯಲಿದ್ದಾರೆ.
ಸೈನಿಕರ ಕ್ರೀಡಾಕೂಟ:
ಬಕಿಂಗ್‌ಹ್ಯಾಮ್‌ಶೈರ್‌ನಲ್ಲಿ “ಸ್ಟೋಕ್ ಮ್ಯಾಂಡೆವಿಲ್ಲೆ ಗೇಮ್ಸ್’ ಹೆಸರಿನ ಕ್ರೀಡಾಕೂಟ 1948ರಲ್ಲಿ ಮೊದಲ ಸಲ ನಡೆದಿತ್ತು. ದ್ವಿತೀಯ ವಿಶ್ವಯುದ್ಧದಲ್ಲಿ ಅಂಗವೈಕಲ್ಯಕ್ಕೊಳಗಾದ ಕೆಲವು ಮಂದಿ ಸೈನಿಕರು ವೀಲ್‌ಚೇರ್ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.
ಈ ಕ್ರೀಡಾಕೂಟದ ಕಲ್ಪನೆಯ ಹಿಂದಿ ರುವ ವ್ಯಕ್ತಿ ಲುಡ್ವಿಂಗ್ ಗಟ್‌ಮ್ಯಾನ್. ಯಹೂದಿ ಶಸ್ತ್ರಚಿಕಿತ್ಸಕರಾಗಿದ್ದ ಇವರು ಜರ್ಮನಿಯ ನಾಝಿ ಶಿಬಿರದಿಂದ ಪಲಾಯನಗೈದು, ಸ್ಟೋಕ್ ಮ್ಯಾಂಡೆವಿಲ್ಲೆ ಆಸ್ಪತ್ರೆಯಲ್ಲಿ ಕೆಲಸ ಮಾಡಿದರು.
ಬಳಿಕ ಈ ಕ್ರೀಡಾಕೂಟ ಪ್ಯಾರಾಲಿಂಪಿಕ್ಸ್ ಗೇಮ್ಸ್ ಎಂದು ಕರೆಯಲ್ಪಟ್ಟಿತು. 1960ರಲ್ಲಿ ಮೊದಲ ಸಲ ರೋಮ್‌ನಲ್ಲಿ ನಡೆಯಿತು. 2012ರ ಲಂಡನ್ ಪ್ಯಾರಾಲಿಂಪಿಕ್ಸ್ ವೇಳೆ ಸ್ಟೋಕ್ ಮ್ಯಾಂಡೆವಿಲ್ಲೆಯಲ್ಲಿ ಮೊದಲ ಸಲ ಕ್ರೀಡಾಜ್ಯೋತಿಯನ್ನು ಬೆಳಗಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Derogatory Remark: ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮುಗಿದ ಕತೆ: ಸಿ.ಟಿ.ರವಿ
Police: ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ10,ದೆಹಲಿಯಲ್ಲಿ11 ಮಂದಿ ಸೆರೆ
Kashmir: 300 ಅಡಿ ಕಮರಿಗೆ ಸೇನಾ ವಾಹನ ಬಿದ್ದು 5 ಯೋಧರ ಸಾವು; ಹಲವರಿಗೆ ಗಾಯ
Catholic ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿ: ಕೇರಳದ ಬಿಷಪ್ ತರಾಟೆ
England; ಬೆನ್ ಸ್ಟೋಕ್ಸ್‌ಗೆ ಗಾಯ: ಚಾಂಪಿಯನ್ಸ್ ಟ್ರೋಫಿಗೆ ಅಲಭ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.