Paris Paralympics: ಮನೀಷ್ ನರ್ವಾಲ್ ರಜತ ಸಂಭ್ರಮ
Team Udayavani, Aug 30, 2024, 11:45 PM IST
ಪ್ಯಾರಿಸ್: ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಅವನಿ ಲೇಖರಾ ಮತ್ತು ಮೋನಾ ಅಗರ್ವಾಲ್ ವನಿತಾ ಶೂಟಿಂಗ್‌ನಲ್ಲಿ ಪದಕ ಬೇಟೆಯಾಡಿದರೆ, ಪುರುಷರ ವಿಭಾಗದಲ್ಲಿ ಮನೀಷ್ ನರ್ವಾಲ್ ಬೆಳ್ಳಿ ಬೆಡಗಿನೊಂದಿಗೆ ಭಾರತಕ್ಕೆ ಹರ್ಷ ಮೂಡಿಸಿದರು. ಅವರು 10 ಮೀ. ಏರ್ ಪಿಸ್ತೂಲ್ (ಎಸ್‌ಎಚ್1) ವಿಭಾಗದಲ್ಲಿ ದ್ವಿತೀಯ ಸ್ಥಾನಿಯಾದರು. ಟೋಕಿಯೊದಲ್ಲಿ ಮನೀಷ್ 50 ಮೀ. ಪಿಸ್ತೂಲ್ ಸ್ಪರ್ಧೆಯಲ್ಲಿ ಚಿನ್ನ ಜಯಿಸಿದ್ದರು.
ಫೈನಲ್‌ನಲ್ಲಿ ಮನೀಷ್ ನರ್ವಾಲ್ 234.9 ಅಂಕ ಗಳಿಸಿದರು. ದಕ್ಷಿಣ ಕೊರಿಯಾದ ಹಿರಿಯ ಶೂಟರ್ ಜೊ ಜಿಯೊಂಗುx 237.4 ಅಂಕಗಳೊಂದಿಗೆ ಚಿನ್ನ ಗೆದ್ದರು. ಸ್ಪರ್ಧೆಯ ಒಂದು ಹಂತದಲ್ಲಿ ಮನೀಷ್ ಮುನ್ನಡೆಯ ಲ್ಲಿದ್ದರು. ಆದರೆ ಕ್ರಮೇಣ ಅಂಕ ಗಳಿಕೆಯಲ್ಲಿ ಹಿನ್ನಡೆ ಕಾಣುತ್ತ ಹೋದರು.
22 ವರ್ಷದ ಮನೀಷ್ ನರ್ವಾಲ್, ಭಾರತದ ಮತ್ತೋರ್ವ ಶೂಟರ್ ಶಿವ ನರ್ವಾಲ್ ಅವರ ಅಣ್ಣನಾಗಿದ್ದಾರೆ.
ಮನೀಷ್ ನರ್ವಾಲ್ ಶೂಟಿಂಗ್ ಪರಿವಾರದ ಸದಸ್ಯ. ಖೇಲ್ ರತ್ನ ಪ್ರಶಸ್ತಿ ಪುರಸ್ಕೃತ ಕ್ರೀಡಾಳು. ಅರ್ಹತಾ ಸುತ್ತಿನಲ್ಲಿ 565 ಅಂಕಗಳೊಂದಿಗೆ ಫೈನಲ್ ಅರ್ಹತೆ ಸಂಪಾದಿಸಿದ್ದರು. ಇಲ್ಲಿ ಸ್ಪರ್ಧೆಗಿಳಿದಿದ್ದ ಭಾರತದ ಮತ್ತೋರ್ವ ಶೂಟರ್, 17 ವರ್ಷದ ರುದ್ರಾಂಕ್ಷ್ ಖಂಡೇಲ್ವಾಲ್ 561 ಅಂಕ ಗಳಿಸಿ ಫೈನಲ್ ರೇಸ್‌ನಿಂದ ಹೊರಗುಳಿಯಬೇಕಾಯಿತು.
ಮನೀಷ್ ಸಾಧನೆ ಕುರಿತು ಮಾತಾಡಿದ ತಂದೆ ದಿಲಾºಗ್ ನರ್ವಾಲ್, “ನಿಜ, ಮನೀಷ್ ಟೋಕಿಯೊದಲ್ಲಿ 50 ಮೀ. ಪಿಸ್ತೂಲ್ ಸ್ಪರ್ಧೆಯಲ್ಲಿ ಚಿನ್ನ ಜಯಿಸಿದ್ದ. ಆದರೆ ಇಲ್ಲಿ 10 ಮೀ. ಏರ್ ಪಿಸ್ತೂಲ್ ವಿಭಾಗದಲ್ಲಿ ಪಕದವೊಂದನ್ನು ಗೆಲ್ಲುವುದು ಮುಖ್ಯ ಗುರಿ ಆಗಿತ್ತು. ಟೋಕಿಯೊ ಅರ್ಹತಾ ಸುತ್ತಿನಲ್ಲಿ ಅಗ್ರಸ್ಥಾನಿಯಾಗಿದ್ದ. ಆದರೆ ಇಲ್ಲಿ ದುರದೃಷ್ಟವಶಾತ್ 7ನೇ ಸ್ಥಾನಕ್ಕೆ ಇಳಿದ. ಸ್ವಲ್ಪ ಮೊದಲು ಕರೆ ಮಾಡಿ, ಚಿನ್ನ ತರಲಾಗದ್ದಕ್ಕೆ ವಿಷಾದಿಸಿದ್ದ. ಆದರೆ ಇದು ಕೂಡ ಅಮೋಘ ಸಾಧನೆ, ಬೇಸರಪಡುವಂಥದ್ದೇನಿಲ್ಲ ಎಂದು ಸಮಾಧಾನಪಡಿಸಿದ್ದೇವೆ’ ಎಂದರು.
ದಿಲಾºಗ್ ನರ್ವಾಲ್, ರಾಜ್ಯ ಮಟ್ಟದ ಮಾಜಿ ಫ್ರೀ ಸ್ಟೈಲ್ ಕುಸ್ತಿಪಟು. ಮಗಳು ಶಿಖಾ ಅಂತಾರಾಷ್ಟ್ರೀಯ ಖ್ಯಾತಿಯ ಶೂಟರ್.ಕಿರಿಯ ಪುತ್ರ ಶಿವ ಕೂಡ ಶೂಟಿಂಗ್‌ನಲ್ಲಿ ಗಮನಾರ್ಹ ಸಾಧನೆಗೈದಿದ್ದಾರೆ. ಹಿರಿಯ ಮಗ ಮನ್‌ಜಿàತ್ ಕಳೆದ ವರ್ಷ ರಸ್ತೆ ಅಪಘಾತವೊಂದರಲ್ಲಿ ದುರ್ಮರಣಕ್ಕೀಡಾಗಿದ್ದರು.
ಟಿಟಿ, ಡಿಸ್ಕಸ್ ಭಾರತಕ್ಕೆ ಹಿನ್ನಡೆ
ಪ್ಯಾರಾಲಿಂಪಿಕ್ಸ್‌ನ ಶುಕ್ರವಾರದ ಕೆಲವು ಸ್ಪರ್ಧೆಗಳಲ್ಲಿ ಭಾರತ ನಿರಾಸೆ ಅನುಭವಿಸಿದೆ. ಮಹಿಳೆಯರ ಡಿಸ್ಕಸ್ ತ್ರೊÅà ಎಫ್55 ವಿಭಾಗದ ಫೈನಲ್‌ನಲ್ಲಿ ಸಾಕ್ಷಿ ಕಸಾನ (21.49 ಮೀ.) 8ನೇ ಮತ್ತು ಕರಮ್ ಜ್ಯೋತಿ (20.22 ಮೀ.) 9ನೇ ಸ್ಥಾನ ಪಡೆದರು.
ಪ್ಯಾರಾ ಟೇಬಲ್ ಟೆನಿಸ್‌ನ ಮಹಿಳೆ ಯರ ಡಬಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ಭವಿನಾಬೆನ್ ಪಟೇಲ್ ಮತ್ತು ಸೋನಲ್‌ಬೆನ್ ಪಟೇಲ್, ಕೊರಿಯಾದ ಜುಂಗ್ ಯಂಗ್ ಮತ್ತು ಮೂನ್ ಸುಂಘೆÂ ವಿರುದ್ಧ ಸೋಲನುಭವಿಸಿದರು.
ಪ್ಯಾರಾ ರೋವಿಂಗ್‌ನಲ್ಲಿ ಅನಿತಾ ಮತ್ತು ನಾರಾಯಣಾ ಕೊಂಗನಾಪಲ್ಲೆ ಅವರನ್ನೊಳಗೊಂಡ ಜೋಡಿ, ಮಿಶ್ರ ಡಬಲ್ಸ್ ಸ್ಕಲ್ ವಿಭಾಗದ ಹೀಟ್‌ನಲ್ಲಿ 5ನೇ ಸ್ಥಾನ ಪಡೆದಿದೆ. ಆದರೆ ಈ ವಿಭಾಗದ ಸ್ಪರ್ಧಿ ಫೈನಲ್‌ಗೆ ಪ್ರವೇಶಿಸಿರುವುದರಿಂದ ಇಬ್ಬರೂ ರೆಪಿಶೇಜ್ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ.
ಪ್ಯಾರಾ ಸೈಕ್ಲಿಂಗ್ ಟ್ರ್ಯಾಕ್ ಪುರುಷರ 3,000 ಮೀ. ವೈಯಕ್ತಿಕ ವಿಭಾಗದಲ್ಲಿ ಅರ್ಷದ್ ಶೇಕ್ 9ನೇ ಸ್ಥಾನ ಪಡೆದರು.ಮಹಿಳಾ ಸಿಂಗಲ್ಸ್‌ನಲ್ಲಿ ಪಲಕ್ ಕೊಹ್ಲಿ, ಇಂಡೋನೇಷ್ಯಾದ ಲಿಯಾನಿ ರತ್ರಿ ವಿರುದ್ಧ 21-18, 5-21, 13-21 ಅಂತರದಿಂದ ಸೋಲನುಭವಿಸಿದರು.
ಪ್ಯಾರಾ ಶೂಟಿಂಗ್ ಮಿಶ್ರ 10 ಮೀ. ಏರ್ ರೈಫಲ್‌ನಲ್ಲಿ ಕನ್ನಡಿಗ ಶ್ರೀಹರ್ಷ ದೇವರೆಡ್ಡಿ 9ನೇ ಸ್ಥಾನದೊಂದಿಗೆ ಫೈನಲ್ ಪ್ರವೇಶಿಸಲು ವಿಫಲರಾಗಿದ್ದಾರೆ. ಪ್ಯಾರಾ ಆರ್ಚರಿ ಮಹಿಳಾ ವೈಯಕ್ತಿಕ ಕಾಂಪೌಂಡ್ ವಿಭಾಗದಲ್ಲಿ ಸರಿತಾ, ಮಲೇಷ್ಯಾದ ನೂರ್ ಜೋನಾಥನ್ ಅಬ್ದುಲ್ ವಿರುದ್ಧ ಗೆದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDvsNZ; ಬಿಗಿ ದಾಳಿ ನಡೆಸಿ ಪಂದ್ಯ ಹಿಡಿತಕ್ಕೆ ಪಡೆದುಕೊಂಡ ಟೀಮ್ ಇಂಡಿಯಾ
INDvsNZ; ಗಿಲ್, ಪಂತ್, ವಾಷಿಂಗ್ಟನ್ ಬ್ಯಾಟಿಂಗ್ ನೆರವು; ಅಲ್ಪ ಮುನ್ನಡೆ ಸಾಧಿಸಿದ ಭಾರತ
IPL ಚಾಂಪಿಯನ್ ಕ್ಯಾಪ್ಟನ್ ಅಯ್ಯರ್ ನನ್ನು ಕೆಕೆಆರ್ ಕೈಬಿಟ್ಟಿದ್ಯಾಕೆ?: ಉತ್ತರಿಸಿದ ಸಿಇಒ
Hong Kong Sixes 2024: ಒಂದೇ ಓವರ್ ನಲ್ಲಿ 37 ರನ್ ಬಿಟ್ಟುಕೊಟ್ಟ ರಾಬಿನ್ ಉತ್ತಪ್ಪ
KKR: ಕೆಕೆಆರ್‌ಗೆ ಅಗರ್ತಲಾ ಮೈದಾನ 2ನೇ ತವರು ಅಂಗಳ?
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.