ಕ್ಯಾನ್ಸರ್ ಪೀಡಿತ ತಾಯಿಗಾಗಿ ಸುಶೀಲ್ ವಿರುದ್ಧ ಗೆಲ್ಲುತ್ತೇನೆ
Team Udayavani, Jan 2, 2018, 6:10 AM IST
ನವದೆಹಲಿ: ನನ್ನ ತಾಯಿ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದಾಳೆ. ಕಾಯಿಲೆ ಈಗ ಮೂರನೇ ಹಂತದಲ್ಲಿದೆ. ಅವಳಿಗಾಗಿ ಸುಶೀಲ್ ಕುಮಾರ್ ವಿರುದ್ಧ ಪ್ರೊ ಕುಸ್ತಿ ಲೀಗ್‌ನಲ್ಲಿ ಜಯ ಸಾಧಿಸುತ್ತೇನೆ ಎಂದು ಕುಸ್ತಿಪಟು ಪ್ರವೀಣ್ ರಾಣಾ ಶಪಥ ಮಾಡಿದ್ದಾರೆ. ಇದಕ್ಕೂ ಮುನ್ನ ಪತ್ರಿಕಾಗೋಷ್ಠಿ ನಡೆಸಿದ್ದ ಸುಶೀಲ್ ಕುಮಾರ್, ನಾನು ತಪ್ಪು ಮಾಡಿದ್ದರೆ ಗಲ್ಲಿಗೇರಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ರಾಣಾ ಶಪಥ ಹಿನ್ನೆಲೆ: ಆಸ್ಟ್ರೇಲಿಯಾದ ಗೋಲ್ಡ್‌ಕೋಸ್ಟ್‌ನಲ್ಲಿ ನಡೆಯಲಿರುವ 2018 ಕಾಮನ್‌ವೆಲ್ತ್ ಗೇಮ್ಸ್‌ಗೆ ಇತ್ತೀಚೆಗೆ ಅರ್ಹತಾ ಸುತ್ತಿನ ಪಂದ್ಯ ನಡೆಸಲಾಗಿತ್ತು. ಈ ಪಂದ್ಯದಲ್ಲಿ ಸುಶೀಲ್ ಕುಮಾರ್ 7-3ರಿಂದ ರಾಣಾ ವಿರುದ್ಧ ಗೆಲುವು ಸಾಧಿಸಿದ್ದರು. ಇದೇ ಸಂದರ್ಭದಲ್ಲಿ ರಾಣಾ ಮೇಲೆ ಸುಶೀಲ್ ಬೆಂಬಲಿಗರು ಹಲ್ಲೆ ಮಾಡಿದ್ದರು. ಹೀಗಾಗಿ ಪಿಡಬ್ಲೂéಎಲ್‌ನಲ್ಲಿ ಸುಶೀಲ್ ಕುಮಾರ್ ಸೋಲಿಸುತ್ತೇನೆ ಎಂದು ರಾಣಾ ಪಣ ತೊಟ್ಟಿದ್ದಾರೆ. ಸುಶೀಲ್ ಬೆಂಬಲಿಗರೇ ಹಲ್ಲೆ ಮಾಡಿದ್ದಾರೆ ಎಂದು ದೂರು ದಾಖಲಾಗಿದೆ. ಆದರೆ ಸುಶೀಲ್ ಕುಮಾರ್ ತಾನು ತಪ್ಪಿತಸ್ಥನಾಗಿದ್ದರೆ ಗಲ್ಲಿಗೇರಿಸಿ ಎನ್ನುವ ಮೂಲಕ ಆರೋಪವನ್ನು ನಿರಾಕರಿಸಿದ್ದಾರೆ.
ಪದೇಪದೇ ವಿವಾದದಲ್ಲಿ
ಒಲಿಂಪಿಕ್ಸ್ ಬೆಳ್ಳಿ ತಾರೆ
ಎರಡು ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಪದಕ ತಂದ ಸುಶೀಲ್ ಕುಮಾರ್ ಕಳೆದ ಎರಡು ವರ್ಷದಿಂದ ಒಂದಲ್ಲ ಒಂದು ವಿವಾದದಲ್ಲಿ ಸಿಲುಕುತ್ತಿದ್ದಾರೆ. 2016 ರಿಯೋ ಒಲಿಂಪಿಕ್ಸ್‌ಗೆ 74ಕೆಜಿ ವಿಭಾಗದಲ್ಲಿ ಸುಶೀಲ್ ಕುಮಾರ್ ಬದಲು ನರಸಿಂಗ್ ಯಾದವ್ ಅರ್ಹತೆ ಪಡೆದಿದ್ದರು. ನಂತರ ಉದ್ದೀಪನ ಮದ್ದು ಪ್ರಕರಣದಲ್ಲಿ ನರಸಿಂಗ್ ಯಾದವ್ ಸಿಲುಕಿ ಅವಕಾಶ ಕಳೆದುಕೊಂಡರು. ಈ ಸಂದರ್ಭದಲ್ಲಿ ಸುಶೀಲ್ ಕುಮಾರ್ ಬೆಂಬಲಿಗರೇ ನರಸಿಂಗ್ ಯಾದವ್‌ಗೆ ಪಾನೀಯದಲ್ಲಿ ಉದ್ದೀಪನ ಬೆರೆಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಇತ್ತೀಚೆಗೆ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಕೂಡ ಸುಶೀಲ್ ವಿರುದಟಛಿ ಯಾವುದೇ ಕುಸ್ತಿಪಟುಗಳು ಸ್ಪರ್ಧಿಸಿರಲಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka sports meet: ಈಜು ಸ್ಪರ್ಧೆ ಆರಂಭ; ದಕ್ಷಿಣ ಕನ್ನಡ ಮೇಲುಗೈ
Under-19 Women’s T20 World Cup: ವೈಷ್ಣವಿ ಹ್ಯಾಟ್ರಿಕ್, 5 ರನ್ನಿಗೆ 5 ವಿಕೆಟ್ ದಾಖಲೆ
Australia Open: 50ನೇ ಬಾರಿಗೆ ಗ್ರ್ಯಾನ್‌ಸ್ಲಾಮ್ ಸೆಮೀಸ್‌ಗೇರಿದ ಜೋಕೋ
Women’s ODI rankings: ಅಗ್ರಸ್ಥಾನಕ್ಕೆ ಮಂಧನಾ ಸನಿಹ
Rinku Singh: ತಂದೆಗೆ ಸೂಪರ್ ಬೈಕ್ ಗಿಫ್ಟ್ ನೀಡಿದ ರಿಂಕು ಸಿಂಗ್… ಬೆಲೆ ಎಷ್ಟು ಗೊತ್ತಾ?