T20 World Cup; ಹ್ಯಾಟ್ರಿಕ್ ವಿಕೆಟ್ ಕಿತ್ತ ಕಮಿನ್ಸ್; 17 ವರ್ಷದ ಬಳಿಕ ಆಸೀಸ್ ಬೌಲರ್ ಸಾಧನೆ
Team Udayavani, Jun 21, 2024, 12:39 PM IST
ಆ್ಯಂಟಿಗುವಾ: ಐಸಿಸಿ ಟಿ20 ವಿಶ್ವಕಪ್ ನ ಗುಂಪು ಹಂತದಲ್ಲಿ ಅಜೇಯ ಆಟವಾಡಿದ್ದ ಆಸ್ಟ್ರೇಲಿಯಾ ಸೂಪರ್ 8 ಹಂತದಲ್ಲಿ ತನ್ನ ಗೆಲುವಿನ ಓಟ ಮುಂದುವರಿಸಿದೆ. ಆ್ಯಂಟಿಗುವಾದ ಸರ್ ವಿವಿಯನ್ ರಿಚರ್ಡ್ ಸ್ಟೇಡಿಯಂನಲ್ಲಿ ನಡೆದ ಮಳೆ ಪೀಡಿತ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು ಆಸ್ಟ್ರೇಲಿಯಾ 28 ರನ್ ಅಂತರದಿಂದ ಸೋಲಿಸಿತು.
ಈ ಪಂದ್ಯದಲ್ಲಿ ಆಸ್ಟ್ರೇಲಿಯಾದ ಆಲ್ ರೌಂಡರ್ ಪ್ಯಾಟ್ ಕಮಿನ್ಸ್ ಅವರು ಹ್ಯಾಟ್ರಿಕ್ ವಿಕೆಟ್ ತೆಗೆದು ಮಿಂಚಿದರು. ಬಾಂಗ್ಲಾದ ಮೊಹಮದುಲ್ಲಾ, ಮೆಹದಿ ಹಸನ್ ಮತ್ತು ತೌಹಿದ್ ಹ್ರದೋಯ್ ಅವರ ವಿಕೆಟ್ ಗಳನ್ನು ಕಿತ್ತ ಕಮಿನ್ಸ್ ಸಂಭ್ರಮಿಸಿದರು.
ನಾಲ್ಕು ಓವರ್ ಎಸೆದ ಪ್ಯಾಟ್ ಕಮಿನ್ಸ್ 29 ರನ್ ನೀಡಿ ಮೂರು ವಿಕೆಟ್ ಪಡೆದರು. ಸ್ಪಿನ್ನರ್ ಆ್ಯಡಂ ಜಂಪಾ ನಾಲ್ಕು ಓವರ್ ನಲ್ಲಿ 24 ರನ್ ನೀಡಿ ಎರಡು ವಿಕೆಟ್ ಕಿತ್ತರು.
ಕಮಿನ್ಸ್ ಅವರು ಟಿ20 ವಿಶ್ವಕಪ್ ನ ಇತಿಹಾಸದಲ್ಲಿ ಹ್ಯಾಟ್ರಿಕ್ ಪಡೆದ ಎರಡನೇ ಆಸ್ಟ್ರೇಲಿಯಾ ಆಟಗಾರನಾಗಿದ್ದಾರೆ. 2007ರ ಆವೃತ್ತಿಯಲ್ಲಿ ಬ್ರೆಟ್ ಲಿ ಅವರು ವಿಶ್ವಕಪ್ ಹ್ಯಾಟ್ರಿಕ್ ಪಡೆದಿದ್ದರು.
PAT CUMMINS BECOMES THE FIRST AUSTRALIAN TO TAKE MEN’S T20I WC HAT-TRICK AFTER 17 LONG YEARS. 🐐 pic.twitter.com/rt9rC5hImA
— Johns. (@CricCrazyJohns) June 21, 2024
ಈ ಮಧ್ಯೆ ಮಿಚೆಲ್ ಸ್ಟಾರ್ಕ್ ಅವರು ಆರಂಭಿಕ ಓವರ್‌ನಲ್ಲಿ ತಂಜಿದ್ ಹಸನ್ ಅವರನ್ನು ಔಟ್ ಮಾಡುವ ಮೂಲಕ ವೈಟ್ ಬಾಲ್ ಕ್ರಿಕೆಟ್ ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆದರು. ತಂಜಿದ್ ಹಸನ್ ವಿಕೆಟ್ ಸ್ಟಾರ್ಕ್ ಅವರ 95 ನೇ ವಿಶ್ವಕಪ್ ವಿಕೆಟ್ ಆಗಿದೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ತಂಡವು 8 ವಿಕೆಟ್ ಕಳೆದುಕೊಂಡು 140 ರನ್ ಗಳಿಸಿತ್ತು. ಗುರಿ ಬೆನ್ನತ್ತಿದ ಆಸೀಸ್ 11.2 ಓವರ್ ಗಳಲ್ಲಿ ಎರಡು ವಿಕೆಟ್ ಕಳೆದುಕೊಂಡು 100 ರನ್ ಗಳಿಸಿದ್ದಾಗ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತು. ಡಕ್ ವರ್ತ್ ಲೂಯಿಸ್ ನಿಯಮದ ಪ್ರಕಾರ ಈ ಸಮಯದಲ್ಲಿ ಆಸೀಸ್ 28 ರನ್ ಗಳಿಂದ ಮುಂದಿತ್ತು. ಹೀಗಾಗಿ ಮಾರ್ಷ್ ಪಡೆಯನ್ನು ವಿಜಯಿ ಎಂದು ಘೋಷಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.