ತವರಿನಲ್ಲಿ ಮತ್ತೆ ಪಾಟ್ನಾಗೆ ಆಘಾತಕಾರಿ ಸೋಲು
Team Udayavani, Oct 31, 2018, 9:00 AM IST
ಪಾಟ್ನಾ: ಹಾಲಿ ಚಾಂಪಿಯನ್ ಪಾಟ್ನಾ ಪೈರೇಟ್ಸ್ ತಂಡ ತವರಿನ ಚರಣದಲ್ಲಿ ಸೋಲು ಕಾಣುತ್ತಿದೆ. ರವಿವಾರ ಹರಿಯಾಣ ವಿರುದ್ಧ ಸೋತಿದ್ದ ಪಾಟ್ನಾ ಮಂಗಳವಾರ ನಡೆದ ಪಂದ್ಯದಲ್ಲಿ ತೆಲುಗು ಟೈಟಾನ್ಸ್‌ಗೆ 53-32 ಅಂಕಗಳ ಭಾರೀ ಅಂತರದಿಂದ ಶರಣಾಯಿತು.
ರಾಹುಲ್ ಚೌಧರಿ ಅವರ ಭರ್ಜರಿ ರೈಡಿಂಗ್‌ನಿಂದಾಗಿ ತೆಲುಗು ಭಾರೀ ಮುನ್ನಡೆ ಪಡೆಯಿತು. ಪಾಟ್ನಾದ ಪರ್‌ದೀಪ್ ನರ್ವಾಲ್ ಈ ಪಂದ್ಯದಲ್ಲಿ ನೀರಸ ಪ್ರದರ್ಶನ ನೀಡಿದರು. ಮೊದಲ ಅವಧಿಯ ಆಟ ಮುಗಿದಾಗ ತೆಲುಗು 25-17ರಿಂದ ಮುನ್ನಡೆ ಸಾಧಿಸಿತ್ತು. ದ್ವಿತೀಯ ಅವಧಿಯಲ್ಲೂ ತೆಲುಗು ಅಮೋಘವಾಗಿ ಆಡಿತು. ರೈಡಿಂಗ್ ಮತ್ತು ಟ್ಯಾಕಲ್‌ನಲ್ಲಿ ಶ್ರೇಷ್ಠ ನಿರ್ವಹಣೆ ನೀಡಿ ಗೆಲುವು ಒಲಿಸಿಕೊಂಡಿತು. ಇದು ತೆಲುಗು ಆಡಿದ ಆರನೇ ಪಂದ್ಯದಲ್ಲಿ ದಾಖಲಿಸಿದ ನಾಲ್ಕನೇ ಗೆಲುವು ಆಗಿದ್ದರೆ ಪಾಟ್ನಾ ಆಡಿದ 8 ಪಂದ್ಯಗಳಲ್ಲಿ ಕೇವಲ ಮೂರರಲ್ಲಿ ಜಯ ಸಾಧಿಸಲಷ್ಟೇ ಶಕ್ತವಾಗಿದೆ.
23 ಬಾರಿ ಎದುರಾಳಿ ಅಂಕಣಕ್ಕೆ ದಾಳಿ ನಡೆಸಿದ ಚೌಧರಿ ಗರಿಷ್ಠ 17 ಅಂಕ ಸಂಪಾದಿಸಿ ತಂಡದ ಭಾರೀ ಗೆಲುವಿಗೆ ಕಾರಣರಾದರು. ವಿಶಾಲ್ ಭಾರದ್ವಾಜ್ ಟ್ಯಾಕಲ್‌ನಲ್ಲಿ 9 ಅಂಕ ಪಡೆದರು. ಪಾಟ್ನಾ ಪರ ವಿಕಾಸ್ ಜಗ್ಲಾನ್ 9 ಅಂಕ ಪಡೆದರೆ ಭಾರೀ ನಿರೀಕ್ಷೆಯ ಪರ್‌ದೀಪ್ ಕೇವಲ 4 ಅಂಕ ಗಳಿಸಿದರು.
ಗುಜರಾತ್ ರಕ್ಷಣೆ ಮತ್ತು ಆಕ್ರಮಣ ಎರಡೂ ವಿಭಾಗದಲ್ಲಿ ಅತ್ಯುತ್ತಮ ಯಶಸ್ಸು ಸಾಧಿಸಿತು. ಇದಕ್ಕೆ ಹೋಲಿಸಿದರೆ ಪುಣೇರಿ ಆಟ ಕಳಪೆಯಾಗಿತ್ತು. ಅದು ಎರಡೂ ವಿಭಾಗದಲ್ಲಿ ವಿಫಲವಾಯಿತು. ಗುಜರಾತ್ ಪರ 13 ಬಾರಿ ದಾಳಿ ನಡೆಸಿದ ಸಚಿನ್ 10 ಅಂಕ ಗಳಿಸಿದರು. ಇವರಿಗೆ ಉತ್ತಮ ನೆರವು ನೀಡಿದ ಮಹೇಂದ್ರ ರಜಪೂತ್ 6 ಅಂಕ ಗಳಿಸಿದರು. ಗುಜರಾತ್ ಪರ ರಕ್ಷಣೆಯಲ್ಲಿ ರುತುರಾಜ್ ಕೊರವಿ ಮಿಂಚಿ 4 ಅಂಕ ಗಳಿಸಿದರು. ಪುಣೇರಿ ಪರ ನಿತಿನ್ ತೋಮರ್ ದಾಳಿಯಲ್ಲಿ 6 ಅಂಕ ಗಳಿಸಿದರು. ಉಳಿದ ಆಟಗಾರರು ಅವರ ಸಮಕ್ಕೆ ಬರಲು ಸಾಧ್ಯವಾಗದಿರುವುದು ಸೋಲಿಗೆ ಕಾರಣವಾಯಿತು.
ಗುಜರಾತ್ ಜಯಭೇರಿ
ದಿನದ ಮೊದಲ ಪಂದ್ಯದಲ್ಲಿ ಗುಜರಾತ್ ಫಾರ್ಚೂನ್ ಜೈಂಟ್ಸ್ 37-27 ಅಂಕಗಳಿಂದ ಪುಣೇರಿ ಪಲ್ಟಾನ್ ತಂಡವನ್ನು ಸೋಲಿಸಿದೆ. ಆಡಿರುವ 5 ಪಂದ್ಯದಲ್ಲಿ ಗುಜರಾತ್‌ಗೆ ಇದು 3ನೇ ಜಯ. 1 ಪಂದ್ಯದಲ್ಲಿ ಅದು ಸೋಲನುಭವಿಸಿದ್ದು, 1 ಪಂದ್ಯ ಟೈಗೊಂಡಿದೆ. ಮತ್ತೂಂದು ಕಡೆ 11 ಪಂದ್ಯವಾಡಿರುವ ಪುಣೇರಿ 5 ಗೆಲುವು, 5 ಸೋಲು, 1 ಟೈ ಸಾಧಿಸಿದೆ. ಸದ್ಯ ಅದು ಗುಂಪಿನಲ್ಲಿ ಅಗ್ರಸ್ಥಾನದಲ್ಲಿದ್ದರೂ ಈ ಸ್ಥಿತಿ ಹೀಗೆಯೇ ಇರುತ್ತದೆ ಎಂದು ಊಹಿಸಲು ಕಷ್ಟ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
BJP Internal Dispute: ಶಾಸಕ ಬಸನಗೌಡ ಯತ್ನಾಳ್ ವಿವಾದ ಇತ್ಯರ್ಥಕ್ಕೆ ಡಿ.9ರ ಗಡುವು
Constitution Day: ಉಡುಪಿ ಪೇಜಾವರ ಶ್ರೀ ಮನುಸ್ಮೃತಿ ಪ್ರತಿಪಾದಕರು: ಸಿಎಂ ಸಿದ್ದರಾಮಯ್ಯ
Train: ಗೋಮಟೇಶ್ವರ ಎಕ್ಸ್‌ಪ್ರೆಸ್ ರೈಲು ಮಂಗಳೂರು ಸೆಂಟ್ರಲ್‌ಗೆ ಬಾರದು
Kambala: ತೀರ್ಪುಗಾರರ ತೀರ್ಮಾನವೇ ಅಂತಿಮ:ಜಿಲ್ಲಾ ಕಂಬಳ ಸಮಿತಿ ಸಭೆಯಲ್ಲಿ ನಿರ್ಣಯ
Congress: ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಸ್ವರ ಎತ್ತಿದರೆ ಶಿಸ್ತುಕ್ರಮ: ಡಿ.ಕೆ.ಶಿವಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.