ಪರಿಪೂರ್ಣ ತಂಡ ಪ್ರಯತ್ನ: ರೋಹಿತ್
Team Udayavani, Mar 10, 2018, 7:30 AM IST
ಕೊಲಂಬೊ: ಬಾಂಗ್ಲಾದೇಶ ವಿರುದ್ಧ ನಾವು ಪರಿಪೂರ್ಣ ತಂಡ ಪ್ರಯತ್ನದಿಂದ ಆಡಿದ್ದರಿಂದ ಗೆಲುವು ಸಾಧಿಸಲು ಯಶಸ್ವಿಯಾದೆವು ಎಂದು ಭಾರತ ತಂಡದ ನಾಯಕ ರೋಹಿತ್ ಶರ್ಮ ಹೇಳಿದ್ದಾರೆ. ಉತ್ತಮ ಬೌಲಿಂಗ್ನಿಂದಾಗಿ ಭಾರ ತವು ಬಾಂಗ್ಲಾದೇಶದ ಮೊತ್ತವನ್ನು 139 ರನ್ನಿಗೆ ನಿಯಂತ್ರಿಸಿತ್ತು. ಆಬಳಿಕ ಶಿಖರ್ ಧವನ್ ಅವರ ಅರ್ಧ ಶತಕದಿಂದಾಗಿ ಭಾರತ ಇನ್ನೂ 1.2 ಓವರ್ ಬಾಕಿ ಇರುವಾಗಲೇ ಜಯ ಭೇರಿ ಬಾರಿಸಿತ್ತು. ಇದೊಂದು ಶ್ರೇಷ್ಠ ನಿರ್ವಹಣೆ. ಇದನ್ನು ನಾವು ನಿರೀಕ್ಷೆ ಮಾಡಿದ್ದೆವು. ಪಂದ್ಯದ ಆರಂಭದಿಂದ ಕೊನೆಯ ತನಕವೂ ನಾವು ಗೆಲುವಿಗಾಗಿ ಹೋರಾಡಿದ್ದೇವೆ. ಹಾಗಾಗಿ ಇದೊಂದು ತಂಡ ಪ್ರಯತ್ನವೆಂದು ಹೇಳಬಹುದು ಎಂದು ರೋಹಿತ್ ಶರ್ಮ ತಿಳಿಸಿದರು.
ಮೊದಲ ಪಂದ್ಯಕ್ಕೆ ಹೋಲಿಸಿದರೆ ಈ ಪಂದ್ಯದಲ್ಲಿ ಬೌಲರ್ಗಳ ನಿರ್ವ ಹಣೆಯಲ್ಲಿ ಏನಾದರೂ ಅಭಿವೃದ್ಧಿ ಯಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ನಾವು ಏನು ತಪ್ಪು ಮಾಡಿದ್ದೇವೆ ಎಂಬ ಬಗ್ಗೆಯೇ ಗಮನ ಹರಿಸಿದ್ದೆವು.ಲೆಂತ್ ಹೊಡೆತಕ್ಕೆ ಹೊಡೆ ಯುವ ಆಲೋಚನೆ ಮತ್ತು ದೀರ್ಘ ಬೌಂಡರಿ ಬಾರಿಸಲು ಪ್ರಯತ್ನಿಸಿದರು ಎಂದು ರೋಹಿತ್ ವಿವರಿಸಿದರು.
ಬೌಲರ್ಗಳು ತಮ್ಮ ಕಾರ್ಯ ಯೋಜನೆಯನ್ನು ಸಮರ್ಥ ರೀತಿ ಯಲ್ಲಿ ಕಾರ್ಯಗತಗೊಳಿಸಿದ್ದಾರೆ. ಬಾಂಗ್ಲಾವನ್ನು ಒತ್ತಡದಲ್ಲಿ ಸಿಲು ಕಿಸುವುದು ನಮ್ಮ ಯೋಜನೆ ಯಾಗಿತ್ತು. ಅದರಂತೆ ಸಾಗಿದ್ದೇವೆ. ಮೊದಲ ಪಂದ್ಯದಲ್ಲಿ ನಮ್ಮ ಬೌಲರ್ಗಳು ನಿರೀಕ್ಷಿತ ನಿರ್ವಹಣೆ ನೀಡಿರಲಿಲ್ಲ ಎಂದ ರೋಹಿತ್ ನಮ್ಮ ಕ್ಯಾಚ್ ಮತ್ತು ಫೀಲ್ಡಿಂಗ್ ಮಟ್ಟ ಸುಧಾರಿಸಬೇಕಾಗಿದೆ ಎಂದರು.
ಕ್ಯಾಚ್ ಪಡೆಯುವುದರಲ್ಲಿ ನಾವು ಇನ್ನಷ್ಟು ಉತ್ತಮ ನಿರ್ವಹಣೆ ನೀಡ ಬೇಕಾಗಿದೆ. ಒಳ್ಳೆಯ ಫೀಲ್ಡಿಂಗ್ ತಂಡವಾಗಿ ರೂಪುಗೊಳ್ಳುವುದು ನನ್ನ ಆಸೆಯಾಗಿದೆ. ಆವಾಗ ತಂಡದ ನಿರ್ವ ಹಣೆ ಉತ್ತಮಗೊಳ್ಳಲಿದೆ ಎಂದು ರೋಹಿತ್ ತಿಳಿಸಿದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pro Kabaddi League: ಯುಪಿ ಯೋಧಾಸ್,ಪಾಟ್ನಾ ಪೈರೇಟ್ಸ್ ಸೆಮಿಫೈನಲಿಗೆ
IND Vs AUS ಬಾಕ್ಸಿಂಗ್ ಡೇ ಟೆಸ್ಟ್: ಆಸ್ಟ್ರೇಲಿಯ ರನ್ ಓಟಕ್ಕೆ ಬುಮ್ರಾ ಬ್ರೇಕ್
INDvAUS: ಬ್ಯಾನ್ ತಪ್ಪಿಸಿಕೊಂಡ ವಿರಾಟ್ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ
Vijay Hazare Trophy: ಮಯಾಂಕ್ ಅಗರ್ವಾಲ್ ಶತಕದಾಟ; ಪಂಜಾಬ್ ಕೈನಿಂದ ಜಯ ಕಸಿದ ಕರ್ನಾಟಕ
M Chinnaswamy Stadium; ಶಾಂತಾ ಹೆಸರಿಡಲು ಸಮಸ್ಯೆಯೇನಿದೆ? ಕೆಎಸ್ಸಿಎ ತಾರತಮ್ಯವೇಕೆ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.