ಆಸೀಸ್ ಏಕದಿನ ತಂಡ ಪ್ರಕಟ: 9 ವರ್ಷಗಳ ಬಳಿಕ ಸಿಡ್ಲ್ ಆಗಮನ!
Team Udayavani, Jan 5, 2019, 12:30 AM IST
ಸಿಡ್ನಿ: ಪ್ರವಾಸಿ ಭಾರತದೆದುರಿನ ಏಕದಿನ ಸರಣಿಗೆ ತಂಡವನ್ನು ಆಯ್ಕೆ ಮಾಡಿರುವ ಆಸ್ಟ್ರೇಲಿಯ ಅನೇಕ ಮಹತ್ತರ ಬದಲಾವಣೆ ಮಾಡಿಕೊಂಡಿದೆ. ವೇಗಿ ಪೀಟರ್ ಸಿಡ್ಲ್, ಸ್ಪಿನ್ನರ್ ನಥನ್ ಲಿಯೋನ್ ಮತ್ತು ಬ್ಯಾಟ್ಸ್‌ಮನ್ ಉಸ್ಮಾನ್ ಖ್ವಾಜಾ ಅವರ ಪುನರಾಗಮನ ಪ್ರಮುಖವಾದುದು.
ಇವರಲ್ಲಿ ಸಿಡ್ಲ್ ಕೊನೆಯ ಸಲ ಏಕದಿನ ಪಂದ್ಯವಾಡಿದ್ದು 2010ರಷ್ಟು ಹಿಂದೆ. ಈ ಸರಣಿಯಲ್ಲಿ ಅವರು ಆಡುವ ಅವಕಾಶ ಪಡೆಯುವುದು ಬಹುತೇಕ ಖಾತ್ರಿಯಾಗಿದ್ದು, ಸುದೀರ್ಘ ಅಂತರದ ಬಳಿಕ ಏಕದಿನ ಪಂದ್ಯವಾಡಿದ ಆಸ್ಟ್ರೇಲಿಯದ ಕ್ರಿಕೆಟಿಗನೆನಿಸಲಿದ್ದಾರೆ. ಸದ್ಯ ಈ ದಾಖಲೆ ಟಿಮ್ ಜೋಹ್ರರ್ ಹೆಸರಲ್ಲಿದೆ (6 ವರ್ಷ, 282 ದಿನ).
ಹಲವರಿಗೆ ಗೇಟ್‌ಪಾಸ್, ವಿಶ್ರಾಂತಿ
ಕಳೆದ ವರ್ಷಾಂತ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಡಿದ ತಂಡದಲ್ಲಿದ್ದ ಕ್ರಿಸ್ ಲಿನ್, ಡಿ’ಆರ್ಸಿ ಶಾರ್ಟ್, ಬೆನ್ ಮೆಕ್‌ಡರ್ಮಟ್, ಟ್ರ್ಯಾವಿಸ್ ಹೆಡ್ ಮತ್ತು ಆ್ಯಶrನ್ ಅಗರ್ ಅವರನ್ನು ಕೈಬಿಡಲಾಗಿದೆ. ಇದೇ ವೇಳೆ ಬಿಡುವಿಲ್ಲದ ಕ್ರಿಕೆಟ್‌ನಲ್ಲಿ ತೊಡಗಿರುವ ತ್ರಿವಳಿ ವೇಗಿಗಳಾದ ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್ ಮತ್ತು ಜೋಶ್ ಹ್ಯಾಝಲ್‌ವುಡ್ ಅವರಿಗೆ ವಿಶ್ರಾಂತಿ ನೀಡಲಾಗಿದೆ.
ಬೆನ್ನುನೋವಿಗೊಳಗಾಗಿರುವ ನಥನ್ ಕೋರ್ಟರ್ ನೈಲ್ ಅವರನ್ನು ಆಯ್ಕೆಗೆ ಪರಿಗಣಿಸಿಲ್ಲ ಎಂದು ಆಯ್ಕೆ ಸಮಿತಿ ಅಧ್ಯಕ್ಷ ಟ್ರೆವರ್ ಹಾನ್ಸ್ ಹೇಳಿದರು.
ಸ್ಟಾರ್ ಬೌಲರ್‌ಗಳ ಗೈರಲ್ಲಿ ರಿಚರ್ಡ್‌ಸನ್, ಬೆಹೆÅಂಡಾಫ್ì, ಸಿಡ್ಲ್ ಮತ್ತು ಸ್ಟಾನ್‌ಲೇಕ್ ವೇಗದ ವಿಭಾಗವನ್ನು ನೋಡಿಕೊಳ್ಳಬೇಕಾಗಿದೆ. ವಿಶ್ವ ಚಾಂಪಿಯನ್ ಆಸ್ಟ್ರೇಲಿಯ ಕಳೆದ ವರ್ಷ ಕೇವಲ 2 ಏಕದಿನ ಪಂದ್ಯಗಳಲ್ಲಷ್ಟೇ ಜಯ ಸಾಧಿಸಿದ ಕಳಪೆ ದಾಖಲೆ ಹೊಂದಿದೆ.
ಸರಣಿಯ ಏಕದಿನ ಪಂದ್ಯಗಳು ಸಿಡ್ನಿ (ಜ. 12), ಅಡಿಲೇಡ್ (ಜ. 15) ಮತ್ತು ಮೆಲ್ಬರ್ನ್ನಲ್ಲಿ (ಜ. 18) ನಡೆಯಲಿವೆ.
ಆಸ್ಟ್ರೇಲಿಯ ತಂಡ: ಆರನ್ ಫಿಂಚ್ (ನಾಯಕ), ಉಸ್ಮಾನ್ ಖ್ವಾಜಾ, ಶಾನ್ ಮಾರ್ಷ್, ಪೀಟರ್ ಹ್ಯಾಂಡ್ಸ್‌ಕಾಂಬ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೋಯಿನಿಸ್, ಮಿಚೆಲ್ ಮಾರ್ಷ್, ಅಲೆಕ್ಸ್ ಕ್ಯಾರಿ, ಜೇ ರಿಚರ್ಡ್‌ಸನ್, ಬಿಲ್ಲಿ ಸ್ಟಾನ್‌ಲೇಕ್, ಜಾಸನ್ ಬೆಹೆÅಂಡಾಫ್ì, ಪೀಟರ್ ಸಿಡ್ಲ್, ನಥನ್ ಲಿಯೋನ್, ಆ್ಯಡಂ ಝಂಪ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
BJP Internal Dispute: ಶಾಸಕ ಬಸನಗೌಡ ಯತ್ನಾಳ್ ವಿವಾದ ಇತ್ಯರ್ಥಕ್ಕೆ ಡಿ.9ರ ಗಡುವು
Constitution Day: ಉಡುಪಿ ಪೇಜಾವರ ಶ್ರೀ ಮನುಸ್ಮೃತಿ ಪ್ರತಿಪಾದಕರು: ಸಿಎಂ ಸಿದ್ದರಾಮಯ್ಯ
Train: ಗೋಮಟೇಶ್ವರ ಎಕ್ಸ್‌ಪ್ರೆಸ್ ರೈಲು ಮಂಗಳೂರು ಸೆಂಟ್ರಲ್‌ಗೆ ಬಾರದು
Kambala: ತೀರ್ಪುಗಾರರ ತೀರ್ಮಾನವೇ ಅಂತಿಮ:ಜಿಲ್ಲಾ ಕಂಬಳ ಸಮಿತಿ ಸಭೆಯಲ್ಲಿ ನಿರ್ಣಯ
Congress: ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಸ್ವರ ಎತ್ತಿದರೆ ಶಿಸ್ತುಕ್ರಮ: ಡಿ.ಕೆ.ಶಿವಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.