ಕ್ವಿಟೋವಾ 4 ತಿಂಗಳ ನಂತರ ಟೆನಿಸ್ಗೆ
Team Udayavani, May 5, 2017, 1:12 PM IST
ನವದೆಹಲಿ: ಮನೆಗೆ ನುಗ್ಗಿದ ಕಳ್ಳನನ್ನು ತಡೆಯಲು ಹೋಗಿ ಎಡಗೈಗೆ ಗಂಭೀರ ಗಾಯ ಮಾಡಿಕೊಂಡಿದ್ದ ಚೆಕ್ ಗಣರಾಜ್ಯದ ಖ್ಯಾತ ಟೆನಿಸ್ ಆಟಗಾರ್ತಿ ಪೆಟ್ರಾ ಕ್ವಿಟೋವಾ 4 ತಿಂಗಳ ಸುದೀರ್ಘ ವಿಶ್ರಾಂತಿಯ ನಂತರ ಟೆನಿಸ್ ಅಂಕಣಕ್ಕೆ ಮರಳಿದ್ದಾರೆ. 2 ಬಾರಿಯ ವಿಂಬಲ್ಡನ್ ಸಿಂಗಲ್ಸ್ ಚಾಂಪಿಯನ್ ಕ್ವಿಟೋವಾ, ತಾವು ಅಭ್ಯಾಸ ಮಾಡುತ್ತಿರುವ ಚಿತ್ರವನ್ನು ಫೇಸ್ ಬುಕ್ನಲ್ಲಿ ಪ್ರಕಟಿಸಿದ್ದಾರೆ.ಕಳೆದ ಡಿಸೆಂಬರ್ನಲ್ಲಿ ಕ್ವಿಟೋವಾ ಮನೆಗೆ ಕಳ್ಳ ನುಗ್ಗಿದ್ದ. ಆತನನ್ನು ತಡೆಯಲು ಹೋದ ವೇಳೆ ಚಾಕುವಿನಿಂದ ಗಾಯಕ್ಕೊಳಗಾಗಿದ್ದಾರೆ.
ಅದೂ ತಾವು ಆಡುವ ಎಡಗೈ ಬೆರಳುಗಳಿಗೆ ಗಾಯ ಮಾಡಿಕೊಂಡಿದ್ದಾರೆ. ವೈದ್ಯರ ಪ್ರಕಾರ ಕ್ವಿಟೋವಾ ಮತ್ತೆ ಟೆನಿಸ್ಗೆ ಮರಳುವುದು ಕಷ್ಟ ಎನ್ನಲಾಗಿತ್ತು. ಆದರೆ ಸತತ ಚಿಕಿತ್ಸೆ, ವಿಶ್ರಾಂತಿ ಮತ್ತು ಹೋರಾಟಕಾರಿ ಮನೋಭಾವದಿಂದ ಕ್ವಿಟೋವಾಗೆ ಟೆನಿಸ್ಗೆ ಮರಳುವ ಕನಸನ್ನು ನನಸಾಗಿಸಿಕೊಂಡಿದ್ದಾರೆ.
ಕಳೆದವಾರ ಫ್ರೆಂಚ್ ಓಪನ್ ಪ್ರವೇಶ ಪಟ್ಟಿಗೆ ಕ್ವಿಟೋವಾ ಹೆಸರನ್ನು ಸೇರಿಸಲಾಗಿದೆ. ಆದರೆ ಫ್ರೆಂಚ್ ಓಪನ್ ಆಡುವ ಬಗ್ಗೆ ಯಾವುದೇ ಖಚಿತತೆ ಇಲ್ಲ. ಮೇ 28ರಿಂದ ಜೂನ್ 11ರ ಫ್ರೆಂಚ್ ಓಪನ್ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ
INDvAUS: ಶಮಿ ವಿರುದ್ದ ನಿಂತರೇ ನಾಯಕ ರೋಹಿತ್?; ವೇಗಿಗೆ ಆಸೀಸ್ ಪ್ರವಾಸ ಕಷ್ಟ!
WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ
R.Ashwin retirement: ಅಶ್ವಿನ್ ವಿದಾಯದ ಸುತ್ತಮುತ್ತ…
Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು
MUST WATCH
ಹೊಸ ಸೇರ್ಪಡೆ
Mudbidri: ಸರಕಾರಿ ಬಸ್ಸಿಗಿಲ್ಲ ನಿಲ್ದಾಣ
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
Puttur: ಬಸ್ – ಬೈಕ್ ಅಪಘಾತ; ಸವಾರ ಸಾವು
Parliament; ಸಂಸತ್ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್ ವಿರುದ್ದ ಆರೋಪ
BBK11: ಕೊನೆಗೂ ಬಿಗ್ ಬಾಸ್ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್ ಸುರೇಶ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.