ಕ್ವಿಟೋವಾಗೆ 3ನೇ ಮ್ಯಾಡ್ರಿಡ್ ಕಿರೀಟ
Team Udayavani, May 14, 2018, 7:00 AM IST
ಮ್ಯಾಡ್ರಿಡ್: ಜೆಕ್ ಗಣರಾಜ್ಯದ ಪೆಟ್ರಾ ಕ್ವಿಟೋವಾ 3ನೇ ಬಾರಿಗೆ “ಮ್ಯಾಡ್ರಿಡ್ ಓಪನ್’ ಟೆನಿಸ್ ಕಿರೀಟದಿಂದ ಅಲಂಕೃತಗೊಂಡಿದ್ದಾರೆ. ಆದರೆ ಇದಕ್ಕಾಗಿ ಅವರು ಫೈನಲ್‌ನಲ್ಲಿ ನಿರೀಕ್ಷೆಗೂ ಮೀರಿದ ಪೈಪೋಟಿ ಎದುರಿಸಬೇಕಾಯಿತು. ಒಂದು ಹಂತದಲ್ಲಂತೂ ಸೋತೇ ಬಿಟ್ಟರು ಎಂಬ ಹಂತಕ್ಕೆ ಮುಟ್ಟಿದ್ದರು.
ಪ್ರಶಸ್ತಿ ಸಮರದಲ್ಲಿ ಕ್ವಿಟೋವಾಗೆ ಎದುರಾದವರು ಅನೇಕ ದೊಡ್ಡ ಬೇಟೆಗಳನ್ನು ಪೂರೈಸಿ ಬಂದ ಹಾಲೆಂಡಿನ ಕಿಕಿ ಬರ್ಟೆನ್ಸ್. ಶ್ರೇಯಾಂಕ ರಹಿತ ಆಟಗಾರ್ತಿಯಾಗಿದ್ದ ಬರ್ಟೆನ್ಸ್ ಫೈನಲ್ ಹಾದಿಯಲ್ಲಿ ಮಾಜಿ ನಂಬರ್ ವನ್ ತಾರೆಗಳಾದ ಮರಿಯಾ ಶರಪೋವಾ, ಕ್ಯಾರೋಲಿನ್ ವೋಜ್ನಿಯಾಕಿ ಮೊದಲಾದವರನ್ನು ಮಣಿಸಿದ್ದರು. ಆದರೆ ಕ್ವಿಟೋವಾ ವಿರುದ್ಧ 2 ಗಂಟೆ, 51 ನಿಮಿಷಗಳ ಅಮೋಘ ಹೋರಾಟ ನಡೆಸಿದರೂ ಬರ್ಟೆನ್ಸ್ ಬಚಾವಾಗಲಿಲ್ಲ. 7-6 (8-6), 4-6, 6-3 ಅಂತರದಿಂದ ಗೆದ್ದ ಕ್ವಿಟೋವಾ ತಮ್ಮ ಟೆನಿಸ್ ಬಾಳ್ವೆಯ 24ನೇ ಪ್ರಶಸ್ತಿಯನ್ನು ಎತ್ತಿಹಿಡಿಯುವಲ್ಲಿ ಯಶಸ್ವಿಯಾದರು. ಇದಕ್ಕೂ ಮುನ್ನ ಅವರು 2011 ಮತ್ತು 2015ರಲ್ಲಿ ಮ್ಯಾಡ್ರಿಡ್ ಚಾಂಪಿಯನ್ ಆಗಿದ್ದರು.
ಇದು ಈ ವರ್ಷ ಪೆಟ್ರಾ ಕ್ವಿಟೋವಾಗೆ ಒಲಿದ 4ನೇ ಟೆನಿಸ್ ಪ್ರಶಸ್ತಿ. ಸೇಂಟ್ ಪೀಟರ್ಬರ್ಗ್, ದೋಹಾ ಮತ್ತು ಕಳೆದ ವಾರವಷ್ಟೇ ಪರಗ್ವೆ ಪಂದ್ಯಾವಳಿಯಲ್ಲೂ ಪೆಟ್ರೋವಾ ಚಾಂಪಿಯನ್ ಆಗಿದ್ದರು.
ಕಿಕಿ ಬರ್ಟೆನ್ಸ್ ತಮ್ಮ ಹಿಂದಿನ 6 ಫೈನಲ್‌ಗಳಲ್ಲಿ ಐದನ್ನು ಜಯಿಸಿದ್ದರು. ಇದರಲ್ಲಿ ಈ ವರ್ಷದ ಚಾರ್ಲ್ಸ್‌ಟನ್ ಪ್ರಶಸ್ತಿಯೂ ಸೇರಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ITF Open: ಬೆಂಗಳೂರು ಐಟಿಎಫ್ ಟೆನಿಸ್‌ಗೆ ಅಗ್ರ 100 ರ್‍ಯಾಂಕ್‌ನ ನಾಲ್ವರು
Travis Head: ಶ್ರೀಲಂಕಾ ಪ್ರವಾಸದಲ್ಲಿ ಟ್ರ್ಯಾವಿಸ್ ಹೆಡ್ ಓಪನಿಂಗ್?
NZ Vs SL: 3ನೇ ಏಕದಿನ; ಲಂಕಾಕ್ಕೆ ಜಯ, 2-1ರಿಂದ ಸರಣಿ ಕಿವೀಸ್ ವಶ
T20; ಇಂಗ್ಲೆಂಡ್ ವಿರುದ್ಧದ ಸರಣಿಗೆ ಟೀಮ್ ಇಂಡಿಯಾ ಪ್ರಕಟ: ಶಮಿಗೆ ಅವಕಾಶ
Malaysia Open; ಸೆಮಿಫೈನಲ್‌ನಲ್ಲಿ ಸಾತ್ವಿಕ್-ಚಿರಾಗ್ ಜೋಡಿಗೆ ಸೋಲು
MUST WATCH
ಹೊಸ ಸೇರ್ಪಡೆ
BBK11: ಮಾನಸಿಕವಾಗಿ ತುಂಬಾ ಕುಗ್ಗಿ ಹೋಗಿದ್ದೇನೆ.. ಕಿಚ್ಚನ ಮುಂದೆ ಕಣ್ಣೀರಿಟ್ಟ ಭವ್ಯ
JDS: 2028ಕ್ಕೆ ನಾನೇ ಮುಖ್ಯಮಂತ್ರಿ ಆಗುತ್ತೇನೆ ಎಂಬುದು ಭ್ರಮೆ: ಜಿ.ಟಿ.ದೇವೇಗೌಡ ಟಾಂಗ್
Chandan Shetty: ಕಾಟನ್ ಕ್ಯಾಂಡಿ ಹಾಡು; ಚಂದನ್‌ಶೆಟ್ಟಿ ವಿರುದ್ಧ ಕೃತಿಚೌರ್ಯ ದೂರು
Delhi Polls: ಮಾಜಿ ಸಿಎಂ ಪುತ್ರ ಸೇರಿ 29 ಅಭ್ಯರ್ಥಿಗಳ ಬಿಜೆಪಿಯ 2ನೇ ಪಟ್ಟಿ ಬಿಡುಗಡೆ
Sullia: ಅಸ್ವಸ್ಥ ಮಹಿಳೆ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.