ಬೆಂಗಳೂರಿನಲ್ಲಿ ಪಿಸ್ತೂಲ್ ಅಕಾಡೆಮಿ ತೆರೆಯುವೆ: ಶೂಟರ್ ನಂಜಪ್ಪ
Team Udayavani, Aug 24, 2017, 11:52 AM IST
ಬೆಂಗಳೂರು: ರಾಜ್ಯದ ಖ್ಯಾತ ಶೂಟರ್ ಬೆಂಗಳೂರಿನ ಪ್ರಕಾಶ್ ನಂಜಪ್ಪ ರಾಜ್ಯದಲ್ಲಿ ಪಿಸ್ತೂಲ್ ಶೂಟಿಂಗ್ ಅಕಾಡೆ ಮಿಯೊಂದನ್ನು ತೆರೆಯಲು ನಿರ್ಧರಿಸಿದ್ದಾರೆ. ಅರ್ಜುನ ಪ್ರಶಸ್ತಿ ಪಡೆದ ಬೆನ್ನಲ್ಲೇ ಅವರು ಈ ವಿಷಯವನ್ನು ಸ್ವತಃ ಉದಯವಾಣಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ಅಕಾಡೆಮಿ ತೆರೆಯಲು ಇನ್ನೂ ಸ್ವಲ್ಪ ಕಾಲಾವಕಾಶ ಬೇಕು. ಮೂರು ವರ್ಷದಲ್ಲಿ ಪಿಸ್ತೂಲ್ ಶೂಟಿಂಗ್ ಅಕಾಡೆಮಿಯನ್ನು ಬೆಂಗಳೂರಿನಲ್ಲಿ
ಆರಂಭಿಸುವುದಷ್ಟು ಖಚಿತ ಎನ್ನುವುದು ಪ್ರಕಾಶ್ ನಂಜಪ್ಪ ಅವರ ಮಾತು.
ಪಿಸ್ತೂಲ್ ಶೂಟರ್‌ಗಳಿಗೆ ನಮ್ಮಲ್ಲಿ ಕಲಿಕಾ ಕೇಂದ್ರವಿಲ್ಲ: ಪ್ರಕಾಶ್ ನಂಜಪ್ಪಗೆ ಪಿಸ್ತೂಲ್ ಶೂಟಿಂಗ್ ಅಕಾಡೆಮಿ ತೆರೆಯುವ ಕನಸು ಬಹಳ ವರ್ಷದಿಂದಲೂ ಇದೆ. ಆದರೆ ಎಲ್ಲಿಯೂ ಅವರಿಗೆ ಹೇಳಿಕೊಳ್ಳಲು ಅವಕಾಶ ಸಿಕ್ಕಿರಲಿಲ್ಲ. ಅರ್ಜುನ ಪ್ರಶಸ್ತಿಗೆ ಅಧಿಕೃತವಾಗಿ ಆಯ್ಕೆಯಾದ ಬಳಿಕ ಅವರ ಆಸೆ ಗರಿಗೆದರಿದೆ. ತಮ್ಮ ಕನಸಿನ ಬಗ್ಗೆ ಅವರು ಹಂಚಿಕೊಂಡಿದ್ದು ಹೀಗೆ. ರಾಜ್ಯದಲ್ಲಿ ಒಂದೊಳ್ಳೆ ಪಿಸ್ತೂಲ್ ಶೂಟಿಂಗ್ ತರಬೇತಿ ಕೇಂದ್ರವಿಲ್ಲ. ತರಬೇತಿ ಪಡೆಯಲು ನಾನು ಬಹಳ ಕಷ್ಟಪಟ್ಟೆ. ಇಲ್ಲಗಳ ನಡುವೆಯೂ ದೇಶಕ್ಕಾಗಿ ಏಷ್ಯನ್ ಗೇಮ್ಸ್ ಕಂಚು, ಕಾಮ ನ್ವೆಲ್ತ್ ಬೆಳ್ಳಿ
ಹಾಗೂ ವಿಶ್ವಕಪ್‌ನಲ್ಲಿ ಕಂಚಿನ ಪದಕ ಗೆದ್ದೆ. ರಾಜ್ಯದಲ್ಲಿ ಅನೇಕ ಪ್ರತಿಭಾವಂತರಿದ್ದಾರೆ. ಅವರಿಗೆಲ್ಲ ಸದುಪಯೋಗ ವಾಗುವಂತಹ ಪಿಸ್ತೂಲ್ ಅಕಾಡೆಮಿ ಆರಂಭಿಸಬೇಕು ಎನ್ನುವುದು ನನ್ನ ನಿರ್ಧಾರ ಎಂದು ಪ್ರಕಾಶ್ ತಿಳಿಸಿದರು.
ಯಾವಾಗ ಅಕಾಡೆಮಿ ಆರಂಭ?: 2020ಕ್ಕೆ ಅಕಾ ಡೆಮಿ ಆರಂಭಿಸಲು ಚಿಂತಿಸಿದ್ದೇನೆ. ಇದಕ್ಕೂ ಮೊದಲು ಕಾಮನ್ವೆಲ್ತ್, ಏಷ್ಯಾಡ್ ನಡೆಯಲಿದೆ. ಕೊನೆಯದಾಗಿ ವಿಶ್ವ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳಲಿದ್ದೇನೆ. ಬಳಿಕ ನಿವೃತ್ತಿ ತೆಗೆದುಕೊಳ್ಳಲಿದ್ದೇನೆ. ಒಟ್ಟಾರೆ ಮೂರು ವರ್ಷ ಶೂಟಿಂಗ್ ಬಳಿಕ ನಿವೃತ್ತಿಯಾಗುವೆ ಎಂದು ಪ್ರಕಾಶ್ ನಂಜಪ್ಪ ತಿಳಿಸಿದರು.
ಸರ್ಕಾರಕ್ಕೆ ಮನವಿ ಸಲ್ಲಿಸುವೆ: ಅಕಾಡೆಮಿ ಸುಸಜ್ಜಿತ ವಾಗಿರಬೇಕು. ಎಲ್ಲಕ್ಕಿಂತ ಮೊದಲು ಅಕಾಡೆಮಿ ತೆರೆಯಲು ಜಮೀನಿನ ವ್ಯವಸ್ಥೆ ಆಗಬೇಕು. ಸರ್ಕಾರಕ್ಕೆ ಮೊದಲು ಮನವಿ ಸಲ್ಲಿಸುವೆ. ಸೂಕ್ತ ಬೆಂಬಲ ಸಿಗುವ ಭರವಸೆ ಇದೆ ಎಂದು ಪ್ರಕಾಶ್ ನಂಜಪ್ಪ ತಿಳಿಸಿದರು.
ಬಡ ಪ್ರತಿಭಾವಂತರಿಗೆ ಉಚಿತ ಅವಕಾಶ
ಇಂದು ಕ್ರೀಡೆ ವ್ಯಾಪಾರವಾಗಿದೆ. ವಾರಕ್ಕಿಷ್ಟು ಅಂತ ದುಭಾರಿ ಶುಲ್ಕ ವಿಧಿಸಿ ಹಣ ಕೊಳ್ಳೆ ಹೊಡೆಯುವ ಅನೇಕ ಅಕಾಡೆಮಿಗಳಿವೆ. ಇದರಿಂದ ಮಧ್ಯಮ ಹಾಗೂ ಬಡತನದ ಕುಟುಂಬದ ಪ್ರತಿಭಾವಂತ ಕ್ರೀಡಾಪಟುಗಳಿಗೆ ತರಬೇತಿ ಕೈಗೆಟುಕುತ್ತಿಲ್ಲ. ಇದನ್ನರಿತೆ ಪ್ರಕಾಶ್ ನಂಜಪ್ಪ ಹೊಸದೊಂದು ಚಿಂತನೆ ನಡೆಸಿದ್ದಾರೆ. ಕ್ರೀಡಾಪಟು ಪ್ರತಿಭಾವಂತನಾಗಿದ್ದರೆ ಸಾಕು. ಆತನಿಗೆ ಅಕಾಡೆಮಿ ವತಿಯಿಂದ ಉಚಿತ ಪಿಸ್ತೂಲ್ ತರಬೇತಿ ಸಿಗಲಿದೆ.
ಹೇಮಂತ್ ಸಂಪಾಜೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.