ಪ್ರೊ ಕಬಡ್ಡಿ: ಒಂದಂಕದಿಂದ ಗೆದ್ದ ಬೆಂಗಳೂರು
Team Udayavani, Dec 26, 2021, 11:50 PM IST
ಬೆಂಗಳೂರು: ಪ್ರೊ ಕಬಡ್ಡಿ ಕೂಟದಲ್ಲಿ ಬೆಂಗಳೂರು ಬುಲ್ಸ್ ಸತತ ಎರಡನೇ ಜಯ ಸಾಧಿಸಿದೆ. ರವಿವಾರ ನಡೆದ ಪಂದ್ಯದಲ್ಲಿ ಅದು ಬೆಂಗಾಲ್ ವಾರಿಯರ್ಸ್ ಎದುರು ಕೇವಲ ಒಂದು ಅಂಕದ ಅಂತರದಿಂದ ಗೆದ್ದು ಬಂದಿತು. ಪಂದ್ಯದ ಮೊದಲ ನಿಮಿಷದಿಂದ ಹಿಡಿದು ಅಂತಿಮ ನಿಮಿಷದವರೆಗೆ ನಿಕಟ ಹಣಾಹಣಿ ಕಂಡುಬಂತು.
ಮೊದಲ 20 ನಿಮಿಷ ಮುಗಿದಾಗ ಬೆಂಗಳೂರು ಬುಲ್ಸ್ 18, ಬೆಂಗಾಲ್ 17 ಅಂಕ ಗಳಿಸಿತ್ತು. ಬೆಂಗಳೂರು ನಾಯಕ ಪವನ್ ಸೆಹ್ರಾವತ್ 20 ದಾಳಿ ನಡೆಸಿ 15 ಅಂಕ ಗಳಿಸಿದರು. ಎದುರಾಳಿಗಳನ್ನು ಔಟ್ ಮಾಡಿ 10 ಅಂಕ, ಬೋನಸ್ ರೂಪದಲ್ಲಿ 5 ಅಂಕ ಪಡೆದರು. ಇದು ಬೆಂಗಳೂರಿನ ಜಯದಲ್ಲಿ ಮಹತ್ವದ ಪಾತ್ರ ವಹಿಸಿತು. ಬುಲ್ಸ್ ಪರ ಮಿಂಚಿದ ಇನ್ನೊಬ್ಬ ದಾಳಿಗಾರ ಚಂದ್ರನ್ ರಂಜಿತ್. ಅವರು 12 ಬಾರಿ ಎದುರಾಳಿಗಳ ಕೋಟೆಯೊಳಗೆ ಏರಿಹೋಗಿ 6 ಅಂಕ ಗಳಿಸಿದರು.
ಬೆಂಗಾಲ್ ಪರ ಮಣಿಂದರ್ ಸಿಂಗ್ ಅದ್ಭುತ ದಾಳಿ ಸಂಘಟಿಸಿದರು. ಒಟ್ಟು 19 ಬಾರಿ ಬೆಂಗಳೂರು ಕೋಟೆಗೆ ನುಗ್ಗಿದರು. 17 ಅಂಕ ಗಳಿಸಿದರು.
ರೋಚಕ ಟೈ :
ಗುಜರಾತ್ ಜೈಂಟ್ಸ್ ಮತ್ತು ದಬಾಂಗ್ ದಿಲ್ಲಿ ನಡುವಿನ ಮೊದಲ ಪಂದ್ಯ ಅತ್ಯಂತ ರೋಚಕವಾಗಿ ನಡೆದು 24-24 ಅಂಕಗಳಿಂದ ಸಮನಾಯಿತು. ತನ್ನ ಅಂಕವನ್ನು 13ಕ್ಕೆ ಏರಿಸಿಕೊಂಡ ದಿಲ್ಲಿ ಅಗ್ರಸ್ಥಾನದಲ್ಲೇ ನೆಲೆಸಿತು. ದಿಲ್ಲಿ ಪರ ರೈಡರ್ ನವೀನ್ ಕುಮಾರ್ ಮತ್ತೂಂದು ಉತ್ಕೃಷ್ಟ ಪ್ರದರ್ಶನ ನೀಡಿ 11 ಅಂಕ ತಂದಿತ್ತರು. ಗುಜರಾತ್ ಪರ ರೈಡರ್ ರಾಕೇಶ್ ನರ್ವಾಲ್ ಆಟ ಉತ್ತಮ ಮಟ್ಟದಲ್ಲಿತ್ತು. ಅವರು 9 ಅಂಕ ಸಂಪಾದಿಸಿದರು. ಡಿಫೆಂಡರ್ ಸುನೀಲ್ ಕುಮಾರ್ ಮತ್ತು ಆಲ್‌ರೌಂಡರ್ ರಾಕೇಶ್ ತಲಾ 4 ಅಂಕ ಗಳಿಸಿದರು.
ಇಂದಿನ ಪಂದ್ಯಗಳು :
ತಮಿಳ್ vs ಮುಂಬಾ ಆರಂಭ: 7.30
ಯೋಧಾ vs ಜೈಪುರ್ ಆರಂಭ: 8.30
ಪ್ರಸಾರ: ಸ್ಟಾರ್ ನ್ಪೋರ್ಟ್ಸ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.