ಐಪಿಎಲ್ ಹರಾಜು: ಬೆಂಗಳೂರು ತಂಡಕ್ಕೆ ಈ ಮೂವರು ಬಂದರೆ ”ಈ ಸಲ ಕಪ್ ನಮ್ದೇ”


Team Udayavani, Dec 14, 2019, 3:13 PM IST

RCB

ಬೆಂಗಳೂರು: ಕಲರ್ ಫುರ್ ಕ್ರಿಕೆಟ್ ಹಬ್ಬ ಇಂಡಿಯನ್ ಪ್ರೀಮಿಯರ್ ಲೀಗ್ ನ 2020ರ ಆವೃತ್ತಿಯ ಹರಾಜು ಪ್ರಕ್ರಿಯೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಎಲ್ಲಾ ಎಂಟು ತಂಡಗಳು ಉತ್ತಮ ಆಟಗಾರರನ್ನು ಖರೀದಿಸಲು ಯೋಜನೆ ಹಾಕಿಕೊಂಡಿದೆ.

ಪ್ರತಿ ವರ್ಷ ಕಪ್ ಗೆಲ್ಲಲೇ ಬೇಕೆಂಬ ಆಲೋಚನೆಯೊಂದಿಗೆ ಬಲಿಷ್ಟ ತಂಡವನ್ನೇ ಕಟ್ಟುವ ರಾಯಲ್ ಚಾಲೆಂಜ್ ಬೆಂಗಳೂರು ಫ್ರಾಂಚೈಸಿ ಈ ಬಾರಿಯೂ ಉತ್ತಮ ಆಟಗಾರರತ್ತ ಕಣ್ಣಿಟ್ಟಿದೆ.

ಮುಂದಿನ ಐಪಿಎಲ್ ನ ಮೊದಲು ಆರ್ ಸಿಬಿ 12 ಆಟಗಾರರನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಪ್ರಮುಖರಾಗಿರುವರೆಂದರೆ ನಥನ್  ಕೌಲ್ಟರ್ ನೈಲ್, ಶಿಮ್ರನ್ ಹೆಟ್ಮೈರ್, ಡೇಲ್ ಸ್ಟೈನ್, ಟಿಮ್ ಸೌಥಿ.

ಹರಾಜಿನಲ್ಲಿ ಆರ್ ಸಿಬಿಗೆ 27.90 ಕೋಟಿ ರೂಪಾಯಿ ಖರ್ಚು ಮಾಡುವ ಅವಕಾಶವಿದೆ. ಆರು ವಿದೇಶಿ ಆಟಗಾರರನ್ನು ಆರ್ ಸಿಬಿ ಖರೀದಿಸಬಹುದು.

ಈ ಬಾರಿ ಹರಾಜಿನಲ್ಲಿ ಆರ್ ಸಿಬಿ ಈ ಮೂವರು ಆಟಗಾರರನ್ನು ಖರೀದಿಸಬಹುದು

ಗ್ಲೆನ್ ಮ್ಯಾಕ್ಸವೆಲ್
ಆಸ್ಟ್ರೇಲಿಯಾದ ಬಲಿಷ್ಠ ಆಟಗಾರ ಗ್ಲೆನ್ ಮ್ಯಾಕ್ಸವೆಲ್. ಹೊಡೆಬಡಿ ಕೂಟಕ್ಕೆ ಹೇಳಿ ಮಾಡಿಸಿದಂತಹ ಶೈಲಿಯ ಗ್ಲೆನ್ ತನ್ನ ಬ್ಯಾಟಿಂಗ್ ನಿಂದ ಪಂದ್ಯದ ಚಿತ್ರಣವನ್ನೇ ಬದಲಿಸಬಲ್ಲಾತ.

ಆರ್ ಸಿಬಿಯ ವಿರಾಟ್, ಡಿವಿಲಿಯರ್ಸ್ ನಂತರ ಬ್ಯಾಟಿಂಗ್ ಗೆ ಸರಿಯಾದ ಆಟಗಾರನನ್ನು ಹುಡುಕುತ್ತಿರುವ ಆರ್ ಸಿಬಿಗೆ ಮ್ಯಾಕ್ಸ ವೆಲ್ ಸರಿಯಾಗಿ ಫಿಟ್ ಆಗಬಹುದು. ಸ್ಪಿನ್ ಬೌಲಿಂಗ್ ಮಾಡಬಲ್ಲವನಾದ ಕಾರಣ ಉತ್ತಮ ಆಲ್ ರೌಂಡರ್ ಆಗಿ,  ಕೊನೆಯ ಓವರ್ ಗಳಲ್ಲಿ ಹೊಡೆಬಡಿಯ ಆಟದಿಂದ ಫಿನಿಶರ್ ಆಗಿ ಆಡಬಹುದು.

ರಾಬಿನ್ ಉತ್ತಪ್ಪ
ಈ ಹಿಂದೆ ಆರ್ ಸಿಬಿ ಪರ ಆಡಿದ್ದ ಕನ್ನಡಿಗ ರಾಬಿನ್ ಉತ್ತಪ್ಪ ಮತ್ತೆ ತವರು ತಂಡಕ್ಕೆ ಆಡಬಹುದು. ಆರಂಭಿಕ ಆಟಗಾರರಾಗಿ ದೇವದತ್ತ ಪಡಿಕ್ಕಲ್ ಮತ್ತು ಪಾರ್ಥೀವ್ ಪಟೇಲ್ ತಂಡದಲ್ಲಿದ್ದರೂ ಇಬ್ಬರೂ ಎಡಗೈ ದಾಂಡಿಗರಾಗಿರುವ ಕಾರಣ ಫ್ರಾಂಚೈಸಿ ಉತ್ತಪ್ಪ ಕಡೆಗೆ ಮನಸ್ಸು ಮಾಡಬಹುದು. ರಾಬಿನ್ ಕೀಪರ್ ಕೂಡಾ ಆಗಿರುವುದು ಒಂದು ಅನುಕೂಲ. ಚಿನ್ನಸ್ವಾಮಿ ಅಂಗಳದ ಬಗ್ಗೆ ಚೆನ್ನಾಗಿ ಬಲ್ಲ ಉತ್ತಪ್ಪ ಆರ್ ಸಿಬಿಗೆ ಪ್ಲಸ್ ಆಗಬಹುದು.

ಪ್ಯಾಟ್ ಕಮಿನ್ಸ್
ಆಸ್ಟ್ರೇಲಿಯಾದ ಈ ವೇಗಿಯನ್ನು ಆರ್ ಸಿಬಿ ಖರೀದಿಸಿದರೆ ಬೌಲಿಂಗ್ ವಿಭಾಗ ಸದೃಢವಾಗುತ್ತದೆ. ಉಮೇಶ್ ಯಾದವ್, ಸೈನಿ, ಸಿರಾಜ್ ಜೊತೆಗೆ ಅನುಭವಿ ಪ್ಯಾಟ್ ಕಮಿನ್ಸ್ ಸೇರಿದರೆ ವೇಗದ ಬೌಲಿಂಗ್ ಆಟ್ಯಾಕ್ ಇನ್ನಷ್ಟು ಗಟ್ಟಿಯಾಗುತ್ತದೆ.  ಕಳೆದ 15 ತಿಂಗಳಿಂದ ಪ್ಯಾಟ್ ಅತ್ಯುತ್ತಮ ಫಾರ್ಮ್ ನಲ್ಲಿದ್ದು, ಸದ್ಯ ಟೆಸ್ಟ್ ಕ್ರಿಕೆಟ್ ನಲ್ಲಿ ನಂಬರ್ ವನ್ ಬೌಲರ್ ಆಗಿದ್ದಾರೆ. ವಿರಾಟ್ ಪಡೆಗೆ ಕಮಿನ್ಸ್ ಸೇರಿದರೆ ತಂಡದ ಬಲ ಹೆಚ್ಚುವುದಂತೂ ಗ್ಯಾರಂಟಿ.

ಟಾಪ್ ನ್ಯೂಸ್

1-sugama

Music; ಸುಗಮ ಸಂಗೀತಕ್ಕೆ ನವೋದಯ ಸಾಹಿತ್ಯ ಬುನಾದಿ

Ullala-ABVP

Mangalore: ಪರೀಕ್ಷಾ ಶುಲ್ಕ ಹೆಚ್ಚಳ ಖಂಡಿಸಿ ವಿವಿಯಲ್ಲಿ ಎಬಿವಿಪಿ ಪ್ರತಿಭಟನೆ

highcort dharwad

Minister K.J. George ಪುತ್ರನ ಅರ್ಜಿ: ಸರಕಾರಕ್ಕೆ ಹೈಕೋರ್ಟ್‌ ನೋಟಿಸ್‌

1-c-ss

IAS Transfer: ಅಧಿಕಾರಿ ಸಿ. ಶಿಖಾ ಕೇಂದ್ರ ಸೇವೆಗೆ ನಿಯುಕ್ತಿ

Darshan (2)

Darshan ವಿರುದ್ಧ ಸುಪ್ರೀಂನಲ್ಲಿ ಮೇಲ್ಮನವಿ: ಬಿ. ದಯಾನಂದ್‌

1-qaaa

T20; ಸಂಜು, ತಿಲಕ್‌ ಶತಕ ವೈಭವ: ದಕ್ಷಿಣ ಆಫ್ರಿಕಾದಲ್ಲಿ ಭಾರತ ಸರಣಿ ವಿಕ್ರಮ

Malai

Mangaluru: ಮಳಲಿ ಮಸೀದಿ ವಿವಾದ: ವಿಶ್ವ ಹಿಂದೂ ಪರಿಷತ್‌ ಅರ್ಜಿ ತಿರಸ್ಕೃತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qaaa

T20; ಸಂಜು, ತಿಲಕ್‌ ಶತಕ ವೈಭವ: ದಕ್ಷಿಣ ಆಫ್ರಿಕಾದಲ್ಲಿ ಭಾರತ ಸರಣಿ ವಿಕ್ರಮ

Pro Kabaddi League: ಪಾಟ್ನಾ ಪೈರೆಟ್ಸ್‌ ಪರಾಕ್ರಮPro Kabaddi League: ಪಾಟ್ನಾ ಪೈರೆಟ್ಸ್‌ ಪರಾಕ್ರಮ

Pro Kabaddi League: ಪಾಟ್ನಾ ಪೈರೆಟ್ಸ್‌ ಪರಾಕ್ರಮ

up

Ranji match: ಉತ್ತರಪ್ರದೇಶ ಬೃಹತ್‌ ಮೊತ್ತ ಗೆಲುವಿಗೆ ಕರ್ನಾಟಕ ಹೋರಾಟ

cricket: ಐಪಿಎಲ್‌ ಹರಾಜಿನಲ್ಲಿ 574 ಕ್ರಿಕೆಟಿಗರು

Cricket: ಐಪಿಎಲ್‌ ಹರಾಜಿನಲ್ಲಿ 574 ಕ್ರಿಕೆಟಿಗರು

ಏಷ್ಯಾಡ್‌ ಕಂಚಿನ ಪದಕ ವಿಜೇತ ಟೆನಿಸಿಗ ಪ್ರಜ್ಞೇಶ್ ಗುಣೇಶ್ವರನ್‌ ನಿವೃತ್ತಿ

Tennis: ಏಷ್ಯಾಡ್‌ ಕಂಚಿನ ಪದಕ ವಿಜೇತ ಟೆನಿಸಿಗ ಪ್ರಜ್ಞೇಶ್ ಗುಣೇಶ್ವರನ್‌ ನಿವೃತ್ತಿ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

1-sugama

Music; ಸುಗಮ ಸಂಗೀತಕ್ಕೆ ನವೋದಯ ಸಾಹಿತ್ಯ ಬುನಾದಿ

Ullala-ABVP

Mangalore: ಪರೀಕ್ಷಾ ಶುಲ್ಕ ಹೆಚ್ಚಳ ಖಂಡಿಸಿ ವಿವಿಯಲ್ಲಿ ಎಬಿವಿಪಿ ಪ್ರತಿಭಟನೆ

highcort dharwad

Minister K.J. George ಪುತ್ರನ ಅರ್ಜಿ: ಸರಕಾರಕ್ಕೆ ಹೈಕೋರ್ಟ್‌ ನೋಟಿಸ್‌

1-saaaa

ಮಧ್ಯವರ್ತಿಗಳಿಂದ ಮಾತ್ರ ‘ಸಕಾಲ’ಕ್ಕೆ ಸೇವೆ!

Farmer

Bagar Hukum ಅರ್ಜಿ ವಿಲೇವಾರಿ ಬಡ ರೈತರಲ್ಲಿ ಆಶಾವಾದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.