ಕೋಲ್ಕತಾ ಟೆಸ್ಟ್: ಮೋದಿ, ಹಸೀನಾಗೆ ಆಹ್ವಾನ
ಭಾರತ-ಬಾಂಗ್ಲಾದೇಶ ನಡುವಿನ ವರ್ಷಾಂತ್ಯದ ಟೆಸ್ಟ್ ಪಂದ್ಯ
Team Udayavani, Oct 17, 2019, 10:29 PM IST
ಕೋಲ್ಕತಾ: ವರ್ಷಾಂತ್ಯದ ಭಾರತ-ಬಾಂಗ್ಲಾದೇಶ ನಡುವಿನ ಕೋಲ್ಕತಾ ಟೆಸ್ಟ್ ಪಂದ್ಯವನ್ನು ವೀಕ್ಷಿಸಲು ಎರಡೂ ರಾಷ್ಟ್ರಗಳ ಪ್ರಧಾನಿಗಳಿಗೆ ಬಂಗಾಲ ಕ್ರಿಕೆಟ್ ಮಂಡಳಿ (ಕ್ಯಾಬ್) ಆಹ್ವಾನ ನೀಡಿದೆ.
ಸರಣಿಯ ಈ ದ್ವಿತೀಯ ಪಂದ್ಯ ನ. 22ರಿಂದ ಐತಿಹಾಸಿಕ ಈಡನ್ ಗಾರ್ಡನ್’ನಲ್ಲಿ ಆರಂಭವಾಗಲಿದ್ದು, ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರನ್ನು ಕ್ಯಾಬ್ ಆಹ್ವಾನಿಸಿದೆ. ಕ್ರಿಕೆಟ್ ಸಂಭ್ರಮ ಹೆಚ್ಚಿಸುವ ಉದ್ದೇಶದಿಂದ ಕ್ಯಾಬ್ ಇಂಥದೊಂದು ನಿರ್ಧಾರಕ್ಕೆ ಬಂದಿದೆ. ಹಾಗೆಯೇ ಬಂಗಾಲದವರೇ ಆದ ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗಿ ಆಯ್ಕೆಯಾಗುವುದರಿಂದ ಈ ಸಂಭ್ರಮ ಹೆಚ್ಚಿಸುವುದೂ ರಾಜ್ಯ
ಕ್ರಿಕೆಟ್ ಮಂಡಳಿಯ ಉದ್ದೇಶವಾಗಿದೆ.
ಕೇವಲ ಪ್ರಧಾನಿಗಳಷ್ಟೇ ಅಲ್ಲ, ಈ ಪಂದ್ಯವನ್ನು ವೀಕ್ಷಿಸಲು ಇನ್ನೂ ಕೆಲವು ಪ್ರಮುಖರನ್ನು ಆಹ್ವಾನಿಸಲು ಕ್ಯಾಬ್ ನಿರ್ಧರಿಸಿದೆ. ಆದರೆ ಈ ಪಟ್ಟಿಯಿನ್ನೂ ಅಂತಿಮಗೊಂಡಿಲ್ಲ. ಈ ಪಂದ್ಯದ ಮೊದಲ ದಿನ ಜಗಮೋಹಮ್ ದಾಲಿ¾ಯಾ ಮೆಮೋರಿಯಲ್ ಲೆಕ್ಚರ್’ ನಡೆಯಲಿದ್ದು, ಸೌರವ್ ಗಂಗೂಲಿ ಮಾತಾಡಲಿದ್ದಾರೆ. ಈಡನ್ ಗಾರ್ಡನ್‌ನಲ್ಲಿ ನೂತನವಾಗಿ ನಿರ್ಮಿಸಲಾದ ಒಳಾಂಗಣ ಸೌಲಭ್ಯವನ್ನೂ ಈ ಸಂದರ್ಭದಲ್ಲಿ ಉದ್ಘಾಟಿಸಲಾಗುವುದು.
ಪಾಕ್ ಪಂದ್ಯಕ್ಕೆ ಬಂದ ಅತಿಥಿಗಳು
ಭಾರತದಲ್ಲಿ ನಡೆದ ಕ್ರಿಕೆಟ್ ಪಂದ್ಯವನ್ನು ಎರಡೂ ದೇಶಗಳ ಪ್ರಧಾನಿಗಳು ವೀಕ್ಷಿಸಿದ ಕೊನೆಯ ನಿದರ್ಶನ 2011ರ ವಿಶ್ವಕಪ್‌ನಲ್ಲಿ ಕಾಣಸಿಗುತ್ತದೆ. ಅಂದಿನ ಭಾರತ-ಪಾಕಿಸ್ತಾನ ನಡುವಿನ ಹೈ ವೋಲ್ಟೆàಜ್ ಸೆಮಿಫೈನಲ್ ಮುಖಾಮುಖೀ ವೇಳೆ ಭಾರತದ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಪಾಕ್ ಪ್ರಧಾನಿ ಯೂಸುಫ್ ರಝ ಗಿಲಾನಿ ಮೊಹಾಲಿ ಸ್ಟೇಡಿಯಂಗೆ ಆಗಮಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Thiruvananthapuram: ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ, ಮಂಡಲ ಪೂಜೆ ಶುರು
Maharashtra: ಲೈಂಗಿಕ ಕಿರುಕುಳ ನೀಡುವವರ ಪರ ಬಿಜೆಪಿ ಪ್ರಚಾರ: ಉದ್ಧವ್ ಠಾಕ್ರೆ
Congress: ರಾಹುಲ್‌ಗೆ ಸಂವಿಧಾನದ ಎಬಿಸಿ ಕೂಡ ಗೊತ್ತಿಲ್ಲ: ಸಚಿವ ಜೆ.ಪಿ.ನಡ್ಡಾ ಟೀಕೆ
Maharashtra Election: ಮಲ್ಲಿಕಾರ್ಜುನ ಖರ್ಗೆ ಬಳಿಕ ಯೋಗಿ ವಿರುದ್ಧ ಶರದ್ ಪವಾರ್ ಟೀಕೆ
Rahul Gandhi; ಕಾಪ್ಟರ್ ಟೇಕಾಫ್ ವಿಳಂಬ: ಕಾಂಗ್ರೆಸ್‌ನಿಂದ ಆಕ್ಷೇಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.