ಅಥ್ಲೀಟ್ ಮಾರಿಯಾ ಒಲಿಂಪಿಕ್ಸ್ ಬೆಳ್ಳಿ ಪದಕ ಹರಾಜಿಗಿಟ್ಟಿದ್ದೇಕೆ ?
Team Udayavani, Aug 20, 2021, 5:07 PM IST
ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿರುವ ಪೋಲ್ಯಾಂಡ್‌ನ ಅಥ್ಲೀಟ್ ಮಾರಿಯಾ ಆ್ಯಂಡ್ರೆಜಿಕ್ ಆ ಪದಕವನ್ನು ಹರಾಜಿಗಿಟ್ಟಿದ್ದಾರೆ. ಅವರ ಈ ನಿರ್ಧಾರಕ್ಕೆ ಕಾರಣ ಎಂಟು ತಿಂಗಳ ಒಂದು ಪುಟ್ಟ ಮಗು.
ಮಿಲೋಝೆಕ್ ಮಲಿಸಾ ಹೆಸರಿನ ಮಗು ಹೃದಯ ಸಂಬಂಧಿ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಕೋಟ್ಯಂತರ ರೂಪಾಯಿ ಅಗತ್ಯವಿದೆ. ಮಗುವಿನ ಪೋಷಕರು ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದು, ಸಹಾಯ ಧನ ನೀಡುವಂತೆ ಕೇಳಿಕೊಂಡಿದ್ದಾರೆ. ಇದಕ್ಕೆ ಸ್ಪಂದಿಸಿರುವ ಮಾರಿಯಾ ತನ್ನ ಚೊಚ್ಚಲ ಪದಕವನ್ನು ಹರಾಜಿಗಿಟ್ಟು, ಅದರಿಂದ ಬಂದಂತಹ ಹಣವನ್ನು ಮಗುವಿನ ಚಿಕಿತ್ಸೆಗೆ ಭರಿಸಿದ್ದಾರೆ.
ಮಾರಿಯಾ ಅವರು ಹರಾಜಿಗಿಟ್ಟಿರುವ ಬೆಳ್ಳಿ ಪದಕವನ್ನು ಪೋಲಿಶ್ ಸೂಪರ್ ಮಾರ್ಕೆಟ್ ಚೈನ್ ಝಬ್ಕಪೊಲ್ಸ್ಕ ಗೆದ್ದಿದೆ. 92,96,281 ರೂ. ಮೌಲ್ಯದ ಬಿಡ್ಡನ್ನು ಝಬ್ಕಪೊಲ್ಸ್ಕ ಗೆದ್ದಿದೆ. ಆದರೆ ಮಾನವೀಯತೆ ಮೆರೆದಿರುವ ಮಾರ್ಕೆಟಿಂಗ್ ಸಂಸ್ಥೆ, ಬಿಡ್ ಮೂಲಕ ಗೆದ್ದಿರುವ ಆ್ಯಂಡ್ರೆಜಿಕ್ ಬೆಳ್ಳಿ ಪದಕವನ್ನು ಮತ್ತೆ ಅವರಿಗೆ ವಾಪಸ್ ಮಾಡಲು ಬಯಸಿದೆ. ಬಿಡ್‌ನ ಹಣವನ್ನು ಮಿಲೋಝಕ್ ಚಿಕಿತ್ಸೆಗೆ ಬಳಸಲು ಝಬ್ಕಪೊಲ್ಸ್ಕ ನಿರ್ಧರಿಸಿದೆ.
ಇನ್ನು ಜಾವೆಲಿನ್ ಥ್ರೋ ಪಟು ಮಾರಿಯಾ ಆ್ಯಂಡ್ರೆಜಿಕ್ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚೊಚ್ಚಲ ಬಾರಿಗೆ ಒಲಿಂಪಿಕ್ಸ್ ಪದಕ ಗೆದ್ದಿದ್ದರು. ಮತ್ತೊಂದು ವಿಶೇಷ ಏನೆಂದರೆ ಮಾರಿಯಾ ಅವರು ಕ್ಯಾನ್ಸರ್ ವಿರುದ್ಧ ಗೆಲುವು ಪಡೆದವರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್ನ ಅತ್ಯುನ್ನತ ಗೌರವ ಪ್ರದಾನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
Sheikh Hasina ಅವಧಿಯಲ್ಲಾದ ಅಪಹರಣಗಳಿಗೆ ಭಾರತ ಕುಮ್ಮಕ್ಕು: ಬಾಂಗ್ಲಾ ವರದಿ
Meditation; ಜಾಗತಿಕ ಶಾಂತಿ, ಏಕತೆಗೆ ಧ್ಯಾನ ಮುಖ್ಯ ಸಾಧನ: ಶ್ರೀ ಶ್ರೀ ರವಿಶಂಕರ್
Israel ಮೇಲೆ ದಾಳಿಗೆ ಇರಾನ್ನಿಂದ ಮಕ್ಕಳ ಬಳಕೆ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.