ಟಿ20 ಸರಣಿ; ವನಿತಾ ಕ್ರಿಕೆಟ್ ತಂಡ ಪ್ರಕಟ: ಗಾಯಾಳು ಪೂಜಾ ಹೊರಕ್ಕೆ
Team Udayavani, Dec 2, 2022, 11:59 PM IST
ಹೊಸದಿಲ್ಲಿ: ಪ್ರವಾಸಿ ಆಸ್ಟ್ರೇಲಿಯ ವಿರುದ್ಧ ಡಿ. 9ರಿಂದ ಮುಂಬಯಿ ಯಲ್ಲಿ ಆರಂಭವಾಗಲಿರುವ 5 ಪಂದ್ಯಗಳ ಟಿ20 ಸರಣಿಗೆ ಭಾರತದ ವನಿತಾ ಕ್ರಿಕೆಟ್ ತಂಡವನ್ನು ಪ್ರಕಟಿಸಲಾಗಿದೆ. ಎಡಗೈ ಪೇಸ್ ಬೌಲರ್ ಅಂಜಲಿ ಸರ್ವಾಣಿ ಈ ತಂಡದ ಹೊಸಮುಖವಾಗಿದ್ದಾರೆ. ಗಾಯಾಳು ಆಲ್‌ರೌಂಡರ್ ಪೂಜಾ ವಸ್ತ್ರಾಕರ್ ಅವರನ್ನು ಆಯ್ಕೆಗೆ ಪರಿಗಣಿಸಲಾಗಿಲ್ಲ.
ಆಂಧ್ರದವರಾದ 25 ವರ್ಷದ ಅಂಜಲಿ ಸರ್ವಾಣಿ ವನಿತಾ ಚಾಲೆಂಜರ್ ಸರಣಿಯಲ್ಲಿ ಭಾರತ “ಎ’ ತಂಡದ ಪರ ಉತ್ತಮ ಬೌಲಿಂಗ್ ನಿರ್ವಹಣೆ ತೋರಿದ್ದರು. ಮಹಾರಾಷ್ಟ್ರದ ಲೆಗ್‌ಸ್ಪಿನ್ ಆಲ್‌ರೌಂಡರ್ ದೇವಿಕಾ ವೈದ್ಯ 4 ವರ್ಷ ಬಳಿಕ ಟೀಮ್ ಇಂಡಿಯಾ ಪ್ರವೇಶಿಸಿರುವುದು ಈ ತಂಡದ ಅಚ್ಚರಿ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.