ಪುಣೆ ಪಿಚ್ ಕಳಪೆ: ರೆಫ್ರಿ , ಬೆಂಗಳೂರು ಸ್ಪರ್ಧಾತ್ಮಕ
Team Udayavani, Mar 1, 2017, 11:22 AM IST
ಹೊಸದಿಲ್ಲಿ/ಬೆಂಗಳೂರು: ಭಾರತದ 333 ರನ್ನುಗಳ ಶೋಚನೀಯ ಸೋಲಿಗೆ ಕಾರಣವಾದ ಪುಣೆ ಪಿಚ್ ಎಲ್ಲ ದಿಕ್ಕುಗಳಿಂದಲೂ ತೀವ್ರ ಟೀಕೆಗೆ ಗುರಿಯಾಗುತ್ತಿದೆ. ಈಗ ಐಸಿಸಿ ಮ್ಯಾಚ್ ರೆಫ್ರಿ ಕ್ರಿಸ್ ಬ್ರಾಡ್ ಕೂಡ ಇದೊಂದು ಕಳಪೆ ಪಿಚ್ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಮೊದಲ ಟೆಸ್ಟ್ ಆತಿಥ್ಯ ವಹಿಸಿದ ಪುಣೆ ಹಾಗೂ ಬಿಸಿಸಿಐ ಪಾಲಿಗೆ ಇದೊಂದು ಕಹಿ ವಿದ್ಯಮಾನವಾಗಿ ಕಾಡುವುದರಲ್ಲಿ ಅನುಮಾನವಿಲ್ಲ.
ಮಂಗಳವಾರ ಪುಣೆ ಪಿಚ್ ಬಗ್ಗೆ ಬಿಸಿಸಿಐಗೆ ಮ್ಯಾಚ್ ರೆಫ್ರಿ ಕ್ರಿಸ್ ಬ್ರಾಡ್ ವರದಿ ಸಲ್ಲಿಸಿದ್ದಾರೆ. ಇದು ಅತ್ಯಂತ ಕಳಪೆ ಗುಣಮಟ್ಟದ ಪಿಚ್ ಆಗಿದ್ದು, ಹೀಗೇಕಾಯಿತು ಎಂಬುದಕ್ಕೆ 14 ದಿನಗಳಲ್ಲಿ ಸೂಕ್ತ ಉತ್ತರ ನೀಡ ಬೇಕೆಂದು ಸೂಚಿಸಿದ್ದಾರೆ.
“ಐಸಿಸಿ ಪಿಚ್ ನೀತಿಸಂಹಿತೆಯನ್ವಯ ರೆಫ್ರಿ ಸ್ಟುವರ್ಟ್ ಬ್ರಾಡ್ ಪುಣೆ ಪಿಚ್ ಬಗ್ಗೆ ತಮ್ಮ ವರದಿಯನ್ನು ಐಸಿಸಿಗೆ ಸಲ್ಲಿಸಿರುತ್ತಾರೆ. ಇದಕ್ಕೆ ಬಿಸಿಸಿಐ ಮುಂದಿನ 14 ದಿನಗಳಲ್ಲಿ ಸೂಕ್ತ ಉತ್ತರ ನೀಡಬೇಕಿದೆ’ ಎಂದು ಐಸಿಸಿ ಸೂಚಿಸಿದೆ.
ಇದಕ್ಕೆ ಸಂಬಂಧಿಸಿದ ಬಿಸಿಸಿಐ ಹೇಳಿಕೆಯನ್ನು ಐಸಿಸಿ ಜನರಲ್ ಮೆನೇಜರ್ (ಕ್ರಿಕೆಟ್) ಜೆಫ್ ಅಲ್ಲರ್‌ಡೈಸ್ ಮತ್ತು ಐಸಿಸಿ ಎಲೈಟ್ ಪ್ಯಾನಲ್‌ನ ಮ್ಯಾಚ್ ರೆಫ್ರಿ ರಂಜನ್ ಮದುಗಲ್ಲೆ ಪರಿಶೀಲಿಸಲಿದ್ದಾರೆ.
ಭಾರತಕ್ಕೆ “ಪಿಚ್ ಸಂಕಟ’ ಎದುರಾದದ್ದು ಇದೇ ಮೊದಲ ಸಲವೇನಲ್ಲ. 2015ರ ದಕ್ಷಿಣ ಆಫ್ರಿಕಾ ವಿರುದ್ಧ ನಾಗ್ಪುರದಲ್ಲಿ ನಡೆದ ತೃತೀಯ ಟೆಸ್ಟ್ ಮೂರೇ ದಿನದಲ್ಲಿ ಮುಗಿದಾಗಲೂ ಇಲ್ಲಿನ ಪಿಚ್ ಬಗ್ಗೆ ಅಪಸ್ವರವೆದ್ದಿತ್ತು; ಐಸಿಸಿ ಕೆಂಗಣ್ಣಿಗೆ ತುತ್ತಾ ಗಿತ್ತು. ಆ ಪಂದ್ಯವನ್ನು ಭಾರತ 124 ರನ್ನುಗಳಿಂದ ಗೆದ್ದಿತ್ತು.
ಐದು ದಿನಗಳ ಪಂದ್ಯ
ಪುಣೆ ಪಿಚ್ ಪ್ರಕರಣದ ಬಳಿಕ ಎಲ್ಲರ ದೃಷ್ಟಿ ಯೀಗ ಬೆಂಗಳೂರಿನ “ಎಂ. ಚಿನ್ನಸ್ವಾಮಿ ಸ್ಟೇಡಿಯಂ’ನತ್ತ ನೆಟ್ಟಿದೆ. ಇಲ್ಲಿ ಸರಣಿಯ ದ್ವಿತೀಯ ಟೆಸ್ಟ್ ನಡೆಯಲಿದೆ. ಈ ಕುರಿತು ಹೇಳಿಕೆಯೊಂದನ್ನು ನೀಡಿರುವ ಕೆಎಸ್‌ಸಿಎ, ಇದೊಂದು ಸ್ಪರ್ಧಾತ್ಮಕ ಪಿಚ್ ಆಗಿರಲಿದೆ; ಬ್ಯಾಟ್- ಬಾಲ್ ನಡುವೆ ಉತ್ತಮ ರೀತಿಯ ಹೋರಾಟ ಕಂಡುಬರಲಿದೆ ಎಂದಿದೆ.
“ಭಾರತ ತಂಡದಿಂದ ನಮಗೆ ಈವರೆಗೆ ಯಾವುದೇ ನಿರ್ದಿಷ್ಟ ಸೂಚನೆ ಬಂದಿಲ್ಲ. ಈ ಪಂದ್ಯ ಎರಡೂವರೆ-ಮೂರು ದಿನಗಳಲ್ಲಿ ಮುಗಿಯುವುದನ್ನು ನಾವು ಯಾವ ಕಾರಣಕ್ಕೂ ಬಯ ಸುವುದಿಲ್ಲ. ನಮ್ಮದು 5 ದಿನಗಳ ಯೋಜನೆ. ಹೀಗಾಗಿ ಬ್ಯಾಟಿಂಗ್, ಬೌಲಿಂಗಿಗೆ ಸಮಾನ ಅವ ಕಾಶ ಲಭಿಸುವಂಥ ಸ್ಪರ್ಧಾತ್ಮಕ ಪಿಚ್ ರೂಪಿಸ ಲಾಗುತ್ತಿದೆ’ ಎಂದು ರಾಜ್ಯ ಕ್ರಿಕೆಟ್ ಮಂಡಳಿ ಕಾರ್ಯದರ್ಶಿ ಸುಧಾಕರ ರಾವ್ ಹೇಳಿದ್ದಾರೆ.
“ಪಿಚ್‌ನಲ್ಲಿ ತೇವಾಂಶವನ್ನು ಉಳಿಸಿಕೊಳ್ಳ ಬೇಕಿದೆ. ಹೀಗಾಗಿ ನೀರು ಹಾಯಿಸುತ್ತಲೇ ಇದ್ದೇವೆ. ಪಂದ್ಯಕ್ಕೆ 2-3 ದಿನಗಳಿರುವಾಗಲೂ ಈ ಪ್ರಕ್ರಿಯೆ ಮುಂದುವರಿಯುತ್ತದೆ. ಬಳಿಕ ಪಿಚ್ ಗುಣಮಟ್ಟ ಗಮನಿಸಿ, ಬೇಕಿದ್ದರೆ ಮತ್ತೆ ಅವಲೋಕಿಸುತ್ತೇವೆ…’ ಎಂದು ರಾವ್ ಮಾಹಿತಿಯಿತ್ತರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್: ಭಾರತದ ಹಿಡಿತದಲ್ಲಿ ಪರ್ತ್ ಟೆಸ್ಟ್
FIP Padel: ಭಾರತದ ಮೊದಲ ಎಫ್‌ಐಪಿ ಪ್ಯಾಡಲ್ ಟೂರ್ನಮೆಂಟ್ ಆರಂಭ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
MUST WATCH
ಹೊಸ ಸೇರ್ಪಡೆ
IFFI 2024;ರಾಜಕೀಯ ಕಾರಣಗಳಿಂದಲೇ ಸಾವರ್ಕರ್‌ಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ:ರಣದೀಪ್ ಹೂಡಾ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.