ಕೋಚ್ ಆಯ್ಕೆ ಮುಂದೂಡಿಕೆ
Team Udayavani, Jul 11, 2017, 3:05 AM IST
ಮುಂಬಯಿ: ಬಹು ಕಾತುರದಿಂದ ಕಾಯಲ್ಪಡುತ್ತಿದ್ದ ಭಾರತ ಕ್ರಿಕೆಟ್ ತಂಡದ ಕೋಚ್ ಆಯ್ಕೆಯನ್ನು ಬಿಸಿಸಿಐ ಮುಂದೂಡಿದೆ. ಕೋಚ್ ಹುದ್ದೆಗೆ ಆಕಾಂಕ್ಷಿಗಳಾಗಿದ್ದ ರವಿಶಾಸಿŒ, ವೀರೇಂದ್ರ ಸೆಹವಾಗ್, ಟಾಮ್ ಮೂಡಿ, ರಿಚರ್ಡ್ ಫೈಬಸ್ ಸಂದರ್ಶನ ನಡೆಸಿದರೂ ಭಾರತ ಕ್ರಿಕೆಟ್ ನಾಯಕ ವಿರಾಟ್ ಕೊಹ್ಲಿ ಅಭಿಪ್ರಾಯ ಕೇಳಿ ಮುಂದುವರಿಯಲು ಬಿಸಿಸಿಐ ತೀರ್ಮಾನಿಸಿದೆ. ಜು.26ರೊಳಗೆ ಕೋಚ್ ಹೆಸರನ್ನು ಪ್ರಕಟಿಸುವುದಾಗಿ ಬಿಸಿಸಿಐನ ಉನ್ನತ ಸಲಹಾ ಸಮಿತಿ ಸದಸ್ಯ ಸೌರವ್ ಗಂಗೂಲಿ ತಿಳಿಸಿದ್ದಾರೆ.
ಕೋಚ್ ಆಯ್ಕೆಯನ್ನು ಬಿಸಿಸಿಐ ಗಂಭೀರ ವಾಗಿ ಪರಿಗಣಿಸಿದೆ. ಕೋಚ್ ಹೇಗೆ ಕೆಲಸ ಮಾಡುತ್ತಾ ರೆನ್ನುವುದನ್ನು ಕೊಹ್ಲಿ ಅರ್ಥ ಮಾಡಿಕೊಳ್ಳಬೇಕು, ಈ ಬಗ್ಗೆ ಅವರಿಗೆ ಮನದಟ್ಟು ಮಾಡಿಸುವುದಾಗಿ ಗಂಗೂಲಿ ಹೇಳಿದ್ದಾರೆ. ಈ ಮೂಲಕ ಮುಂದಿನ ದಿನಗಳಲ್ಲಿ ಭಿನ್ನಾಭಿಪ್ರಾಯವನ್ನು ಸಹಿಸುವುದಿಲ್ಲ ಎಂಬ ಸಂದೇಶವನ್ನು ಕೊಹ್ಲಿಗೆ ನೀಡಿದ್ದಾರೆ.
ಸೌರವ್ ಗಂಗೂಲಿ, ವಿವಿಎಸ್ ಲಕ್ಷ್ಮಣ್ ಕೋಚ್ ಆಕಾಂಕ್ಷಿಗಳ ಸಂದರ್ಶನ ನಡೆಸಿದರು. ಸಚಿನ್ ತೆಂಡುಲ್ಕರ್ ವೀಡಿಯೊ ಕಾನ್ಫರೆನ್ಸ್ ಮೂಲಕ ಭಾಗವಹಿಸಿದ್ದರು. ಬಿಸಿಸಿಐ ಸಲಹಾ ಸಮಿತಿ ಸಂದರ್ಶನ ಪ್ರಕ್ರಿಯೆಯನ್ನು ಮುಗಿಸಿದರೂ ತೀರ್ಮಾನಕ್ಕೆ ಬರಲು ಇನ್ನಷ್ಟು ಸಮಯ ಬೇಕೆಂಬ ಅಭಿಪ್ರಾಯಕ್ಕೆ ಬಂದಿದೆ.
2019ರವರೆಗೆ ಕೋಚ್ ಅವಧಿ: ಸದ್ಯ ಆಯ್ಕೆಯಾಗುವ ಕೋಚನ್ನು ದೀರ್ಘ ಕಾಲದವರೆಗೆ ಮುಂದುವರಿಸಲು ಬಿಸಿಸಿಐ ಬಯಸಿದೆ. 2019ರವರೆಗೆ ಅವರನ್ನು ಮುಂದುವರಿಸಲು ಬಯಸಿದೆ. ಈ ಮತ್ತೆ ಮತ್ತೂಂದು ಭಿನ್ನಾಭಿ ಪ್ರಾಯಕ್ಕೆ ಅದು ಸಿದ್ಧವಾಗಿಲ್ಲ. ಕೇವಲ ಆರೇ ತಿಂಗಳಲ್ಲಿ ಸಂಬಂಧ ಮುರಿದು ಬೀಳುವುದು ನಮಗೆ ಇಷ್ಟವಿಲ್ಲ ಎಂದು ಗಂಗೂಲಿ ತಿಳಿಸಿದ್ದಾರೆ.
ಸಂದರ್ಶನದಲ್ಲಿ ಕೊಹ್ಲಿ ಮೂಗು ತೂರಿಸಿಲ್ಲ: ಹಲವು ಆಕಾಂಕ್ಷಿಗಳ ಸಂದರ್ಶನ ನಡೆದರೂ ನಾಯಕ ವಿರಾಟ್ ಕೊಹ್ಲಿ ಈ ಪ್ರಕ್ರಿಯೆಯಿಂದ ದೂರವೇ ಉಳಿದಿದ್ದರು. ಈ ಸಂಬಂಧ ಅವರಿಗೆ ಮೆಚ್ಚುಗೆ ಸೂಚಿಸಬೇಕು ಸೌರವ್ ಗಂಗೂಲಿ ಹೇಳಿದ್ದಾರೆ. ಈ ಹಿಂದೆ ಕೊಹ್ಲಿ ತರಬೇತಿ ಪ್ರಕ್ರಿಯೆಯಲ್ಲಿ ಕೈಯಾಡಿಸಿದ್ದಾರೆ, ರವಿಶಾಸಿŒ ಬೇಕೆಂದು ಒತ್ತಾಯಿಸಿದ್ದಾರೆ ಎನ್ನಲಾಗಿತ್ತು.
ಭಿನ್ನಮತವೇ ಮುಂದೂಡಿಕೆಗೆ ಕಾರಣ?
ಕೋಚ್ ಆಯ್ಕೆ ಮುಂದೂಡಲು ಕಾರಣವೇ ನೆಂಬ ಬಗ್ಗೆ ಮಾಹಿತಿ ಹೊರಬಿದ್ದಿಲ್ಲ. ಆದರೆ ಸಚಿನ್, ಸೌರವ್, ಲಕ್ಷ್ಮಣ್ ನೇತೃತ್ವದ ಆಯ್ಕೆ ಸಮಿತಿಗೆ ಈ ಬಗ್ಗೆ ಕೆಲವು ಗೊಂದಲಗಳಿವೆ. ಆದ್ದರಿಂದ ಅಂತಿಮ ನಿರ್ಧಾರಕ್ಕೆ ಬರಲಾಗಿಲ್ಲ ಎಂದು ಊಹಿಸಲಾಗಿಲ್ಲ. ಎಂದಿನಂತೆ ರವಿಶಾಸಿŒ ಆಯ್ಕೆಗೆ ಸಚಿನ್ ತೆಂಡುಲ್ಕರ್ ಬೆಂಬಲ ನೀಡಿದ್ದರೆ, ಈ ವಿಚಾರದಲ್ಲಿ ಗಂಗೂಲಿ ತುಸು ಅಸಮ್ಮತಿ ಹೊಂದಿದ್ದಾರೆ. ಆದರೆ ರವಿಶಾಸಿŒ ಬದಲು ಯಾರನ್ನು ಆಯ್ಕೆ ಮಾಡಬೇಕೆಂಬ ಇನ್ನೂ ಗೊಂದಲವುಳಿದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಭಾರತದ 21 ಸ್ಪರ್ಧಿಗಳು ಭಾಗಿ
Women’s Ashes Series: ಆಸ್ಟ್ರೇಲಿಯ-ಇಂಗ್ಲೆಂಡ್ ಬಿಗ್ ಫೈಟ್
Jaiswal: ಚಾಂಪಿಯನ್ಸ್ ಟ್ರೋಫಿಗೆ ಯಶಸ್ವಿ ಜೈಸ್ವಾಲ್; ಇಂಗ್ಲೆಂಡ್ ಸರಣಿಯಲ್ಲೇ ಪದಾರ್ಪಣೆ?
Yuzi Chahal: ಡಿವೋರ್ಸ್ ಸುದ್ದಿಯ ನಡುವೆ ಬೇರೆ ಯುವತಿ ಜತೆ ಕಾಣಿಸಿಕೊಂಡ ಚಾಹಲ್; ಯಾರೀಕೆ?
Team India: ಕೆಎಲ್, ಪಾಂಡ್ಯ, ಗಿಲ್ ಅಲ್ಲ.., ಚಾಂಪಿಯನ್ಸ್ ಟ್ರೋಫಿಗೆ ಈತನೇ ಉಪ ನಾಯಕ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Forest Department: ಇದ್ದಲ್ಲಿಯೇ ಅರಣ್ಯ ಅಪರಾಧಗಳ ದಾಖಲು: “ಗರುಡಾಕ್ಷಿ’ಗೆ ಚಾಲನೆ
Commission: 60 ಪರ್ಸೆಂಟ್ ಕಮಿಷನ್: ಎಚ್‌ಡಿಕೆ ವಿರುದ್ಧ ಮುಗಿಬಿದ್ದ ಆಡಳಿತ ಪಕ್ಷ
illegal Investigation: ಬಿಬಿಎಂಪಿ ಮುಖ್ಯ ಎಂಜಿನಿಯರ್ ಕಚೇರಿ ಮೇಲೆ ಇ.ಡಿ. ದಾಳಿ
Waqf Report: ಅಮಿತ್ ಶಾ ಅಂಗಳಕ್ಕೆ ಭಿನ್ನರ ವಕ್ಫ್ ವರದಿ: ಕಿರಣ್ ರಿಜಿಜು ಮೂಲಕ ಸಲ್ಲಿಕೆ
Udupi:ಗೀತಾರ್ಥ ಚಿಂತನೆ 149: ಜಗತ್ತಿನಲ್ಲಿ ಇಷ್ಟೊಂದು ವ್ಯತ್ಯಾಸವೇಕೆ? ಪ್ರಶ್ನೆಗುತ್ತರವಿಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.