ಟೆಸ್ಟ್ ಸರಣಿಯಿಂದ ಪ್ರದೀಪ್ ಹೊರಕ್ಕೆ
Team Udayavani, Jan 21, 2019, 12:30 AM IST
ಶ್ರೀಲಂಕಾ: ಸ್ನಾಯು ಸೆಳೆತಕ್ಕೆ ಸಿಲುಕಿರುವ ಶ್ರೀಲಂಕಾದ ಪೇಸ್ ಬೌಲರ್ ನುವಾನ್ ಪ್ರದೀಪ್ ಆಸ್ಟ್ರೇಲಿಯ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯಿಂದ ಹೊರಗುಳಿಯಲಿದ್ದಾರೆ. ಶ್ರೀಲಂಕಾ ಕ್ರಿಕೆಟ್ ಮಂಡಳಿ ರವಿವಾರ ಇದನ್ನು ದೃಢಪಡಿಸಿತು.
ಕ್ರಿಕೆಟ್ ಆಸ್ಟ್ರೇಲಿಯ ಇಲೆವೆನ್ ತಂಡದೆದುರಿನ ಅಭ್ಯಾಸ ಪಂದ್ಯದ ವೇಳೆ ಪ್ರದೀಪ್ ಈ ಸಮಸ್ಯೆಗೆ ಸಿಲುಕಿದರು. ಹೀಗಾಗಿ ಕೇವಲ ಎರಡೇ ಓವರ್ ಎಸೆದು ಹೊರನಡೆದಿದ್ದರು. ಸ್ಕ್ಯಾನಿಂಗ್ ವರದಿ ಇನ್ನಷ್ಟೇ ಕೈಸೇರಬೇಕಿದೆ. 2017ರ ಬಳಿಕ ಪ್ರದೀಪ್ ಟೆಸ್ಟ್ ಆಡಲು ಅಣಿಯಾಗಿದ್ದರು.
ಇದೇ ಪಂದ್ಯದ ವೇಳೆ ಫೀಲ್ಡಿಂಗ್ ಮಾಡುತ್ತಿದ್ದಾಗ ಕುಸಲ್ ಮೆಂಡಿಸ್ ಕೂಡ ಗಾಯಾಳಾಗಿದ್ದರು. ಆದರೆ ಅವರೀಗ ಫಿಟ್ ಆಗಿದ್ದಾರೆ.
ಸರಣಿಯ ಮೊದಲ ಟೆಸ್ಟ್ ಜ. 24ರಿಂದ ಬ್ರಿಸ್ಬೇನ್ನಲ್ಲಿ ಆರಂಭವಾಗಲಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.