2 ವರ್ಷದ ಬಳಿಕ ಸಿಡಿದ ವಿಶ್ವದಾಖಲೆಯ ಪ್ರಣವ್
Team Udayavani, Jan 8, 2018, 12:46 PM IST
ಮುಂಬಯಿ: ಯುವ ಸ್ಟಾರ್ ಬ್ಯಾಟ್ಸ್‌ಮನ್ ಪ್ರಣವ್ ಧನವಾಡೆ ಮುಂಬಯಿಯಲ್ಲಿ ನಡೆದ ಅಂತರ್ ಕಾಲೇಜ್ ಕ್ರಿಕೆಟ್ ಪಂದ್ಯದಲ್ಲಿ 236 ರನ್ ಸಿಡಿಸಿ ಗಮನ ಸೆಳೆದಿದ್ದಾರೆ. ಈ ಹಿಂದೆ ಪ್ರಣವ್ ಪಂದ್ಯವೊಂದರಲ್ಲಿ ಐತಿಹಾಸಿಕ, ಅಜೇಯ 1,009 ರನ್ ಬಾರಿಸಿ ಎಲ್ಲರನ್ನು ನಿಬ್ಬೆರಗಾಗಿಸಿದ್ದರು. ಈ ಸಾಧನೆಯ (ಜ. 5, 2016) 2ನೇ ವರ್ಷಾಚರಣೆ ದಿನದಂದೇ ಪ್ರಣವ್ ಪ್ರಣವ್ ಮತ್ತೂಂದು ಬ್ಯಾಟಿಂಗ್ ಸಾಧನೆಗೈದದ್ದು ಕಾಕತಾಳೀಯ!
ಮುಂಬಯಿಯ ಕ್ರಾಸ್ ಮೈದಾನದಲ್ಲಿ ನಡೆದ 45 ಓವರ್‌ಗಳ ಪಂದ್ಯದಲ್ಲಿ ಜುನ್‌ಜುನ್‌ವಾಲಾ ಕಾಲೇಜನ್ನು ಪ್ರತಿನಿಧಿಸಿದ್ದ ಪ್ರಣವ್, ಗುರುನಾನಕ್ ಕಾಲೇಜು ತಂಡದ ವಿರುದ್ಧ 236 ಬಾರಿಸಿ ಸಂಭ್ರಮಿಸಿದರು.
ಪ್ರಣವ್ ಅವರ ಡಬಲ್ ಸೆಂಚುರಿ ನೆರವಿನಿಂದ ಗುರುನಾನಕ್ ತಂಡಕ್ಕೆ 459 ರನ್‌ಗಳ ಕಠಿನ ಗುರಿ ನೀಡಿತ್ತು. ಆದರೆ ಗುರುನಾನಕ್ ತಂಡ ಬರೀ 60 ರನ್ನಿಗೆ ಮುಗ್ಗರಿಸಿ ಸೋಲೊಪ್ಪಿಕೊಂಡಿತು.
ಹಿನ್ನಡೆ ಅನುಭವಿಸಿದ್ದ ಧನವಾಡೆ
ಒತ್ತಡ ಮತ್ತು ಇನ್ನಿತರ ಕೆಲವು ವೈಯಕ್ತಿಕ ಕಾರಣಗಳಿಂದಾಗಿ ಸ್ವಲ್ಪ ದಿನ ಕ್ರೀಡೆಯಲ್ಲಿ ಹಿನ್ನೆಡೆ ಕಂಡಿದ್ದ ಪ್ರಣವ್, ನಿವೃತ್ತಿ ಬಗ್ಗೆಯೂ ಆಲೋಚಿ ಸಿದ್ದರು. ಈಗ ಕ್ರಿಕೆಟ್ ವಲಯದಲ್ಲಿ ಮತ್ತೆ ಹೊಸ ನಿರೀಕ್ಷೆಯನ್ನು ಹುಟ್ಟುಹಾಕಿದ್ದಾರೆ. 2016ರ ಜ. 5ರಂದು ಪ್ರಣವ್, ಅಂತರ್ ಶಾಲಾ ಎಚ್‌ಟಿ ಭಂಡಾರಿ ಕಪ್ ಕ್ರಿಕೆಟ್ ಪಂದ್ಯಾಟದಲ್ಲಿ ಔಟಾಗದೆ 1,009 ರನ್ ಬಾರಿಸಿ ವಿಶ್ವದಾಖಲೆ ನಿರ್ಮಿಸಿದ್ದರು.
“ನಾನೀಗ ಖುಷಿಗೊಂಡಿದ್ದೇನೆ. ಕ್ರೀಡೆಯಲ್ಲಿ ಹೊಸ ದೊಂದು ಆರಂಭವನ್ನು ಬಯಸಿದ್ದೇನೆ. ಭವಿಷ್ಯದ ಬಗ್ಗೆ ತುಂಬ ಯೋಚಿಸಿಲ್ಲ. ಆದರೆ ಆಟವನ್ನು ಆನಂದಿ ಸಲು ನಾನು ಬಯಸಿದ್ದೇನೆ’ ಎಂದಿದ್ದಾರೆ ಪ್ರಣವ್.
ಅಜೇಯ 1,009ರನ್ ಸಿಡಿಸಿದ ಬಳಿಕ ಪ್ರಣವ್‌ಗೆ ಅನೇಕ ಅವಕಾಶಗಳು ಲಭಿಸಿದ್ದವು. ಮುಂಬೈ ಕ್ರಿಕೆಟ್ ಅಸೋಸಿಯೇಷನ್ (ಎಂಸಿಎ) ಕೂಡ 5 ವರ್ಷಗಳ ಕಾಲ ತಿಂಗಳಿಗೆ 10,000 ರೂ. ವಿದ್ಯಾರ್ಥಿವೇತನ ನೀಡಲು ಆರಂಭಿಸಿತ್ತು. ಆದರೆ ಅನಂತರ ಪ್ರಣವ್ ಸಾಧನೆಯ ಹಿನ್ನೆಡೆ ಕಂಡಿದ್ದರು. ಈಗ ಪ್ರಣವ್ ತನ್ನದೇ ಸ್ಫೋಟಕ ಬ್ಯಾಟಿಂಗ್ ಮೂಲಕ ಕ್ರಿಕೆಟ್ ಮೈದಾನಕ್ಕೆ ಮರಳಿರುವುದಾಗಿ ಘೋಷಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka sports meet: ಈಜು ಸ್ಪರ್ಧೆ ಆರಂಭ; ದಕ್ಷಿಣ ಕನ್ನಡ ಮೇಲುಗೈ
Under-19 Women’s T20 World Cup: ವೈಷ್ಣವಿ ಹ್ಯಾಟ್ರಿಕ್, 5 ರನ್ನಿಗೆ 5 ವಿಕೆಟ್ ದಾಖಲೆ
Australia Open: 50ನೇ ಬಾರಿಗೆ ಗ್ರ್ಯಾನ್‌ಸ್ಲಾಮ್ ಸೆಮೀಸ್‌ಗೇರಿದ ಜೋಕೋ
Women’s ODI rankings: ಅಗ್ರಸ್ಥಾನಕ್ಕೆ ಮಂಧನಾ ಸನಿಹ
Rinku Singh: ತಂದೆಗೆ ಸೂಪರ್ ಬೈಕ್ ಗಿಫ್ಟ್ ನೀಡಿದ ರಿಂಕು ಸಿಂಗ್… ಬೆಲೆ ಎಷ್ಟು ಗೊತ್ತಾ?