ಐಪಿಎಲ್ ನಿಂದಲೂ ಹೊರಬಿದ್ದ ಕರ್ನಾಟಕದ ವೇಗಿ ಪ್ರಸಿಧ್ ಕೃಷ್ಣ
Team Udayavani, Feb 17, 2023, 3:19 PM IST
ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ ಪರ ಆಡುವ ಕರ್ನಾಟಕದ ಬಲಗೈ ವೇಗಿ ಪ್ರಸಿಧ್ ಕೃಷ್ಣ ಅವರು ಈ ಬಾರಿಯ ಐಪಿಎಲ್ ನಲ್ಲಿ ಆಡುವುದು ಕಷ್ಟ ಎನ್ನಲಾಗಿದೆ.
ಪ್ರಸಿದ್ಧ್ ಕೃಷ್ಣ ಅವರು ಕಳೆದ ಸೆಪ್ಟೆಂಬರ್ ನಲ್ಲಿ ಬೆನ್ನುನೋವಿಗೆ ಒಳಗಾಗಿದ್ದರು, ಇದರಿಂದಾಗಿ ಅವರು ದೀರ್ಘಕಾಲದವರೆಗೆ ಆಟದಿಂದ ಹೊರಗುಳಿಯಬೇಕಾಯಿತು. ನ್ಯೂಜಿಲೆಂಡ್ ಎ ವಿರುದ್ಧ ಭಾರತ ಎ ಮೂರು ಪಂದ್ಯಗಳ ಅನಧಿಕೃತ ಟೆಸ್ಟ್ ಸರಣಿಯ ಮುನ್ನಾದಿನ ಪ್ರಸಿಧ್ ಗಾಯಗೊಂಡಿದ್ದರು.
ಗುರುವಾರ 26 ವರ್ಷದ ಬಲಗೈ ವೇಗಿ ಪ್ರಸಿಧ್ ಟ್ವಿಟರ್ ನಲ್ಲಿ ತಾನು ಚೇತರಿಕೆಯ ಹಾದಿಯಲ್ಲಿದ್ದೇನೆ ಎಂದು ಹೇಳಿದ್ದಾರೆ.
ಪ್ರಸಿಧ್ ಕೃಷ್ಣ ಅವರು ಕೊನೆಯದಾಗಿ ಭಾರತ ತಂಡದ ಪರವಾಗಿ ಕಳೆದ ವರ್ಷದ ಆಗಸ್ಟ್ ನಲ್ಲಿ ಭಾರತದ ಜಿಂಬಾಬ್ವೆ ಪ್ರವಾಸದಲ್ಲಿ ಆಡಿದ್ದರು. ಒಟ್ಟಾರೆಯಾಗಿ, ಅವರು ಟೀಂ ಇಂಡಿಯಾ ಪರವಾಗಿ 14 ಏಕದಿನ ಪಂದ್ಯವಾಡಿದ್ದು 23.92 ರ ಸರಾಸರಿಯಲ್ಲಿ 25 ವಿಕೆಟ್ ಗಳನ್ನು ಗಳಿಸಿದ್ದಾರೆ.
Gutted to be missing out on so much cricket. Be back soon! ⏱️🏃 pic.twitter.com/jemAfvcTbC
— Prasidh Krishna (@prasidh43) February 16, 2023
ಸದ್ಯ ಪ್ರಸಿಧ್ ಗೆ ಇನ್ನೂ ಆರರಿಂದ ಎಂಟು ತಿಂಗಳ ವಿಶ್ರಾಂತಿ ಅಗತ್ಯವಿದೆ ಎಂದು ವರದಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
IND-W vs WI: ವನಿತೆಯರ ಏಕದಿನ ಮುಖಾಮುಖಿ
Ahmed Shehzad: ಭಾರತ-ಪಾಕ್ ಗಡಿಯಲ್ಲಿ ಕ್ರಿಕೆಟ್ ಸ್ಟೇಡಿಯಂಗೆ ಸಲಹೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.