ಪ್ರತಾಪ್ ಸಿಂಗ್ ತೋಮರ್ಗೆ ಟೋಕಿಯೋ ಒಲಿಂಪಿಕ್ಸ್ ಅರ್ಹತೆ
Team Udayavani, Nov 11, 2019, 1:19 AM IST
ದೋಹಾ (ಕತಾರ್): ಮುಂದಿನ ವರ್ಷದ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ಶೂಟರ್ಗಳ ಸಂಖ್ಯೆ 15ಕ್ಕೆ ಏರಿದೆ. ರವಿವಾರ ಯುವ ಶೂಟರ್ ಐಶ್ವರಿ ಪ್ರತಾಪ್ ಸಿಂಗ್ ತೋಮರ್ ಈ ಅದೃಷ್ಟವನ್ನು ತಮ್ಮದಾಗಿಸಿಕೊಂಡರು. ಬಳಿಕ ಸ್ಕೀಟ್ನಲ್ಲಿ ಅಂಗಜ್ ವೀರ್ ಸಿಂಗ್-ಮಿರಾಜ್ ಅಹ್ಮದ್ ಖಾನ್ ಕೂಡ ಒಲಿಂಪಿಕ್ಸ್ ಅರ್ಹತೆ ಸಂಪಾದಿಸಿದರು.
ದೋಹಾದಲ್ಲಿ ನಡೆಯುತ್ತಿರುವ 14ನೇ ಏಶ್ಯನ್ ಶೂಟಿಂಗ್ ಚಾಂಪಿಯನ್ಶಿಪ್ನ ಪುರುಷರ 50 ಮೀ. ರೈಫಲ್ 3 ಪೊಸಿಶನ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ತೋಮರ್ ಟೋಕಿಯೊ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.
8 ಸ್ಪರ್ಧಿಗಳ ಫೈನಲ್ನಲ್ಲಿ ತೋಮರ್ 449.1 ಅಂಕದೊಂದಿಗೆ ತೃತೀಯ ಸ್ಥಾನಿಯಾದರು. ಕೊರಿಯಾದ ಕಿಮ್ ಜೊಂಗಿಯುನ್ ಚಿನ್ನ (459.9), ಚೀನದ ಜೊಂಗಾವೊ ಜಾವೊ ಬೆಳ್ಳಿ ಪದಕ ಗೆದ್ದರು (459.1).
18ರ ಹರೆಯದ ಸಾಧಕ
18ರ ಹರೆಯದ ತೋಮರ್ ಅರ್ಹತಾ ಸುತ್ತಿನಲ್ಲಿ 1,168 ಅಂಕ ಸಂಪಾದಿಸಿ ಫೈನಲ್ ಪ್ರವೇಶಿಸಿದ್ದರು. ಆದರೆ ಭಾರತದ ಉಳಿದಿಬ್ಬರು ಸ್ಪರ್ಧಿಗಳಾದ ಚೈನ್ ಸಿಂಗ್ ಮತ್ತು ಪಾರುಲ್ ಕುಮಾರ್ ಕ್ರಮವಾಗಿ 17ನೇ ಹಾಗೂ 20ನೇ ಸ್ಥಾನಿಯಾಗಿ ಫೈನಲ್ ರೇಸ್ನಿಂದ ಹೊರಬಿದ್ದರು.
2012ರ ಲಂಡನ್ ಒಲಿಂಪಿಕ್ಸ್ನಲ್ಲಿ ಭಾರತದ 11 ಶೂಟರ್ಗಳು ಪಾಲ್ಗೊಂಡಿದ್ದರು. 2016ರ ರಿಯೋ ಒಲಿಂಪಿಕ್ಸ್ ವೇಳೆ ಈ ಸಂಖ್ಯೆ 12ಕ್ಕೆ ಏರಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.